ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ಬಗ್ಗೆ ತನಿಖೆ ಆರಂಭ

By Mahesh
|
Google Oneindia Kannada News

ಬೆಂಗಳೂರು, ಜುಲೈ 15: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಅಕ್ರಮ ಅವ್ಯವಹಾರಗಳ
ವಿಚಾರಣೆಯನ್ನು ನಿವೃತ್ತ ಐಎಎಸ್ ಅಧಿಕಾರಿ ವಿನಯ­ಕುಮಾರ್ ಅವರ ತಂಡ ಆರಂಭಿಸಿದೆ.

ವಿನಯಕುಮಾರ್ ಅಧ್ಯಕ್ಷತೆಯ ಸಮಿತಿ ಒಂದು ವಾರದಲ್ಲಿ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಲಿದೆ. ಒಂದು ತಿಂಗಳಲ್ಲಿ ಸಮಗ್ರ ವರದಿ ನೀಡಲು ಸೂಚಿಸಲಾಗಿದೆ.

ಕಾರಾಗೃಹ ಇಲಾಖೆಯ ಡಿಐಜಿ ರೂಪಾ ಅವರು ನೀಡಿದ ಎರಡು ವರದಿಗಳನ್ನು ಆಧಾರವಾಗಿಟ್ಟುಕೊಂಡು ತನಿಖೆ ಕೈಗೊಳ್ಳಲಾಗುತ್ತದೆ. ರಾಜ್ಯದ ವಿವಿಧ ಜೈಲುಗಳಲ್ಲಿ ನಡೆದ ಪ್ರತಿಭಟನೆಯ ವಿಡಿಯೊ ಹಾಗೂ ಫೋಟೊಗಳು ಹೇಗೆ ಮಾಧ್ಯಮಗಳಿಗೆ ಸೋರಿಕೆಯಾಗಿದೆ ಎಂಬುದರ ಬಗ್ಗೆ ಕೂಡಾ ತನಿಖೆ ಕೈಗೊಳ್ಳುವ ನಿರೀಕ್ಷೆಯಿದೆ.

ಸದ್ಯಕ್ಕೆ ವಿವಿಐಪಿ ಕೈದಿಗಳಾದ ಶಶಿಕಲಾ ನಟರಾಜನ್, ಅಬ್ದುಲ್ ತೆಲಗಿಗೆ ನೀಡಿರುವ ವಿಶೇಷ ಸೌಲಭ್ಯದ ಬಗ್ಗೆ ತನಿಖೆ ನಡೆಸಲಾಗುತ್ತದೆ.

ತನಿಖೆ ಸ್ವಾಗತಿಸಿದ ಡಿ ರೂಪಾ

ತನಿಖೆ ಸ್ವಾಗತಿಸಿದ ಡಿ ರೂಪಾ

'ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಮುಖ್ಯಮಂತ್ರಿ ನೀಡಿರುವ ಆದೇಶವನ್ನು ಸ್ವಾಗತಿಸುತ್ತೇನೆ. ಇದರಿಂದ ಸತ್ಯಾಂಶ ಹೊರಬರಲಿದೆ', ಇಲಾಖೆಯ ನಿಯಮಾವಳಿಯಂತೆ ಕೆಲಸ ಮಾಡುತ್ತಿದ್ದೇನೆ. ಅಕ್ರಮದ ಬಗ್ಗೆ ಇಲಾಖೆಯ ಮುಖ್ಯಸ್ಥರಾದ ಡಿಜಿಪಿ ಅವರಿಗೇ ವರದಿ ನೀಡಿದ್ದೇನೆ. ಮಾಧ್ಯಮಗಳಿಗೆ ಯಾವುದೇ ಮಾಹಿತಿ ಸೋರಿಕೆ ಮಾಡಿಲ್ಲ ಎಂದರು'

ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ

ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ

ಕಾನೂನು ಎಲ್ಲರಿಗೂ ಅನ್ವಯವಾಗಬೇಕು. ನನಗಷ್ಟೇ ಅಲ್ಲ. ಈ ಪ್ರಕರಣದಲ್ಲಿ ನನ್ನನ್ನು ಗುರಿ ಮಾಡಲಾಗುತ್ತಿದೆ.ಐದು ವರ್ಷಗಳ ಹಿಂದೆ ಸೋನಿಯಾ ನಾರಂಗ್ ಅವರೂ ಪ್ರಕರಣವೊಂದರಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಆಗ ಅವರು ಮುಖ್ಯಮಂತ್ರಿ ಅವರನ್ನೇ ಪ್ರಶ್ನೆ ಮಾಡಿದ್ದರು. ಅದೇ ರೀತಿ ಹಲವು ಅಧಿಕಾರಿಗಳು ಮಾಧ್ಯಮ ಜತೆ ಮಾತನಾಡಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿತ್ತು ಎಂದು ಡಿಐಜಿ ಡಿ ರೂಪಾ ಹೇಳಿದ್ದಾರೆ.

ಮತ್ತೊಂದು ಪತ್ರ ಬರೆದ ರೂಪಾ

ಮತ್ತೊಂದು ಪತ್ರ ಬರೆದ ರೂಪಾ

'ಭ್ರಷ್ಟಾಚಾರ ಆರೋಪ ಕೇಳಿಬಂದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿ ಪ್ರತಿಭಟನೆ ನಡೆಸಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕ ಕೃಷ್ಣಕುಮಾರ್‌ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಿ'
'ಅಕ್ರಮದ ಬಗ್ಗೆ ನಿಮಗೆ ಪತ್ರ ಬರೆದಿದ್ದೇನೆ. ಅದಕ್ಕಾಗಿ ನನ್ನ ವಿರುದ್ಧ ಜೈಲು ಅಧೀಕ್ಷಕರು ಮಾಧ್ಯಮಗಳಿಗೆ ಹೇಳಿಕೆ ನೀಡಿ ಕರ್ತವ್ಯಲೋಪ ಎಸಗಿದ್ದಾರೆ. ಸಿಬ್ಬಂದಿಯೂ ಪ್ರತಿಭಟನೆ ನಡೆಸಿದ್ದಾರೆ. ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬಾರದೇಕೆ' ಎಂದು ಎಂದು ರೂಪಾ ಅವರು ಸತ್ಯನಾರಾಯಣರಾವ್‌ ಅವರಿಗೆ ಪತ್ರ ಬರೆದಿದ್ದಾರೆ.

ಜೈಲು ಸ್ವಚ್ಛತೆ ಆರಂಭ

ಜೈಲು ಸ್ವಚ್ಛತೆ ಆರಂಭ

ನಿವೃತ್ತ ಐಎಎಸ್ ಅಧಿಕಾರಿ ವಿನಯಕುಮಾರ್ ಅವರ ನೇತೃತ್ವದ ತಂಡ ತನಿಖೆ ಆರಂಭಿಸಿದ್ದು, ಭಾನುವಾರದಂದೇ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂಬ ಮಾಹಿತಿ ಪಡೆದ ಡಿಜಿ ಐಜಿ ಸತ್ಯನಾರಾಯಣರಾವ್ ಅವರು ಜೈಲಿಗೆ ದಿಢೀರ್ ಭೇಟಿ ನೀಡಿದ್ದರು. ಜೈಲಿನಲ್ಲಿರುವ ಅಕ್ರಮಗಳ ಸ್ವಚ್ಛತಾ ಕಾರ್ಯ ಆರಂಭವಾಗಿದ್ದು, ವಿವಿಐಪಿ ಕೈದಿಗಳಿಗೆ ನೀಡಿದ ಸೌಕರ್ಯಗಳನ್ನು ಹಿಂಪಡೆದಿರುವ ಮಾಹಿತಿ ಹೊರ ಬಂದಿದೆ.

English summary
Retired IAS officer Vinay Kumar and team begins its probe charges of irregularities at the Bengaluru central prison in Parappana Agrahara, including preferential treatment to AIADMK (Amma) leader V K Sasikala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X