ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಬೆಳ್ಳಂದೂರು ಕೆರೆಯೋ ಅಥವಾ ನೊರೆಯೋ!

ಸ್ವಲ್ಪ ದಿನಗಳ ಹಿಂದಷ್ಟೇ ಇಲ್ಲಿ ಬೆಂಕಿ ಮತ್ತು ನೊರೆ ಕಾಣಿಸಿಕೊಂಡು ಸುದ್ದಿಯಾಗಿತ್ತು. ಆಗ ಬಿಬಿ ಎಂಪಿ ಮೇಯರ್ ಪದ್ಮಾವತಿ ಇಲ್ಲಿಗೆ ಭೇಟಿಯಾಗಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು.

|
Google Oneindia Kannada News

ಬೆಂಗಳೂರು, ಮಾರ್ಚ್ 8: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಏನೆಲ್ಲ ಅವಾಂತರ ಸೃಷ್ಟಿ ಮಾಡಿದೆ ಎಂಬ ಸುದ್ದಿಯನ್ನು ಈಗಾಗಲೇ ಓದಿದ್ದೇವೆ. ಇದೀಗ ಮತ್ತೆ ಬೆಳ್ಳಂದೂರು ಕೆರೆಯಲ್ಲಿ ನೊರೆ ಏಳುತ್ತಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ದುರ್ವಾಸನೆ ಹಬ್ಬಿ ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ನೊರೆ ರಸ್ತೆಯನ್ನೂ ವ್ಯಾಪಿಸುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿಯಿಂದ ಇಲ್ಲಿನ ಜನರು ಕಂಗಾಲಾಗಿದ್ದಾರೆ.[ಬೆಳ್ಳಂದೂರು ಕೆರೆ ಮತ್ತೆ ನೊರೆ ಉಗುಳಲು ಯಾರು ಕಾರಣ?]

Foam in Bellanduru lake creates tention among the people

ಸ್ವಲ್ಪ ದಿನಗಳ ಹಿಂದಷ್ಟೇ ಇಲ್ಲಿ ಬೆಂಕಿ ಮತ್ತು ನೊರೆ ಕಾಣಿಸಿಕೊಂಡು ಸುದ್ದಿಯಾಗಿತ್ತು. ಆಗ ಬಿಬಿ ಎಂಪಿ ಮೇಯರ್ ಪದ್ಮಾವತಿ ಇಲ್ಲಿಗೆ ಭೇಟಿಯಾಗಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಆದರೆ ಈಗ ಮತ್ತೊಮ್ಮೆ ನೊರೆ ಕಾಣಿಸಿಕೊಂಡಿರುವುದು ಬಿಬಿಎಂಪಿಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ಎನ್ನಿಸಿದೆ.[ಬೆಂಗಳೂರು ಕೆರೆಗಳ ಮೇಲೆ 24/7 ಕಣ್ಗಾವಲು]

ಬೆಂಗಳೂರಿನಲ್ಲಿ ಮಂಗಳವಾರ ರಭಸವಾಗಿ ಸುರಿದ ಮಳೆಯಿಂದಾಗಿ ಕೆರೆಯಲ್ಲಿ ನೀರು ಹೆಚ್ಚುತ್ತಿದ್ದು, ನೊರೆಯೂ ಏರುತ್ತಲೇ ಇರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆ ಇದೆ.

English summary
Foam in Bellandur lake in Bengaluru is becoming a serious problem to BBMP nowadays. The foam find here again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X