ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಲೇಜು ವಿದ್ಯಾರ್ಥಿಗಳಿಗಾಗಿ ಎಂAPP ಯುವರ್ ವೇ ಬಿಡುಗಡೆ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್, 16: ದೇಶದಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆ Geographic Information System (GIS) ಗೆ ಸಾಫ್ಟ್‍ವೇರ್ ಮತ್ತು ಪರಿಹಾರಗಳನ್ನು ಪೂರೈಕೆ ಮಾಡುವ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಎಸ್ರಿ ಇಂಡಿಯಾ(Esri India) ಎರಡನೇ ಸರಣಿಯ ಎಂApp ಯುವರ್ ವೇ 2016 (mApp Your Way 2016) ಅನ್ನು ಬಿಡುಗಡೆ ಮಾಡಿದೆ. ಜಿಐಎಸ್ ತಂತ್ರಜ್ಞಾನದಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಲ್ಲಿರುವ ಕೌಶಲ್ಯ ಮತ್ತು ಸಾಮಥ್ರ್ಯವನ್ನು ತೋರ್ಪಡಿಸಲು ವೇದಿಕೆ ಕಲ್ಪಿಸುವುದು ಈ Appನ ಪ್ರಮುಖ ಉದ್ದೇಶವಾಗಿದೆ.

ಕಳೆದ ವರ್ಷ ಅಭಿವೃದ್ಧಿಯ ಸವಾಲುಗಳಿಗೆ ಪರಿಹಾರ ಒದಗಿಸುವ ಸಲುವಾಗಿ ಈ ಎಂಅಪ್ ಯುವರ್ ವೇ ಅನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಎಂAPP ಯುವರ್ ವೇ 2016 ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ (ಪದವಿ/ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳಿಗೆ) ಮುಕ್ತ ಅವಕಾಶ ನೀಡಲಾಗಿದೆ.

mApp Your Way 2016

ವಿಶ್ವದಾದ್ಯಂತ 3,50,000 ಸಂಸ್ಥೆಗಳು ಎಸ್ರಿ ಇಂಡಿಯಾದ ಸಾಫ್ಟ್ ವೇರ್ ಅನ್ನು ಬಳಸುತ್ತಿವೆ. ವಿಶ್ವವಿಖ್ಯಾತ 500 ಕಂಪನಿಗಳ ಪೈಕಿ ಮೂರನೇ ಎರಡಷ್ಟು ಕಂಪನಿಗಳು, 7,000 ಕ್ಕೂ ಹೆಚ್ಚು ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಈ ಕಂಪನಿಯ ಸಾಫ್ಟ್‍ವೇರ್ ಬಳಸುತ್ತಿವೆ. ಎಸ್ರಿ ಅಪ್ಲಿಕೇಶನ್‍ಗಳು 1 ದಶಲಕ್ಷಕ್ಕೂ ಅಧಿಕ ಡೆಸ್ಕ್ ಟಾಪ್ ಗಳು, ಸಾವಿರಾರು ವೆಬ್ ಸೈಟ್ ಗಳು ಮತ್ತು ಸರ್ವರ್ ಗಳಲ್ಲಿ ಬಳಕೆಯಾಗುತ್ತಿವೆ. ಎಸ್ರಿ ಇಂಡಿಯಾ ಈಗಾಗಲೇ ಪ್ರಮುಖ ಸಮಸ್ಯೆಗಳಾದ ಕುಡಿಯುವ ನೀರು ಕೊರತೆ, ಸಂಪನ್ಮೂಲ ಪತ್ತೆ ಮತ್ತು ಸುಸ್ಥಿರ ಅಭಿವೃದ್ಧಿ ಸಮಸ್ಯೆ ಪರಿಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದಲ್ಲದೇ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ ಅಭಿಯಾನ ಮತ್ತು 100 ಸ್ಮಾರ್ಟ್ ಸಿಟಿ ನಿರ್ಮಾಣ ಪ್ರಕ್ರಿಯೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದೆ.

ಈ ವಿನೂತನ ಪ್ರಯತ್ನದಲ್ಲಿ ಜಿಯೋಸ್ಪಾಶಿಯಲ್ ತಂತ್ರಜ್ಞಾನ ಬಳಸುವ ಶೈಕ್ಷಣಿಕ ಸಂಸ್ಥೆಗಳು ಸಹಯೋಗ ಹೊಂದಿವೆ. ವಿದ್ಯಾರ್ಥಿಗಳಿಗೆ ಒಂದು ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗುತ್ತದೆ.

ಎಸ್ರಿ ವೇದಿಕೆಯಡಿ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಸರ್ಕಾರದ ಯೋಜನೆಗಳು, ಪರಿಸರ, ಸಾರಿಗೆ, ರೀಟೇಲ್, ಆರೋಗ್ಯ, ಶಿಕ್ಷಣ, ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವ ಸವಾಲುಗಳನ್ನು ಪರಿಹರಿಸುವ ರೀತಿಯಲ್ಲಿ ಅಪ್ಲಿಕೇಷನ್ ಅಭಿವೃದ್ಧಿಪಡಿಸಬೇಕು. ವಿದ್ಯಾರ್ಥಿಗಳು ಅಭಿವೃದ್ಧಿಪಡಿಸುವ ಆಪ್ ಅನ್ನು ತಜ್ಞರು ಪರಿಶೀಲಿಸಲಿದ್ದಾರೆ.

ಅಂದರೆ, ಆಪ್ ನಲ್ಲಿರುವ ವಿಶೇಷತೆ, ಸಮಸ್ಯೆಗಳ ಪರಿಹಾರಕ್ಕೆ ಸುಲಭೋಪಾಯಗಳು, ಆವಿಷ್ಕಾರಕ ಗುಣಗಳು, ಜನಸಾಮಾನ್ಯರ ಮೇಲೆ ಆಗಬಹುದಾದ ಪರಿಣಾಮಗಳು, ಅದರ ಉಪಯೋಗಗಳು ಸೇರಿದಂತೆ ಮತ್ತಿತರೆ ಪ್ರಮುಖ ಅಂಶಗಳ ಆಧಾರದಲ್ಲಿ ಅವಲೋಕಿಸಲಾಗುತ್ತದೆ.

English summary
Esri India is an end-to-end Geospatial Information Systems (GIS) solutions provider and enjoys a leadership position with Esri ArcGIS suite of software and other related products.Launches mApp Your Way 2016 for college students
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X