ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗಳಿಗೆ ಕಿಡ್ನಿ ಕೊಟ್ಟು, ಮರುಜೀವ ನೀಡಿದ ತಂದೆ

|
Google Oneindia Kannada News

ಬೆಂಗಳೂರು, ಅ.13 : ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗಳಿಗೆ ತಂದೆಯೇ ಕಿಡ್ನಿ ದಾನ ಮಾಡಿದ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ತಂದೆ ಮತ್ತು ಮಗಳು ಆರೋಗ್ಯವಾಗಿದ್ದಾರೆ.

ತೋಟದಲ್ಲಿ ಕೆಲಸಗಾರರಾಗಿರುವ ಪೂಜೇನಹಳ್ಳಿ ಮೂಲದ ಕೃಷ್ಣಪ್ಪ 12 ವರ್ಷದ ಮಗಳು ದೀಪಿಕಾಗೆ ಕಿಡ್ನಿಯನ್ನು ದಾನ ಮಾಡಿದ್ದಾರೆ. ನಾರಾಯಣ ಹೆಲ್ತ್‌ ಸಿಟಿಯಲ್ಲಿ ದೀಪಿಕಾಳಿಗೆ ಕಿಡ್ನಿ ಕಸಿ ಮಾಡುವ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದ್ದು, ತಂದೆ ಮತ್ತು ಮಗಳು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರಾದ ಸೌಮಿಲ್ ಗೌರ್ ಹೇಳಿದ್ದಾರೆ. [ಅಣ್ಣನಿಗೆ ಕಿಡ್ನಿ ದಾನ ಮಾಡಿದ ತಮ್ಮ ಅನಿಲ್ - ಸಂದರ್ಶನ]

narayana health

ಕೃಷ್ಣಪ್ಪ ಪುತ್ರಿ ಬಾಲ್ಯದಿಂದಲೂ ಮೂತ್ರಪಿಂಡ ವೈಫಲ್ಯದ ರೋಗವನ್ನು ಎದುರಿಸುತ್ತಿದ್ದಳು. ಈ ರೋಗ ಬೆಳಕಿಗೆ ಬಂದ ಮೇಲೆ ಒಂದು ವರ್ಷಕ್ಕಿಂತ ಹೆಚ್ಚು ಬದುಕಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು. ಆಗ ದೀಪಿಕಾಳನ್ನು ನಾರಾಯಣ ಹೆಲ್ತ್‌ ಸಿಟಿಗೆ ದಾಖಲು ಮಾಡಲಾಯಿತು. ವೈದ್ಯರು ಕಿಡ್ನಿ ಕಸಿ ಮಾಡುವುದು ಅನಿವಾರ್ಯ ಎಂದು ತಿಳಿಸಿದರು. [ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿದ ಜೀವಂತ ಹೃದಯ!]

12 ವರ್ಷದ ದೀಪಿಕಾಳಿಗೆ ಕಿಡ್ನಿ ದಾನ ಮಾಡುವವರು ಯಾರು? ಎಂಬ ಬಗ್ಗೆ ಸಾಕಷ್ಟು ಗೊಂದಲಗಳು ಆರಂಭವಾದವು. ಆಗ ದೀಪಿಕಾಳ ತಂದೆ ಕೃಷ್ಣಪ್ಪ ತಮ್ಮ ಕಿಡ್ನಿ ದಾನ ಮಾಡುವುದಾಗಿ ಹೇಳಿದರು. ಹಲವರು ಇದನ್ನು ವಿರೋಧಿಸಿದರೂ ಮಗಳಿಗೆ ನಾನು ಮರುಜೀವ ಕೊಡುತ್ತೇನೆ ಎಂದು ಕೃಷ್ಣಪ್ಪ ಕಿಡ್ನಿ ದಾನ ಮಾಡಿದರು. [ಹಿಂದೂ ಕಿಡ್ನಿ ಮುಸ್ಲಿಂಗೆ, ಮುಸ್ಲಿಂ ಕಿಡ್ನಿ ಹಿಂದೂಗೆ!]

ಜುಲೈನಲ್ಲಿ ದೀಪಿಕಾಳಿಗೆ ಕಿಡ್ನಿ ಕಸಿ ಮಾಡುವ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಅದು ಯಶಸ್ವಿಯಾಗಿದೆ. ಸದ್ಯ ತಂದೆ ಹಾಗೂ ಮಗಳಿಬ್ಬರೂ ಆರೋಗ್ಯವಾಗಿದ್ದಾರೆ. ಮುಂದಿನ ತಿಂಗಳಿನಿಂದ ಶಾಲೆಗೆ ಹೋಗಲು ದೀಪಿಕಾ ತಯಾರಾಗಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

'ನನ್ನ ಮಗಳಿಗೆ ನಾನೇ ಕಿಡ್ನಿ ದಾನ ಮಾಡಿರುವುದರಿಂದ ಅವಳಿಗೆ ಎರಡನೇ ಜನ್ಮವನ್ನು ನೀಡಿದಂತಹ ಅನುಭವವಾಗಿದೆ'. ಹೆಣ್ಣು ಮತ್ತು ಗಂಡು ಮಕ್ಕಳನ್ನು ಪೋಷಕರು ಸಮಾನವಾಗಿ ಕಾಣಬೇಕು ಎಂದು ಕೃಷ್ಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

English summary
Krishnappa resident of Poojenahalli, Bangalore donated his kidney to his 12-year-old daughter Deepika after she was diagnosed with juvenile nephronophthisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X