ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಜಿ ರಸ್ತೆಯಲ್ಲಿ ಮಹಿಳೆಯರ ಮೇಲೆ ದಾಳಿಗೆ ಯತ್ನ

By Kiran B Hegde
|
Google Oneindia Kannada News

ಬೆಂಗಳೂರು, ನ. 24: ದೇಶದಲ್ಲಿ ಮೇಲಿಂದ ಮೇಲೆ ಅತ್ಯಾಚಾರಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಅಭದ್ರತೆಯ ಭಾವನೆ ಎದುರಿಸುತ್ತಿದ್ದಾರೆ. ಆದರೆ, ಪೊಲೀಸ್ ಇಲಾಖೆ ಮಹಿಳೆಯರ ರಕ್ಷಣೆಗಾಗಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲವೇ?

ಈ ಅನುಮಾನ ಬರಲು ಕಾರಣವಾಗಿದ್ದು ಬೆಂಗಳೂರಿನ ಲೆವೆಲ್ಲೆ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದ ಘಟನೆ. ನಗರದಲ್ಲಿ ಶನಿವಾರ ಹಾಗೂ ಭಾನುವಾರ ಸಂಜೆ 5ರಿಂದ ತಡ ರಾತ್ರಿಯವರೆಗೂ ಬೀದಿಗಳಲ್ಲಿ ಹೆಚ್ಚು ಜನಜಂಗುಳಿ ಇರುತ್ತದೆ. ಈ ಸಂದರ್ಭದಲ್ಲಿ ಹೆಚ್ಚು ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ, ಎಲ್ಲ ಕಡೆ ನೇಮಿಸಿಲ್ಲ ಎಂಬುದಕ್ಕೆ ಇಲ್ಲಿದೆ ಉದಾಹರಣೆ. [ಹಾಲು ತರಲು ಹೋದ ಮಹಿಳೆ ಕೊಲೆ]

woman

ಕೆಲವು ಮಹಿಳೆಯರು ಲಾವಿಲ್ಲೆ ರಸ್ತೆಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ರಾತ್ರಿ ಊಟ ಮಾಡಿದ ನಂತರ ಐಸ್‌ಕ್ರೀಂ ತಿನ್ನುವುದಕ್ಕಾಗಿ ಎಂಜಿ ರಸ್ತೆಗೆ ತೆರಳಿದ್ದರು. ಅಲ್ಲಿ ಕಾರ್ ಪಾರ್ಕ್ ಮಾಡಲು ಸ್ಥಳವಿಲ್ಲದ್ದರಿಂದ ಲೇಕ್ ವ್ಯೂ ಪ್ರದೇಶದವರೆಗೂ ಮುನ್ನಡೆಸಬೇಕಾಯಿತು. ಎಸಿ ಆನ್ ಮಾಡಿದ್ದರಿಂದ ಕಿಟಕಿ ಗಾಜುಗಳನ್ನು ಮುಚ್ಚಲಾಗಿತ್ತು.

ಆಗ ಕಾರ್ ಚಾಲಕ ಐಸ್‌ ಕ್ರೀಂ ತರುವುದಕ್ಕಾಗಿ ಕಾರ್‌ನಿಂದ ಇಳಿದು ಐಸ್‌ ಕ್ರೀಂ ಇದ್ದ ಸ್ಥಳಕ್ಕೆ ತೆರಳಿದ. ಕೆಲವೇ ಕ್ಷಣಗಳಲ್ಲಿ ಕಾರನ್ನು ಐವರು ಸುತ್ತುವರಿದರು. ಕಾರ್‌ನಲ್ಲಿದ್ದ ಮಹಿಳೆಯರಿಗೆ ಹೊರಗಿಳಿಯುವಂತೆ ಸೂಚಿಸಿದರು. ಇದರಿಂದ ಬೆದರಿದ ಮಹಿಳೆಯರು ಕಾರ್ ಬಾಗಿಲುಗಳನ್ನು ಭದ್ರಪಡಿಸಿಕೊಂಡಿದ್ದಲ್ಲದೆ, ಗೂಂಡಾಗಳ ಫೋಟೊ ಹಾಗೂ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದರು. ಹಲ್ಲೆ ನಡೆಸುವುದಕ್ಕಾಗಿ ವಿವಿಧ ಆಯುಧಗಳನ್ನು ಗೂಂಡಾಗಳು ಹೊರತೆಗೆದಾಗ ಮಹಿಳೆಯರು ಸಹಾಯಕ್ಕಾಗಿ ಕೂಗಲು ಆರಂಭಿಸಿದರು. ಆಗ ಗೂಂಡಾಗಳು ಅಲ್ಲಿಂದ ಕಾಲ್ಕಿತ್ತರು. [ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ]

ಪೊಲೀಸ್ ಸಿಬ್ಬಂದಿ ಇರಲಿಲ್ಲ:
ಮಹಿಳೆಯರ ಕೂಗು ಕೇಳಿ ಅಲ್ಲಿ ಸಾರ್ವಜನಿಕರು ಗುಂಪುಗೂಡಿದರು. ಅಷ್ಟು ಹೊತ್ತಿಗೆ ಚಾಲಕ ಕೂಡ ಆಗಮಿಸಿದ. ಆದರೆ, ಅಲ್ಲೆಲ್ಲೂ ಓರ್ವ ಪೊಲೀಸ್ ಕೂಡ ಕಂಡುಬರಲಿಲ್ಲ. ಆದ್ದರಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲಾಗಿದೆ. ಆದರೆ, ವಾರದ ಅಂತ್ಯವನ್ನು ಸಂತೋಷದಿಂದ ಕಳೆಯಲು ಬಂದಿದ್ದ ಮಹಿಳೆಯರು ಎಂದೂ ಮರೆಯಲಾಗದ ಭಯಾನಕ ಅನುಭವದೊಂದಿಗೆ ಮನೆಗೆ ಮರಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಕೇಂದ್ರ ಪೊಲೀಸ್ ಉಪ ಆಯುಕ್ತ ಸಂದೀಪ್ ಪಾಟೀಲ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆರೋಪಿಗಳ ಫೋಟೊ ಹಾಗೂ ವಿಡಿಯೋ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

English summary
Five men group tried to attack on women in car at MG road. Women quickly recorded their photos and videos and started to shout. Men quickly disappeared from there. Then women registered a complaint in Cubban Park police staton.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X