ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾನುವಾರ ರಂಗಶಂಕರದಲ್ಲಿ 'ತುಘಲಕ್' ಪ್ರದರ್ಶನ

|
Google Oneindia Kannada News

ಬೆಂಗಳೂರು, ಅ. 18 : ಭಾರತದ ಶೇಷ್ಠ ನಾಟಕಗಳಲ್ಲೊಂದಾದ ಗಿರೀಶ್ ಕಾರ್ನಾಡರ 'ತುಘಲಕ್'ಒಂದು ವರ್ಷದಲ್ಲಿ ಮೂವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. 'ಸಮುದಾಯ' ಹವ್ಯಾಸಿ ರಂಗ ತಂಡ 33 ಮತ್ತು 34ನೇ ಪ್ರದರ್ಶನವನ್ನು ಅ.19ರ ಭಾನುವಾರ ಬೆಂಗಳೂರಿನ ರಂಗ ಶಂಕರದಲ್ಲಿ ಹಮ್ಮಿಕೊಂಡಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಂಗಶಂಕರದಲ್ಲಿ ನಡೆದ ಕಾರ್ನಾಡರ ನಾಟಕಗಳ ಉತ್ಸವದಲ್ಲಿ ಎಂಟು ಭಾಷೆಗಳಿಂದ ಎಂಟು ನಾಟಕಗಳು ಪ್ರದರ್ಶಿಸಲ್ಪಟ್ಟಿದ್ದು, 'ಸಮುದಾಯ ಬೆಂಗಳೂರು' ಕನ್ನಡದಲ್ಲಿ 'ತುಘಲಕ್' ನಾಟಕವನ್ನು ಆಯ್ಕೆ ಮಾಡಿಕೊಂಡಿತ್ತು.

ಅ.18, 2013 ರಂದು ಮೊದಲ ಪ್ರದರ್ಶನ ಕಂಡ ತುಘಲಕ್ ನಾಟಕವು, ಒಂದು ವರ್ಷದಲ್ಲಿ, ಬೆಂಗಳೂರು ಸೇರಿದಂತೆ ಮೈಸೂರು, ಧಾರವಾಡ, ಶಿರಸಿ, ಮಂಗಳೂರು, ಉಡುಪಿ, ಗೌರಿಬಿದನೂರು, ಕೋಲಾರ ಮುಂತಾದ ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶನ ನೀಡಿದ್ದು, ಇದೀಗ 33 ಮತ್ತು 34 ನೇ ಪ್ರದರ್ಶನವನ್ನು ಭಾನುವಾರ ಹಮ್ಮಿಕೊಂಡಿದೆ.

'ತುಘಲಕ್' ಭಾರತದ ಶ್ರೇಷ್ಠ ನಾಟಕಗಳಲ್ಲೊಂದು. ಐತಿಹಾಸಿಕ ಭಿತ್ತಿಯಲ್ಲಿ ಸಮಕಾಲೀನ ಧ್ವನಿಗಳನ್ನು ಹೊರಡಿಸುವ ಈ ನಾಟಕ ಹಲವು ವ್ಯಾಖ್ಯಾನಗಳ ಸಾಧ್ಯತೆಯನ್ನು ತನ್ನ ಒಡಲೊಳಗಿರಿಸಿಕೊಂಡಿದೆ. ಈ ನಾಟಕದ ಮಹತ್ವಾಕಾಂಕ್ಷೆಯ ಪ್ರಯೋಗಗಳನ್ನು ಕನ್ನಡವೂ ಸೇರಿದಂತೆ ನಾಡಿನ ಅನೇಕ ಭಾಷೆಗಳು ಕಂಡಿವೆ.

ತುಘಲಕ್ ನಾಟಕದ ಬಗ್ಗೆ : ತುಘಲಕ್ ಐತಿಹಾಸಿಕ ನಾಟಕವೆನ್ನಿಸಿದರೂ, ಇಂದಿಗೂ ನಾವು ಕಾಣುವ ರಾಜಕಾರಣದ ಮೇಲಿನ ಧರ್ಮದ ಹಿಡಿತವನ್ನು ಎತ್ತಿ ಹಿಡಿಯುತ್ತದೆ. ಧರ್ಮ ದ್ವೇಷದಿಂದ ಒಡೆದು ಚೂರಾದ ತನ್ನ ರಾಜ್ಯವನ್ನು ಶಾಂತಿ ಮತ್ತು ಸಾಮರಸ್ಯದ ತಳಹದಿಯ ಮೇಲೆ ಕಟ್ಟ ಬಯಸುವ ತುಘಲಕ್‌ನಿಗೆ ಎದುರಾಗುವುದು, ಧರ್ಮಾಂಧರ ವಿರೋಧ ಮತ್ತು ರಾಜಕಾರಣವನ್ನು ತಮ್ಮ ಹತೋಟಿಯಲ್ಲಿರಿಸಲು ಹುನ್ನಾರ ನಡೆಸುವ ಅಂದಿನ ವ್ಯಾಪಾರಿ ವರ್ಗವಾದ ಅಮೀರರು.

