ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಸಾಕುಪ್ರಾಣಿಗಳ ಅಂತ್ಯ ಸಂಸ್ಕಾರಕ್ಕೆ ಚಿತಾಗಾರ

By Vanitha
|
Google Oneindia Kannada News

ಬೆಂಗಳೂರು, ಜುಲೈ, 23 : ಮೊದಲಿನಿಂದಲೂ ಸತ್ತ ಪ್ರಾಣಿಗಳನ್ನು ರಸ್ತೆ ಬದಿಯಲ್ಲೋ, ಚರಂಡಿಯಲ್ಲೋ ಎಸೆಯುವ ಕ್ರಮ ನಮ್ಮಲ್ಲಿದೆ. ಇದರಿಂದ ದೇಹ ಕೊಳೆತು ಹತ್ತಿರದ ಮನೆಗಳಿಗೆ ದುರ್ವಾಸನೆ ಹಬ್ಬಿ ಸಾರ್ವಜನಿಕರಿಗೆ ಕಿರಿ ಕಿರಿ ಆಗುತ್ತಿತ್ತು. ಜೊತೆಗೆ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಪರೋಕ್ಷವಾಗಿ ಆಹ್ವಾನ ಕೊಟ್ಟಂತಾಗುತ್ತಿತ್ತು.

ಸಾಕುವ ಎಲ್ಲಾ ಪ್ರಾಣಿಗಳನ್ನು ಮಣ್ಣಿನಲ್ಲಿ ಎಲ್ಲಾ ಪ್ರಾಣಿಗಳನ್ನು ಹೂಳಲು ಸಾಧ್ಯವಿಲ್ಲ ಎಂಬುದನ್ನು ಅರಿತ ಬಿಬಿಎಂಪಿ ಸಾಕು ಪ್ರಾಣಿಗಳ ಮೃತ ದೇಹಕ್ಕೆ ಮೋಕ್ಷ ನೀಡಲು ಮುಂದಾಗಿದೆ. ಈ ನಿಮಿತ್ತ ದಕ್ಷಿಣ ಭಾರತದ ಮೊದಲ ಸಾಕು ಪ್ರಾಣಿ ವಿದ್ಯುತ್ ಚಿತಾಗಾರ ನಿರ್ಮಿಸಲು ಯೋಜನೆ ರೂಪಿಸಿದ್ದು, ಒಂದು ವಾರದಲ್ಲಿ ಕಾರ್ಯಾರಂಭ ಮಾಡಲಿದೆ.[ಪಿಲಿಕುಳ ನಿಸರ್ಗಧಾಮಕ್ಕೆ ಬಂದ ಪರಿಸರ ಸ್ನೇಹಿ ಗಣಪ]

First Animal crematoria builds BBMP in Bangalore.

ಚಿತಾಗಾರದಿಂದ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು , ಮೊಲ, ಹಸು, ಕುದುರೆ, ಕತ್ತೆ, ಹಂದಿ ಸೇರಿದಂತೆ ಎಲ್ಲಾ ರೀತಿಯ ಪ್ರಾಣಿಗಳಿಗೆ ವೈಜ್ಞಾನಿಕವಾಗಿ ಮೋಕ್ಷ ದೊರೆಯಲಿದೆ. ಅಲ್ಲದೇ ಈ ಪ್ರಾಣಿಗಳ ಅಂತ್ಯಕ್ರಿಯೆಯನ್ನು ಉಚಿತವಾಗಿಯೇ ನಡೆಸಲು ಬಿಬಿಎಂಪಿ ಮುಂದಾಗಿದ್ದು, ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಪ್ಪಿಸಲು ಇದು ನೆರವಾಗಲಿದೆ. ಇದರ ನಿಮಿತ್ತ 2 ಬಿಬಿಎಂಪಿ ವ್ಯಾನ್ ವ್ಯವಸ್ಥೆ ಮಾಡಲಾಗಿದೆ.

ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತಾಗಾರದಲ್ಲಿ ಮೃತ ಪ್ರಾನಿಗಳ ದೇಹಕ್ಕೆ1,400 ರಿಂದ 1,800 ಡಿಗ್ರಿ ವಿದ್ಯುತ್ ಹರಿಸುವ ಮೂಲಕ ಸುಡಲಾಗುವುದು. ದೆಹದ ಗಾತ್ರಕ್ಕೆ ತಕ್ಕಂತೆ ವಿದ್ಯುತ್ ಹರಿಸಲಿದ್ದು. ಪ್ರಾಣಿಗಳ ದೆಹದಲ್ಲಿರುವ ಶಸ್ತ್ರಚಿಕಿತ್ಸೆ ಪಿನ್, ರಾಡ್ ಟ್ಯಾಗ್‌ಗಳು, ಕಾಲರ್ ಗಿರುವ ಮೆಟಲ್‌ ವಸ್ತುಗಳನ್ನು ಮ್ಯಾಗ್ನೆಟಿಕ್ ಯಂತ್ರದ ಮೂಲಕ ತೆಗೆಯಲಾಗುತ್ತದೆ. ಬಳಿಕ ಸಂಬಂಧಪಟ್ಟವರಿಗೆ ಭಸ್ಮ ಹಸ್ತಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
First Animal crematoria builds BBMP in Bangalore.This is the 1st animal crematoria in the South Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X