ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳವಾರ ಬೆಂಗಳೂರ ಶಾಂತಿ ಕದಡಿದವರು ಯಾರು?

|
Google Oneindia Kannada News

ಬೆಂಗಳೂರು, ಏಪ್ರಿಲ್, 19: ಮಂಗಳವಾರ ಬೆಂಗಳೂರಿನ ಶಾಂತಿಯನ್ನು ನಿಜಕ್ಕೂ ಕದಡಿದವರು ಯಾರು? ಎಂಬ ಪ್ರಶ್ನೆಗೆ ಉತ್ತರ ಸುಲಭವಾಗಿ ಸಿಗುವುದಿಲ್ಲ. ಆದರೆ ಕೆಲವೊಂದು ಅನುಮಾನಗಳು ಬಸ್ ಗೆ ಹೊತ್ತಿಕೊಂಡ ಬೆಂಕಿಯಿಂದ ಹೊರಬಿದ್ದ ಹೊಗೆಯಂತೆ ದಟ್ಟವಾಗಿವೆ.

ಸೋಮವಾರ ಅಂದರೆ ಏಪ್ರಿಲ್, 18 ರಂದು 10 ಸಾವಿರ ಗಾರ್ಮೆಂಟ್ಸ್ ನೌಕರರು ಬೀದಿಗೆ ಇಳಿದ ಸಂಗತಿ ಎಲ್ಲರಿಗೂ ಗೊತ್ತಿತ್ತು. ಪರಿಣಾಮ ಬೊಮ್ಮನಹಳ್ಳಿ ಭಾಗದಲ್ಲಿ 5 ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಅಂತೂ ಇಂತು ಸಂಜೆ ವೇಳೆಗೆ ಹರಸಾಹಸ ಮಾಡಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ವ್ಯವಸ್ಥೆಯನ್ನು ತಹಬದಿಗೆ ತಂದಿದ್ದರು.[ಗಾರ್ಮೆಂಟ್ಸ್ ನೌಕರರ ಪ್ರತಿಭಟನೆಯ ಸಚಿತ್ರ ವಿವರ]

bengaluru

ಮಂಗಳವಾರ ನಡೆದದ್ದೇ ಬೇರೆ: ಆದರೆ ಮಂಗಳವಾರ ನಡೆದದ್ದೇ ಬೇರೆ. ಬೆಳಗ್ಗೆ ಮಹಾನಗರದ ಮೂಲೆ ಮೂಲೆಗಳಲ್ಲಿ ಅಂದರೆ ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಇರುವ ಎಲ್ಲ ಕಡೆ ಏಕಕಾಲಕ್ಕೆ ಪ್ರತಿಭಟನೆ ಆರಂಭವಾಯಿತು. ಬೆಳಗ್ಗೆ 10 ಗಂಟೆವರೆಗೆ ಪರಿಸ್ಥಿತಿ ನಿಯಂತ್ರಣದಲ್ಲೇ ಇತ್ತು. ಮಹಿಳೆಯರೇ ಹೆಚ್ಚಾಗಿ ಪ್ರತಿಭಟನೆಯಲ್ಲಿ ಕಾಣಿಸಿಕೊಂಡು ರಸ್ತೆ ತಡೆ ನಡೆಸುತ್ತಿದ್ದರು.

ಬಿಗಡಾಯಿಸಿದ ಪರಿಸ್ಥಿತಿ: ಆದರೆ ಬೆಳಗ್ಗೆ 11.30ರ ನಂತರ ಪರಿಸ್ಥಿತಿ ಬಿಗಡಾಯಿಸಲು ಆರಂಭಿಸಿತು. ಜಾಲಹಳ್ಳಿ ಕ್ರಾಸ್, ಗೊರಗುಂಟೆ ಪಾಳ್ಯ, ಪೀಣ್ಯ ಕೈಗಾರಿಕಾ ಪ್ರದೇಶ, ಬೆಂಗಳೂರು-ಮೈಸೂರು ಹೆದ್ದಾರಿ, ಬೊಮ್ಮನಹಳ್ಳಿ, ಹೊಸೂರು ರಸ್ತೆ ಎಲ್ಲ ಕಡೆ ಪ್ರತಿಭಟನೆ ವಿಕೋಪಕ್ಕೆ ಹೋಗಿ ಹಿಂಸಾಚಾರವಾಗಿ ಮಾರ್ಪಾಡಾಯಿತು.[ಭವಿಷ್ಯ ನಿಧಿ ನೀತಿ ಬದಲು, ಸರ್ಕಾರ ಕೈ ಸುಟ್ಟಿಕೊಂಡಿದ್ದು ಹೇಗೆ?]

ಪೊಲೀಸ್ ಸ್ಟೇಶನ್ ಮೇಲೆ ದಾಳಿ: ಪೊಲೀಸರ ಮೇಲೆ ಕಲ್ಲು ತೂರಾಟ ಆರಂಭವಾಯಿತು. ಬಸ್ ಗಳಿಗೆ, ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಸಾರ್ವಜನಿಕ ಆಸ್ತಿಯ ಮೇಲೆ ದಾಳಿ ಮಾಡಲಾಯಿತು. ಆದರೆ ಈ ಮೊದಲು ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯರು ನಾಪತ್ತೆಯಾಗಿದ್ದರು. ಅವರ ಜಾಗದಲ್ಲಿ ಕಿಡಿಗೇಡಿಗಳು ತುಂಬಿಕೊಂಡಿದ್ದರು. ಇವರು ಎಲ್ಲಿಂದ ಬಂದರು? ಎಂಬುದಕ್ಕೆ ಯಾರ ಬಳಿಯೂ ಸದ್ಯಕ್ಕೆ ಉತ್ತರವಿಲ್ಲ.[ಕಾರ್ಮಿಕರನ್ನು ಕೆರಳಿಸಿದ ಕೇಂದ್ರದ ನೀತಿ ಯಾವುದು?]