ತನ್ನ ರಾಜ್ಯದ ಉಜ್ವಲ ಭವಿಷ್ಯದ ಕನಸು ಕಂಡ ತುಘಲಕ್ ನ ಸಾಮ್ರಾಜ್ಯದ ಅವನತಿಯ ರಾಜಕಾರಣ ಮತ್ತು ಧರ್ಮಕಾರಣಗಳನ್ನು ಎತ್ತಿ ಹಿಡಿವ ಈ ನಾಟಕ, ಒಂದು ಅಪ್ಪಟ ರಾಜಕೀಯ ನಾಟಕವಾಗಿ ರೂಪುಗೊಂಡಿದೆ. ಇಂದಿನ ಸಮಕಾಲೀನ ವಸ್ತು ಸ್ಥಿತಿಯ ಆಶಯವನ್ನು ಆಕೃತಿಗೊಳಿಸುವ ಪ್ರಮುಖ ಸಾಧ್ಯತೆ. ಹೊಸಕಾಲದ ಹೊಸ ಅಗತ್ಯಗಳಿಗೆ ಸ್ಪಂದಿಸುವ ಇಂಥ ಬಹುಮುಖಿ ನೆಲೆಯ ನಾಟಕವೊಂದನ್ನು ಪ್ರಯೋಗಿಸುವದಕ್ಕೆ 'ಸಮುದಾಯ' ಹೆಮ್ಮೆ ಪಡುತ್ತಿದೆ.

Tughlaq play

ಸಮುದಾಯದ ಬಗ್ಗೆ : ಸಾಮಾಜಿಕ ಚಳವಳಿ ಮತ್ತು ಹೋರಾಟಗಳಿಗೆ ಸಾಂಸ್ಕೃತಿಕ ಆಯಾಮದ ಬದಲಾದ ಮಾದರಿಗಳನ್ನು ಕಟ್ಟಿಕೊಟ್ಟ ಸಂಘಟನೆಯೇ ಸಮುದಾಯ. ತುರ್ತು ಪರಿಸ್ಥಿತಿಯ ಸಾಮಾಜಿಕ ತುರ್ತಿನಲ್ಲಿ ಜನಪರ ಹಾಗೂ ಪ್ರಜಾಪ್ರಭುತ್ವವಾದೀ ಚಿಂತಕರು ನಿರಂತರ ಚಳವಳಿಗಳ ಮೂಲಕ ಹೋರಾಟದ ಬೇರನ್ನು ಗಟ್ಟಿಗೊಳಿಸಿದ್ದಾರೆ. 1975ರಿಂದ ಸತತವಾಗಿ ಹಲವು ಪ್ರಮುಖ ನಾಟಕಗಳಾದ 'ಹುತ್ತವ ಬಡಿದ' 'ತಾಯಿ, 'ಸಂಕ್ರಾಂತಿ', 'ಪಂಪಭಾರತ', 'ಜುಗಾರಿಕ್ರಾಸ್' ಹಾಗೂ ಇನ್ನು ಹತ್ತು ಹಲವು ವಿನೂತನ ನಾಟಕಗಳನ್ನು ಪ್ರಯೋಗಿಸಿರುವ ಸಮುದಾಯ ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.

ತುಘಲಕ್ ನಾಟಕ ತಂಡ ವಿವರ
* ರಚನೆ : ಗಿರೀಶ್ ಕಾರ್ನಾಡ್
* ಅಭಿನಯ : ‘ಸಮುದಾಯ' ಬೆಂಗಳೂರು
* ವಿನ್ಯಾಸ ಮತ್ತು ನಿರ್ದೇಶನ : ಡಾ. ಸ್ಯಾಮ್ ‍ಕುಟ್ಟಿ ಪಟ್ಟಂಕಾರಿ
* ಸಹ ನಿರ್ದೇಶನ : ಡಾ. ಶ್ರೀಪಾದ ಭಟ್
* ಸ್ಥಳ : ರಂಗಶಂಕರ
* ದಿನಾಂಕ ಮತ್ತು ಸಮಯ: 19/10/2014; 3.30 ಮತ್ತು ಸಂಜೆ 7:30ಕ್ಕೆ,
* ಟಿಕೆಟ್ ದರ: ರೂ. 100/- * ಸಂ
* ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 99001 82400, 97399 33889
* ವೆಬ್ ಸೈಟ್ : www.indianstage.in, bookmyshow.com

English summary
'Tughlaq' by Girish Karnad, a 33 and 34 scene play will be staged at Rangashankara on October 19, Sunday by Samudaya Team. This play is about the turbulent rule of Mohammad Bin Tughlaq. This seems on the outlook as a historical play, but is appropriate to the contemporary politics of any era, in current global scenar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X