ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫುಟ್‌ಪಾತ್‌ನಲ್ಲಿ ಟ್ರಾನ್ಸ್‌ ಫಾರ್ಮರ್ ತೊಂದರೆ ಇನ್ನಿಲ್ಲ

|
Google Oneindia Kannada News

ಬೆಂಗಳೂರು, ಫೆ. 26 : ಫುಟ್‌ಪಾತ್‌ನಲ್ಲಿದ್ದ ಟ್ರಾನ್ಸ್‌ ಫಾರ್ಮರ್‌ಗಳಿಂದ ಜನರಿಗೆ ಆಗುತ್ತಿದ್ದ ಕಿರಿಕಿರಿ ತಪ್ಪಿಸಲು ಬೆಸ್ಕಾಂ ನೂತನ ಯೋಜನೆ ಜಾರಿಗೆ ತರಲಿದೆ. ಗ್ರೂಪ್‌ ಆಪ­ರೇಟಿಂಗ್‌ ಸ್ವಿಚ್‌ ಪೈಪ್‌ನ ವಿನ್ಯಾಸವನ್ನು ಬದಲಾವಣೆ ಮಾಡಲಾಗುತ್ತಿದೆ.

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಈ ಕುರಿತು ಮಾಹಿತಿ ನೀಡಿದ್ದಾರೆ. ಫುಟ್‌ಪಾತ್‌ನಲ್ಲಿದ್ದ ಟ್ರಾನ್ಸ್‌ಫಾರ್ಮರ್‌ಗಳಿಂದ ಪಾದಾಚಾರಿಗಳಿಗೆ ತೊಂದರೆ ಉಂಟಾಗಿತ್ತು. ಆದ್ದರಿಂದ ಗ್ರೂಪ್‌ ಆಪ­ರೇಟಿಂಗ್‌ ಸ್ವಿಚ್‌ನ ಪೈಪ್‌ (ಜಿಒಎಸ್‌) ವಿನ್ಯಾಸವನ್ನು ಬದಲಿಸಲಾವಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. [ಬೆಸ್ಕಾಂನಲ್ಲಿ ಕೆಲಸ ಖಾಲಿ ಇದೆ]

footpath

ಜಿಒಎಸ್‌ ಸ್ವಿಚ್‌ ಮೂಲಕ ಟ್ರಾನ್ಸ್‌­ ಫಾರ್ಮರ್‌ ಆನ್‌ ಮತ್ತು ಆಫ್‌ ಮಾಡಲಾಗುತ್ತದೆ. ಇದರ ಪೈಪ್‌ ನೆಲದಿಂದ 3 ಅಡಿ ಎತ್ತರದಲ್ಲಿತ್ತು. ಈಗ ಅದನ್ನು 7.5 ಅಡಿಗೆ ಏರಿಕೆ ಮಾಡಲಾಗಿದೆ ಎಂದು ಪಂಕಜ್ ಕುಮಾರ್ ಪಾಂಡೆ ಹೇಳಿದರು. ಇದರಿಂದಾಗಿ ಪಾದಚಾರಿಗಳು ಅಡ್ಡಿ ಆತಂಕಗಳಿಲ್ಲದೆ ಪುಟ್‌ಪಾತ್‌ನಲ್ಲಿ ಸಂಚರಿಸಬಹುದು ಎಂದರು. [ಜಯನಗರದ ಮಾದರಿ ಫುಟ್ ಪಾತ್ ನೋಡಿದ್ರಾ?]

21 ಲಕ್ಷ ಖರ್ಚು : ಈ ನೂತನ ವಿನ್ಯಾಸವನ್ನು ಇಸ್ರೋ ನಿವೃತ್ತ ಮುಖ್ಯ ಎಂಜಿನಿಯರ್‌ ರಾಜಸಿಂಹ ಅವರು ಈ ವಿನ್ಯಾಸಗೊಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ಪ್ರಾಯೋಗಿಕ­ವಾಗಿ ಬಾಣಸವಾಡಿ ಹಾಗೂ ಸಹಕಾರ­ನಗರ ಉಪವಿಭಾಗಗಳಲ್ಲಿ 1 ಸಾವಿರ ಜಿಒಎಸ್‌ಗಳ ವಿನ್ಯಾಸಗಳನ್ನು ಬೆಸ್ಕಾಂ ಬದಲಾವಣೆ ಮಾಡಿದ್ದು, ಇದಕ್ಕಾಗಿ 21 ಲಕ್ಷ ವೆಚ್ಚ ಮಾಡಲಾಗಿದೆ.

5 ಲಕ್ಷ ಬಹುಮಾನ : ಫುಟ್‌ಪಾತ್‌ಗಳಲ್ಲಿ ಟ್ರಾನ್ಸ್‌­ ಫಾರ್ಮರ್‌ಗಳನ್ನು ಪಾದಚಾರಿ ಸ್ನೇಹಿ­ಯ­ನ್ನಾಗಿ ಮಾಡಲು ವಿನ್ಯಾಸಗಳನ್ನು ಬೆಸ್ಕಾಂ ಆಹ್ವಾನಿಸಿದೆ. ಮಾರ್ಚ್ 9ರೊಳಗೆ ವಿನ್ಯಾಸವನ್ನು ಮಾಡಿ ಬೆಸ್ಕಾಂಗೆ ತಲುಪಿಸಬಹುದಾಗಿದೆ. ಆಯ್ಕೆಯಾದ ವಿನ್ಯಾಸಕ್ಕೆ 5 ಲಕ್ಷ ಬಹುಮಾನ ನೀಡಲಾಗುತ್ತದೆ.

ಹೈಕೋರ್ಟ್ ಚಾಟಿ ಬೀಸಿತ್ತು : ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿಯಾಗಿರುವ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ಫುಟ್‌ಪಾತ್‌ನಲ್ಲಿರುವ ಟ್ರಾನ್ಸ್ ಫಾರ್ಮರ್‌ಗಳನ್ನು ತೆರವುಗೊಳಿಸುತ್ತಿರೋ? ಅಥವ ಬೇರೆ ವ್ಯವಸ್ಥೆ ಮಾಡುತ್ತೀರೋ ಎಂದು ಮುಂದಿನ ವಿಚಾರಣೆ ವೇಳೆ ತಿಳಿಸಬೇಕು ಎಂದು ಕೆಲವು ದಿನಗಳ ಹಿಂದೆ ಬೆಸ್ಕಾಂಗೆ ಸೂಚನೆ ನೀಡಿತ್ತು.

English summary
BESCOM Managing Director Pankaj Kumar Pandey said, The Bangalore Electricity Supply Company will start replacing the existing Group Operating Switches (GOS) of transformer centers in footpaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X