ಗುಪ್ತಚರ ದಳ ಮಾಹಿತಿ ನೀಡಿದ್ದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳದ ಪೊಲೀಸ್ ಇಲಾಖೆ ಬಳಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿಲ್ಲ. ಪರಿಣಾಮ 12 ಬಸ್ ಗಳು ಬೆಂಕಿಗೆ ಆಹುತಿಯಾದವು. ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡ ನಾಗರಿಕರು ಶಾಪ ಹಾಕಿದರು.

ಅಮಾಯಕ ವಿದ್ಯಾರ್ಥಿನಿ ಪೊಲೀಸರ ಗುಂಡೇಟಿಗೆ ಸಿಕ್ಕಿಹಾಕಿಕೊಳ್ಳುವಂತಾಯಿತು. ಪೆಟ್ಟು ತಿಂದ ಅಮಾಯಕರು, ಘರ್ಷಣೆಯಲ್ಲಿ ಗಾಯಗೊಂಡ ಪೊಲೀಸರು ಆಸ್ಪತ್ರೆ ಸೇರಬೇಕಾಯಿತು. ಅಂತಿಮವಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲು ಸಂಜೆ ಏಳು ಗಂಟೆ ಹಿಡಿಯಿತು.

ಬೆಂಗಳೂರಲ್ಲಿ ಮಾತ್ರ ಪ್ರತಿಭಟನೆ ಏಕೆ?: ಪಿಎಫ್ ನೀತಿ ಇಡೀ ದೇಶಕ್ಕೆ ಸಂಬಂಧಿಸಿದ್ದು. ಆದರೆ ಬೆಂಗಳೂರಿನಲ್ಲಿ ಮಾತ್ರ ಈ ಬಗೆಯಲ್ಲಿ ಉಗ್ರ ಪ್ರತಿಭಟನೆ ನಡೆಯಲು ಕಾರಣವೇನು? ಈ ಬಗೆಯ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರವಿಲ್ಲ.

ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆಗಳು
ಗಲಭೆ ಮಾಡಿದವರು ಗಾರ್ಮೆಂಟ್ಸ್ ನೌಕರರೇ? ಅಥವಾ ಕಿಡಿಗೇಡಿಗಳೇ? ಕಾರ್ಮಿಕರ ಆಕ್ರೋಶಕ್ಕೆ ತುತ್ತಾದ ಸಾರ್ವಜನಿಕ ಆಸ್ತಿಯ ಹಾನಿ ತುಂಬಿಕೊಡುವವರು ಯಾರು? ನಾವೆ ಅಲ್ಲವೇ? ಮುಂದಿನ ದಿನಗಳಲ್ಲೂ ಇಂಥ ಘಟನಾವಳಿಗಳು ಮರುಕಳಿಸುವ ಸಾಧ್ಯತೆ ಇದೆಯೇ? ಅದಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳು ಏನು? ಪ್ರತಿಭಟನೆ ಎಂದರೆ ಹಿಂಸಾಚಾರ ನಡೆಸುವುದೇ? ಈ ಎಲ್ಲ ಪ್ರಶ್ನೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬೇಕಿದೆ.

ಹಿಂದೆ ನೀರು ಕೇಳಿಕೊಂಡು ರೈತರು ರಾಜಧಾನಿಗೆ ಬಂದಾಗಲೂ, ಮೈಸೂರಿನಲ್ಲಿ ಹಿಂದೂ ಕಾರ್ಯಕರ್ತ ರಾಜು ಹತ್ಯೆ ಮತ್ತು ಆತನ ಅಂತ್ಯ ಸಂಸ್ಕಾರದ ವೇಳೆಯೂ ನಡೆದ ಪ್ರತಿಭಟನೆ ಇಲ್ಲವೇ ಮೆರವಣಿಗೆ ಏಕಾಏಕಿ ಹಿಂಸಾರೂಪ ಪಡೆದುಕೊಂಡಿತ್ತು. ಹಾಗಾದರೆ ನಿಜಕ್ಕೂ ಕಲ್ಲು ತೂರುವವರು, ಬಸ್ ಗೆ ಬೆಂಕಿ ಇಡುವವರು ಯಾರು? ಉತ್ತರವನ್ನು ಪೊಲೀಸ್ ಇಲಾಖೆಯೇ ಹೇಳಬೇಕಿದೆ.

ನಿಮ್ಮ ಪ್ರಕಾರ ಬೆಂಗಳೂರ ಗಲಭೆಗೆ ಯಾರು ಕಾರಣ ಓಟ್ ಮಾಡಿ

English summary
The Whole Bengaluru freeze because of Garments workers protest on 19th April 2016. But what is the real cause behind this riot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X