ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಇಸ್ರೇಲ್ ದೂತವಾಸ ಕಚೇರಿಯಿಂದ ಇಫ್ತಾರ್ ಕೂಟ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 22: ಬುಧವಾರ ದಕ್ಷಿಣ ಭಾರತದ ಮುಸ್ಲಿಂ ಸಮುದಾಯದವರಿಗಾಗಿ ಬೆಂಗಳೂರಿನಲ್ಲಿರುವ ಇಸ್ರೇಲಿನ ರಾಯಭಾರ ಕಚೇರಿ ಇಫ್ತಾರ್ ಕೂಟ ಆಯೋಜಿಸಿತ್ತು.

ಇದೇ ಮೊದಲ ಬಾರಿಗೆ ದಕ್ಷಿಣ ಭಾರತೀಯರಿಗಾಗಿ ಇಸ್ರೇಲ್ ಕೌನ್ಸೆಲ್ ಜನರಲ್ ಯಾಲ್ ಹಶಾವಿತ್ ಹಾಗೂ ಭಾರತದ ಹಣಕಾಸು ವ್ಯಾಪಾರ ವೇದಿಕೆ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.

 First time in south India, Bengaluru Israeli consulate hosts iftar for Muslim

ಮಸೀದಿಗಳ ಧರ್ಮಗುರುಗಳ ಸಂಘದ ಮುಖ್ಯ ಇಮಾಮ್, ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಚಿವ ರೋಷನ್ ಭೇಗ್ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಇಮಾಮ್, "ನಾನು ಇಸ್ರೇಲಿಗೆ ಭೇಟಿ ನೀಡಿದ ನಂತರ ಯಹೂದಿ ದೇಶದಲ್ಲಿ ಮುಸ್ಲಿಂರನ್ನು ನೋಡುವ ದೃಷ್ಠಿಯ ಬಗೆಗಿನ ನನ್ನ ಪೂರ್ವಾಗ್ರಹ ಬದಲಾಗಿದೆ," ಎಂದು ಹೇಳಿದರು.

 First time in south India, Bengaluru Israeli consulate hosts iftar for Muslim

ನಂತರ ಮಾತನಾಡಿದ ಇಸ್ರೇಲ್ ಕೌನ್ಸೆಲ್ ಜನರಲ್ ಯಾಲ್ ಹಶಾವಿತ್, "ನಾನು ಭಾರತೀಯ ಮುಸ್ಲಿಂ ಸಮುದಾಯದವರಿಗೆ ಇಸ್ರೇಲಿಗೆ ಬರುವಂತೆ ಕೇಳಿಕೊಳ್ಳುತ್ತೇನೆ. ಅವರು ತಮ್ಮ ಪೂರ್ವಾಗ್ರಹಗಳನ್ನು ಬದಲಾಯಿಸಿಕೊಳ್ಳಬಹುದು. ನಾವು ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ಉತ್ತಮ ಸಂಬಂಧ ಹೊಂದಿರಬೇಕು ಎಂದು ಬಯಸುತ್ತೇವೆ. ನರೇಂದ್ರ ಮೋದಿಯ ಮುಂದಿನ ಭೇಟಿ ಈ ಬಾಗದಲ್ಲಿ ಶಾಂತಿ ನೆಲಸಲು ಸಹಾಯಕವಾಗಿದೆ ಎಂದು ನಾನು ನಂಬಿದ್ದೇನೆ," ಎಂದು ಹೇಳಿದರು.

ಜುಲೈ ಮೊದಲ ವಾರದಲ್ಲಿ ನರೇಂದ್ರ ಮೋದಿ ಇಸ್ರೇಲಿಗೆ ಭೇಟಿ ನೀಡಲಿದ್ದಾರೆ.

English summary
Members of the Israeli consulate in Bengaluru reached out to the Muslim community across south India and hosted an iftar for them on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X