ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಗಡಿ ರಸ್ತೆಯಲ್ಲಿ ಅನಾವರಣ ಗೊಂಡ ಬೃಹತ್ ಮಾಲ್

ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಮಾಲ್ ಆರಂಭವಾಗಿದೆ. ಸುಮಾರು 160 ಕೋಟಿ ರೂ. ವೆಚ್ಚದಲ್ಲಿ ಆರು ಅಂತಸ್ತುಗಳ ಗಂಗಮ್ಮ ತಿಮ್ಮಯ್ಯ (ಜಿಟಿ ಮಾಲ್) ವರ್ಲ್ಡ್ ಮಾಲ್ ಮಾಗಡಿ ರಸ್ತೆಯಲ್ಲಿ ಲೋಕಾರ್ಪಣೆಗೊಂಡಿದೆ

By Mahesh
|
Google Oneindia Kannada News

ಬೆಂಗಳೂರು, ಜನವರಿ 16: ಸುಮಾರು 160 ಕೋಟಿ ರೂ. ವೆಚ್ಚದಲ್ಲಿ ಆರು ಅಂತಸ್ತುಗಳ ಗಂಗಮ್ಮ ತಿಮ್ಮಯ್ಯ (ಜಿಟಿ ಮಾಲ್) ವರ್ಲ್ಡ್ ಮಾಲ್ ಮಾಗಡಿ ರಸ್ತೆಯಲ್ಲಿ ಲೋಕಾರ್ಪಣೆಗೊಂಡಿದೆ. ಚಿತ್ರವಿತರಕ ಟಿ ಆನಂದಪ್ಪ ಪ ಒಡೆತನದ ಈ ಮಾಲ್ ಉದ್ಘಾಟನೆಗೆ ಕನ್ನಡ ಚಿತ್ರರಂಗದ ಹಲವಾರು ತಾರೆಗಳು ಆಗಮಿಸಿ, ಶುಭ ಹಾರೈಸಿದರು.

ಒಂದು ಅಂತಸ್ತಿನಲ್ಲಿ ಐದು ಸಿನಿಮಾ ಸ್ಕ್ರೀನ್‍ಗಳನ್ನು ಅಳವಡಿಸಲಾಗಿದ್ದು, ಚೆನ್ನೈನ ಸತ್ಯಂ ಸಿನಿಮಾಸ್‍ನವರು 7.1 ಡಾಲ್ಬಿ ಸಿಸ್ಟಮ್‍ ನಡಿ ಅತ್ಯಾಧುನಿಕವಾಗಿ ಹೈಟೆಕ್ ತಂತ್ರಜ್ಞಾನದೊಂದಿಗೆ ಸಿನಿಮಾ ಸ್ಕ್ರೀನ್‍ಗಳನ್ನು ನಿರ್ಮಿಸಿದ್ದಾರೆ.
[ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಚೆನ್ನೈನ ಸತ್ಯಂ ಸಿನಿಮಾಸ್]

ಮಾರ್ಚ್ 1ರಿಂದ ಸಿನಿಮಾ ಪ್ರದರ್ಶನ ಆರಂಭಗೊಳ್ಳಲಿದೆ. ಸಾಮಾನ್ಯ ಟಿಕೆಟ್ ದರ 100 ರಿಂದ 120ರೂ. ಆಗಲಿದ್ದು, ಗೋಲ್ಡ್ ಸೀಟ್‍ಗೆ 300 ರಿಂದ 320ರೂ. ನಿಗದಿ ಪಡಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಮಾಲೀಕರಾದ ಟಿ.ಆನಂದಪ್ಪ ತಿಳಿಸಿದ್ದಾರೆ.

ಕನ್ನಡ ಸಿನಿಮಾಗಳಿಗಾಗಿ ಮೀಸಲು

ಕನ್ನಡ ಸಿನಿಮಾಗಳಿಗಾಗಿ ಮೀಸಲು

ಒಂದು ಸಿನಿಮಾ ಸ್ಕ್ರೀನ್ ನಲ್ಲಿ 225 ಮಂದಿ ಸಿನಿಮಾ ನೋಡಲು ಅವಕಾಶವಿದ್ದು, ಎರಡು ಸ್ಕ್ರೀನ್ ಗಳನ್ನು ಕನ್ನಡ ಸಿನಿಮಾಗಳಿಗಾಗಿ ಮೀಸಲಿರಿಸಲು ಉದ್ದೇಶಿಸಲಾಗಿದೆ.

