ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವ್ಯಾಸಿ ಕೃಷಿಕರಿಗಾಗಿ ಫೇಸ್ ಬುಕ್ ವೇದಿಕೆಯಿಂದ ಕರೆ

By Mahesh
|
Google Oneindia Kannada News

ಬೆಂಗಳೂರು, ಜುಲೈ 21: ವೃತಿಪರ ಯುವಕ, ಯುವತಿಯರು ವಾರಾಂತ್ಯದಲ್ಲಿ ರೈತರಿಗೆ ಸಹಾಯ ಮಾಡುವ ವೇದಿಕೆಯೊಂದು ಫೇಸ್ ಬುಕ್ ನಲ್ಲಿ ಆರಂಭವಾಗಿದೆ. ಈಗಾಗಲೇ ಜನಪ್ರಿಯಗೊಂಡಿರುವ ಕೃಷಿ ಗುಂಪಿನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.

Agricultist ಗುಂಪಿನ ಸದಸ್ಯ ಹರೀಶ್ ಅವರು ಹೀಗೊಂದು ಅವಕಾಶದ ಬಗ್ಗೆ ಬರೆದಿದ್ದಾರೆ. "ಹವ್ಯಾಸಿ ಕೃಷಿಕ" ಗುಂಪಿಗೆ ಸ್ವಾಗತ ಕೋರಿ, ಏನು ಈ ಗುಂಪಿನ ಉದ್ದೇಶ ಅಂತ ಹಲವಾರು ಕೇಳಿದರು, ಅದಕ್ಕೆ ಈ ಮಾಹಿತಿ ಓದಿ.

ಇವತ್ತು ಒಬ್ಬ ವೃತಿಪರ ಕೃಷಿಕನಿಗೆ ಕೂಲಿ ಆಳುಗಳು ಸಿಗುವುದು ಕಷ್ಟ. ಸಿಕ್ಕಿದರೂ, ಅವರ ದಿನದ ಸಂಬಳ ದಿನ ದಿಂದ ದಿನಕ್ಕೆ ಹೆಚ್ಚುತ್ತಾ ಇದೆ. ನಾವು ಹವ್ಯಾಸಿ ಕೃಷಿಕರು, ನಮ್ಮ ವಾರಾಂತ್ಯದಲ್ಲಿ ಇವರಿಗೆ ಸಹಾಯ ಮಾಡುವುದು ಇದು ಮೊದಲ ಮತ್ತು ಪ್ರಮುಖ ಉದ್ದೇಶ! ಶ್ರಮ ದಾನಕ್ಕಿಂತ ಉತ್ತಮವಾದ ದಾನ ಇಲ್ಲ.

ವೃತಿಪರ ಕೃಷಿಕನಿಗೆ ತನ್ನ ತೋಟದಲ್ಲಿ ಬೆಳದ ವಸ್ತುಗಳಿಗೆ ಸರಿಯಾದ ಬೆಲೆ ಸಿಗ್ಗುತ್ತ ಇಲ್ಲ. ನಾವು ಇವರ ತೋಟಕ್ಕೆ ಹೋದಾಗ, ಇವರ ಹತ್ತಿರ ಇರುವ ಕೃಷಿ ಪದಾರ್ಥ ತೆಗೆದುಕೊಳ್ಳೋಣ. ನಮ್ಮ ಅಕ್ಕ ಪಕ್ಕ ಮನೆಗಳಿಗೆ ಬೇಕಾದ ಹಣ್ಣು ತರಕಾರಿ ಇವರಿಂದ ನೆರವಾಗಿ ತೆಗೆದುಕೊಳ್ಳೋಣ. ಈ ಎರಡು ಉದ್ದೇಶದಿಂದ ಈ ಗುಂಪು ಶುರು ಆಗಿವೆ! ದಯವಿಟ್ಟು ಈ google form ನಿಮಗೆ ಗೊತ್ತು ಇರುವ ಸ್ನೇಹಿತರಿಗೆ ಕಳುಹಿಸಿ ಎಂದು ಕರೆ ನೀಡಿದ್ದಾರೆ.

Facebook group Agriculturist

ಫೇಸ್ಬುಕಿನ ಕೃಷಿಕರ ವೇದಿಕೆ: ಈಗ ಬದಲಾವಣೆಯ ಕಾಲ. ಬೆರಳ ತುದಿಯಲ್ಲಿ ಮಾಹಿತಿ ಪಡೆಯುವ ಈ ಸಮಯದಲ್ಲಿ ಸಾಮಾಜಿಕ ತಾಣಗಳ ಮೂಲಕವೂಕೃಷಿಕರು ಮಾಹಿತಿ, ಸಂವಹನ ಮಾಡಬೇಕು ಎಂಬ ಉದ್ಡೇಶದಿಂದ ಈ ಗುಂಪು. ಹಾಗಂತ ಇಲ್ಲಿ ರೈತರೇ ಬೇಕೆಂದೇನಿಲ್ಲ, ಅನುಭವಗಳು, ಮಾಹಿತಿ ಎಲ್ಲರಿಗೂ ಬೇಕಲ್ಲ.

ಕೃಷಿಕರು ಹೊಲದ ನಡುವೆ, ಜಮೀನಿನ ನಡುವೆ ಪಡೆದ ಅನುಭವಗಳನ್ನು, ಸಮಸ್ಯೆಗಳನ್ನು ಇಲ್ಲೂ ಹಂಚಿಕೊಂಡರೆ, ನಮ್ಮವರೇ ಈ ಸಮಸ್ಯೆಗಳಿಗೆ ಉತ್ತರ ಕೊಡಬಹುದು, ಹೊಲದ ಅನುಭವವನ್ನು ಸ್ವೀಕರಿಸಬಹುದು. ಸುಮ್ಮನೆ ಕೂತು ನೋಡಿದರೂ ಸಾಕು. ರೈತರ ಕಷ್ಟ, ಸುಖಗಳು ಗೊತ್ತಾಗಬಹುದಲ್ಲಾ.

ಅದು ಸಾಕು. ಇಂದಲ್ಲ ನಾಳೆಯಾದರೂ ಕೃಷಿ ಹಸಿರಾದೀತು, ಹೊಲದಲ್ಲಿ ಚಿನ್ನ ಬೆಳೆದೀತು ಎಂಬ ಆಶಾವಾದಿಯಾಗಿರೋಣ. ಅಷ್ಟು ಸಾಕು ಎಂದು ಹೇಳಿಕೊಂಡಿರುವ ಈ ಗುಂಪಿನಲ್ಲಿ ಸರಿ ಸುಮಾರು 20 ಸಾವಿರಕ್ಕೂ ಅಧಿಕ ಉತ್ಸಾಹಿಗಳಿದ್ದಾರೆ. ಕೃಷಿ ಚಟುವಟಿಕೆ, ಹೊಸ ಹೊಸ ಕೃಷಿ ಸಾಧನಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಫೇಸ್ ಬುಕ್ ಪುಟಕ್ಕೆ ದಾರಿ ಇಲ್ಲಿದೆ. ವೀಕೇಂಡ್ ರೈತರಾಗಲು ಗೂಗಲ್ ಅರ್ಜಿಯನ್ನು ತುಂಬಲು ಇಲ್ಲಿ ಕ್ಲಿಕ್ ಮಾಡಿ

English summary
A forum has been formed to connect full time farmers and weekend farmers together. A Facebook group named Agriculturist has posted to invite enthusiast youth to assist Agriculturist. Interested can join the forum by filling the form.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X