ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಅಭಿವೃದ್ಧಿಗೊಂದು ಖಾತೆ, ಸಚಿವರ ನೇಮಕ

|
Google Oneindia Kannada News

ಬೆಂಗಳೂರು, ಆಗಸ್ಟ್ 19 : 'ಬೆಂಗಳೂರು ನಗರದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವ ಸ್ಥಾನ ಹುಟ್ಟು ಹಾಕುವುದಾಗಿ' ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಬಿಬಿಎಂಪಿ ಚುನಾವಣೆ ಬಳಿಕ ಸಚಿವ ಸಂಪುಟ ಪುನಾರಚನೆ ಮಾಡಲಾಗುತ್ತದೆ. ಆಗ ಸಚಿವರನ್ನು ನೇಮಕ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮಂಗಳವಾರ ಚುನಾವಣಾ ಪ್ರಚಾರದ ನಡುವೆಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಬೆಂಗಳೂರು ನಗರ ಎಂಬ ಸ್ವತಂತ್ರ ಖಾತೆ ಹುಟ್ಟು ಹಾಕಿ ಅದಕ್ಕೆ ಒಬ್ಬರು ಸಚಿವರನ್ನು ನೇಮಕ ಮಾಡಲಾಗುತ್ತದೆ' ಎಂದು ತಿಳಿಸಿದರು. [ಬಿಜೆಪಿ ದುರಾಡಳಿತ ಚಾರ್ಜ್ ಶೀಟ್ ನಲ್ಲೇನಿದೆ?]

siddaramaiah

'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಏನೇ ಬಂದರೂ ಸ್ವತಂತ್ರ ಖಾತೆ ಹುಟ್ಟು ಹಾಕುವುದು ಖಚಿತ. ಚುನಾವಣೆ ಬಳಿಕ ಸಂಪುಟ ಪುನಾರಚನೆ ಮಾಡಲಾಗುತ್ತದೆ. ಆಗ ಪ್ರತ್ಯೇಕ ಖಾತೆಯನ್ನು ಹುಟ್ಟು ಹಾಕಲಾಗುತ್ತದೆ' ಎಂದು ಹೇಳಿದರು. [ಬೆಂಗಳೂರು ಅಭಿವೃದ್ಧಿ, ಸಿದ್ದರಾಮಯ್ಯ ನೀಡಿದ ಭರವಸೆಗಳು]

ಬೆಂಗಳೂರು ಅಭಿವೃದ್ಧಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಯ ಮುನ್ನೋಟ ಹೊಂದಿರುವ 'ಹೊಸ ದೃಷ್ಟಿ..ಸೃಷ್ಟಿ' ಎನ್ನುವ ಕೈಪಿಡಿಯನ್ನು ಬಿಡುಗಡೆ ಮಾಡಿದ್ದಾರೆ. ಇದರ ಜಾರಿಗೆ ಕಾರ್ಯಪಡೆ ರಚನೆ ಮಾಡುತ್ತೀರಾ? ಎಂದು ಮಾಧ್ಯಮದವರು ಪ್ರಶ್ನಿಸಿದರು.

'ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ಸರ್ಕಾರ ಪಾಲಿಕೆ ಮೂಲಕ 'ಹೊಸ ದೃಷ್ಟಿ..ಸೃಷ್ಟಿ' ಕೈಪಿಡಿಯಲ್ಲಿ ನೀಡಿರುವ ಭರವಸೆ ಈಡೇರಿಸಬಹುದು. ಇದಕ್ಕಾಗಿ ಕಾರ್ಯಪಡೆ ರಚನೆ ಮಾಡುವುದಿಲ್ಲ. ಸ್ವತಂತ್ರ ಖಾತೆ ಸೃಷ್ಟಿಸಿದರೆ ಅವರ ಮೂಲಕವೂ ಕೆಲಸಗಳನ್ನು ಮಾಡಿಸಬಹುದು' ಎಂದು ಸಿದ್ದರಾಮಯ್ಯ ಉತ್ತರ ನೀಡಿದರು.

English summary
Karnataka Chief Minister Siddaramaiah said, after BBMP elections separate minister will be appointed to the development of Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X