ಇತರೆ ಭಾಷೆಗಳಿಗೆ ಮೂರು ಸ್ಕ್ರೀನ್

ಇತರೆ ಭಾಷೆಗಳಿಗೆ ಮೂರು ಸ್ಕ್ರೀನ್

ಮೂರು ಸ್ಕ್ರೀನ್ ಗಳನ್ನು ಇತರೆ ಭಾಷೆಗಳ ಚಿತ್ರಗಳಿಗೆ ನೀಡಲಾಗುತ್ತದೆ. ದ್ವಿಚಕ್ರ ವಾಹನ ಪಾರ್ಕಿಂಗ್‍ಗೆ 10ರೂ., ಕಾರ್ ಪಾರ್ಕಿಂಗ್‍ಗೆ 30ರೂ. ನಿಗದಿಪಡಿಸಲಾಗಿದೆ ಎಂದು ಟಿ ಆನಂದಪ್ಪ ಹೇಳಿದರು.

ರಾಕ್‍ಲೈನ್ ವೆಂಕಟೇಶ್ ಕನಸು

ರಾಕ್‍ಲೈನ್ ವೆಂಕಟೇಶ್ ಕನಸು

2002ರಲ್ಲೇ ರಾಕ್‍ಲೈನ್ ವೆಂಕಟೇಶ್ ಹಾಗೂ ತಾವು ಈ ಬೃಹತ್ ಮಾಲ್ ನಿರ್ಮಾಣ ಮಾಡಲು ಮುಂದಾಗಿದ್ದರು. ನಂತರ ನಗರದ ಹೊರವಲಯದಲ್ಲಿ ಸಿನಿಮಾ ಹಾಲ್ ನಿರ್ಮಿಸಿದರು. 2008ರಲ್ಲಿ ಮಾಲ್ ನಿರ್ಮಾಣಕ್ಕೆ ಅನುಮತಿ ದೊರೆತಿತ್ತು.2010ಕ್ಕೆ ನಿರ್ಮಾಣ ಕಾಮಗಾರಿ ಆರಂಭಗೊಂಡು ಈಗ ಪೂರ್ಣವಾಗಿದೆ. ಚಿತ್ರದಲ್ಲಿ : ಡಾ. ರಾಜ್ ಪುತ್ರರು, ಸೊಸೆಗೆ ಸನ್ಮಾನ

ತಾರೆಗಳ ದಂಡು

ತಾರೆಗಳ ದಂಡು

ಸಚಿವರಾದ ಡಿ.ಕೆ.ಶಿವಕುಮಾರ್, ಕೃಷ್ಣಪ್ಪ, ಖ್ಯಾತ ನಟರಾದ ರವಿಚಂದ್ರನ್, ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಚಲುವರಾಯಸ್ವಾಮಿ, ರಾಮಚಂದ್ರಗೌಡ, ಲಕ್ಷ್ಮಿನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.

ಜಿಟಿ ಮಾಲ್ ಬಗ್ಗೆ ಪ್ರಶಾಂತ್ ಆನಂದಪ್ಪ

ಜಿಟಿ ಮಾಲ್ ಬಗ್ಗೆ ಪ್ರಶಾಂತ್ ಆನಂದಪ್ಪ

* 2.5 ಎಕರೆ ವಿಸ್ತೀರ್ಣ, 250 ಕೋಟಿ ರು ವೆಚ್ಚ
*ಐದು ಸ್ಕ್ರೀನ್ ಸಿನಿಮಾ ಹಾಲ್ , 7.1 ಸೌಂಡ್ ಸಿಸ್ಟಮ್
* 100 ರಿಂದ 120 ಟಿಕೆಟ್ ದರ, ಗೋಲ್ಡ್ ಕ್ಲಾಸ್ 300
* ನಾಲ್ಕು ಅಂತಸ್ತುಗಳಲ್ಲಿ ಬಿಗ್ ಬಜಾರ್ ಸೇರಿದಂತೆ 57 ಬ್ರಾಂಡ್ ಸ್ಟಾಲ್
* ವಿಜಯಗರದ ಹಾದಿಯಲ್ಲಿ ಮಾಗಡಿ ರಸ್ತೆಯಲ್ಲಿರುವ ಮಾಲ್

English summary
Gangamma Thimmaiah World Mall next to Prasanna theatre at Magadi Road Bengaluru inaugurated on SundayJan 15).Cine lovers can watch movies from March 1 said owner and renowned exhibitor of Kannada Film Industry T Anandappa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X