ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗ್ಳೂರಿನಲ್ಲಿ ಕೊಕೇನ್ ಮಾರಾಟ: ಐವರು ನೈಜೀರಿಯನ್ನರ ಬಂಧನ

|
Google Oneindia Kannada News

ಬೆಂಗಳೂರು, ಮೇ : ಇಲ್ಲಿನ ಹೆಣ್ಣೂರಿನ ವಡ್ಡರಹಳ್ಳಿ ಹಾಗೂ ರಾಮಮೂರ್ತಿ ನಗರದ ಪೇಟೆ ಕೃಷ್ಣಪ್ಪ ಲೇಔಟ್ ಗಳಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ವಿದ್ಯಾರ್ಥಿಗಳಿಗೆ ಮಾದಕ ಕೊಕೇನ್ ಮಾರಾಟ ಮಾಡುತ್ತಿದ್ದ ಐದು ನೈಜೀರಿಯಾ ಮೂಲದ ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕೊಕೇನ್ ಮಾರಾಟ ದಂಧೆಯಲ್ಲಿ ತೊಡೆಗಿದ್ದಾರೆಂದು ಮಾಹಿತಿ ತಿಳಿದ ಪೊಲೀಸರು ವಡ್ಡರಹಳ್ಳಿಯಲ್ಲಿ ಕಾರ್ಯಾಚರಣೆ ಮಾಡಿ ಝಾಗೋ ಕಾನ್ ಸ್ಟಂಟ್ (32) ಮತ್ತು ಎಬೆಲೆ ಎಫೆಕ್ವಾ (52) ಎನ್ನುವರನ್ನು ಬಂಧಿಸಿ 51 ಗ್ರಾಂ ಕೊಕೇನ್, ಆರು ಮೊಬೈಲ್, ಸ್ಕೂಟರ್ ಸೇರಿದಂತೆ ಸುಮಾರು 6 ಲಕ್ಷ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Five African nationals held in Bengaluru, 168 gms cocaine seized

ಇನ್ನು ಕೃಷ್ಣಪ್ಪ ಲೇಔಟ್ ಮನೆಯೊಂದರ ಮನೆ ಮೇಲೆ ಮಾಡಿದ ದಾಳಿಯಲ್ಲಿ ಆಗಸ್ಟಿನ್ (29), ಇಮ್ಯಾನ್ಯುಯಲ್ (37), ಹಾಗೂ ಪೀಟರ್ ಎಂಬುವರು ಪೊಲೀಸರಿಗೆ ಸಿಕ್ಕಿದ್ದಾರೆ. ಬಂಧಿತದಿಂದ 117 ಗ್ರಾಂ ಕೊಕೇನ್, ಸ್ಕೂಟರ್ ಸೇರಿ ಸುಮಾರು 12 ಲಕ್ಷ ರು. ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರೆಲ್ಲ ಶೈಕ್ಷಣಿಕ ಉದ್ದೇಶದಡಿ ನಗರಕ್ಕೆ ಆಗಮಿಸಿದ್ದಾರೆ. ಆದರೆ, ಇವರ ವೀಸಾ ಅವಧಿ ಮುಕ್ತಾಯಗೊಂಡರೂ ಅಕ್ರಮವಾಗಿ ನಗರದಲ್ಲಿ ನೆಲೆಸಿ ಈ ಕೃತ್ಯದಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

English summary
The City Crime Branch (CCB) police arrested five African nationals and seized 168 gms of cocaine valued at Rs 18 lakh, from their possession in two separate cases, said a top cop on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X