ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಡಿಬಿಡಿಯಲ್ಲಿ ಕುಮಾರಸ್ವಾಮಿ ಜಯಾ ಕೇಸಿಗೆ ಮೊಳೆ ಹೊಡೆದರೆ?

|
Google Oneindia Kannada News

ನವದೆಹಲಿ, ಫೆಬ್ರವರಿ, 23: ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಖುಲಾಸೆ ಸಂಬಂಧ ಕರ್ನಾಟಕ ಸರ್ಕಾರ ಸಲ್ಲಿಕೆ ಮಾಡಿದ್ದ ಮೇಲ್ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದೆ.

ಜಸ್ಟೀಸ್ ಪಿ ಸಿ ಘೋಷ್ ಮತ್ತು ಅಮಿತವ ರಾಯ್ ನೇತೃತ್ವದ ಪೀಠ ಅರ್ಜಿ ವಿಚಾರಣೆ ಮಾಡುತ್ತಿದೆ. ಕರ್ನಾಟಕ ಸರ್ಕಾರದ ಪರ ದುಶ್ಯಂತ ದಾವೆ ವಾದ ಮಂಡಿಸುತ್ತಿದ್ದಾರೆ. ವಾದ ಮಂಡಿಸಲು ನನಗೆ ಮೂರು ದಿನಗಳ ಅವಕಾಶ ಬೇಕು ಎಂದು ಅವರು ಸುಪ್ರೀಂ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.[ಜಯಾ ಆಸ್ತಿ ಪ್ರಕರಣ, ವಿಚಾರಣೆ ಮುಂದೂಡಲು ಕರ್ನಾಟಕದ ವಿರೋಧ]

Final hearing in Jayalalithaa DA case commences in Supreme Court

ಕರ್ನಾಟಕ ಸುಪ್ರೀಂ ನಲ್ಲಿ ಮುಂದಿಟ್ಟ ವಾದದ ಹೈಲೈಟ್ಸ್
* ಮ್ಯಾಗಜಿನ್ ಒಂದರ ಚಂದಾದಾರರಾಗಲು 14 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಸಂಗತಿಯನ್ನು ನಂಬಲು ಅಸಾಧ್ಯ.[ಜಯಾ ಪ್ರಕರಣದ ಸಂಪೂರ್ಣ ಮಾಹಿತಿ]
* ಮದುವೆ ಮತ್ತಿತರ ಸಮಾರಂಭದ ಹೆಸರಲ್ಲಿ ದೊಡ್ಡ ಪ್ರಮಾಣದ ಗಿಫ್ಟ್ ಗಳನ್ನು ಪಡೆದುಕೊಳ್ಳುವುದು ರಾಜಕೀಯ ನಾಯಕರಿಗೆ ಒಂದು ಫ್ಯಾಷನ್ ರೀತಿ ಆಗಿಹೋಗಿದೆ.
* ಜಯಲಲಿತಾ ಮತ್ತು ಅವರ ಸಂಬಂಧಿಗಳು ಅಕ್ರಮ ಆಸ್ತಿ ಗಳಿಕೆ ಮಾಡಿದ್ದರು ಎಂಬುದಕ್ಕೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ದಾಖಲೆ ಒದಗಿಸಲಾಗುವುದು.
* ಜಯಲಲಿತಾರನ್ನು ಖುಲಾಸೆ ಮಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಕೆಳಗಿನ ನ್ಯಾಯಾಲಯ ನೀಡಿರುವ ತೀರ್ಪನ್ನು ಮತ್ತೆ ಪುನರ್ ವಿಮರ್ಶೆ ಮಾಡಬೇಕು.[ನಿವೃತ್ತಿಯಾದ ಕುಮಾರಸ್ವಾಮಿ]
* ಜಯಲಲಿತಾ ಪಡೆದುಕೊಳ್ಳುತ್ತಿದ್ದದ್ದು ಕೇವಲ ಒಂದು ರು. ವೇತನ, ಹಾಗಾದರೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು?
* ಜಯಲಲಿತಾರನ್ನು ಖುಲಾಸೆ ಮಾಡಬಹುದೆಂದು ಊಹಿಸಲಾಗಿದೆಯೇ ವಿನಃ ಖುಲಾಸೆ ಮಾಡಲು ಯಾವ ಆಧಾರಗಳು ಸಿಕ್ಕಿಲ್ಲ
* ಕರ್ನಾಟಕ ಹೈ ಕೋರ್ಟ್ ಆಸ್ತಿ ಲೆಕ್ಕ ಹಾಕುವುದರಲ್ಲೂ ಎಡವಿದೆ.
* ಜಯಲಿತಾರ ಒಡನಾಡಿಗಳ ಬಳಿಯೂ ನಿರೀಕ್ಷೆಗೂ ಮೀರಿ ಆಸ್ತಿ ಪತ್ತೆಯಾಗಿತ್ತು. ಇದಕ್ಕೂ ದಾಖಲೆಗಳಿಲ್ಲ.
* ನ್ಯಾಯಮೂರ್ತಿ ಕುಮಾರಸ್ವಾಮಿ ತಮ್ಮ ನಿವೃತ್ತಿ ಗಡಿಬಿಡಿಯಲ್ಲಿ ಜಯಾ ಪ್ರಕರಣವನ್ನು ಮುಗಿಸಿದರೆ? ಹೀಗೆಂದೆ ಜೋಕ್ ಮಾಡಿದ್ದು ವಕೀಲ ದುಶ್ಯಂತ ದೇವ್.[ಅಕ್ರಮ ಆಸ್ತಿ ಗಳಿಕೆ: ಕಯಾ ನಿರ್ದೋಷಿ]
* ಪ್ರಕರಣವನ್ನು ಪರಿಶೀಲಿನೆ ಮಾಡಿದರೆ ಬೇಕೆಂತಲೇ ಹಲವು ಸಾರಿ ವಿಳಂಬ ನೀತಿ ಅನುಸರಿಸಿದ್ದು ಕಂಡುಬರುತ್ತದೆ.
* ಮಂಗಳವಾರದ ವಿಚಾರಣೆ ಮುಗಿದ್ದು ರಾಜ್ಯದ ಪರವಾಗಿ ಮತ್ತೆ ದುಶ್ಯಂತ್ ದಾವೆ ನಾಳೆ ವಾದಿಸಲಿದ್ದಾರೆ.

English summary
The final hearing of the appeal filed by the Karnataka government challenging the acquittal of Tamil Nadu Chief Minister has commenced before the Supreme Court. The matter is being heard by a Bench comprising Justices P C Ghose and Amitava Roy. Dushyanth Dave, arguing for Karnataka told the Supreme Court that he will take three days to complete his arguments. He opened the arguments for the state of Karnataka which is challenging Jayalalithaa's acquittal in the DA case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X