ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೌಕರರ ಪ್ರತಿಭಟನೆ ಗಲಭೆಗೆ ಕಾರಣವಾಗಿದ್ದು ಹೇಗೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 20 : ಗಾರ್ಮೆಂಟ್ಸ್ ನೌಕರರು ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ನಡೆದ ಗಲಭೆಯಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಬೆಂಗಳೂರು ನಗರದ ಜನರು ಆಗಿರುವ ನಷ್ಟಕ್ಕೆ ನೌಕರರನ್ನು ದೂರುತ್ತಿದ್ದಾರೆ. ಆದರೆ, ಗಲಭೆ ಏಕೆ ನಡೆಯಿತು? ಎಂಬುದು ನೌಕರರಿಗೂ ತಿಳಿದಿಲ್ಲ.

ಗಾರ್ಮೆಂಟ್ಸ್ ಮತ್ತು ಟೆಕ್ಸ್‌ಟೈಲ್ ಉದ್ಯಮಗಳ ನೌಕರರ ಸಂಘದ ಅಧ್ಯಕ್ಷೆ ಪ್ರತಿಭಾ ಅವರು ಒನ್ ಇಂಡಿಯಾ ಜೊತೆ ಮಾತನಾಡಿದ್ದು, 'ನೌಕರರು ನಡೆಸುತ್ತಿದ್ದ ಪ್ರತಿಭಟನೆ ಗಲಭೆಗೆ ತಿರುಗಿದ್ದು ಹೇಗೆ? ಎಂದು ತಮಗೂ ತಿಳಿಯುತ್ತಿಲ್ಲ' ಎಂದು ಹೇಳಿದ್ದಾರೆ. [ಬೆಂಗಳೂರು 'ಪಿಎಫ್' ಕಾರ್ಮಿಕರ ದಂಗೆಯ ಹಿಂದಿನ ಕಾಣದ 'ಕೈ'ಗಳು?]

garment

'ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಪ್ರತಿಭಟನೆ ಹಾಗೆಯೇ ಆರಂಭವಾಗಿತ್ತು. ಆದರೆ, ನೌಕರರ ಜೊತೆ ಸೇರಿಕೊಂಡ ಕೆಲವು ಜನರು ಗಲಭೆ ಆರಂಭಿಸಿದರು' ಎನ್ನುತ್ತಾರೆ ಪ್ರತಿಭಾ ಅವರು. ನೌಕರರ ಜೊತೆ ಸೇರಿದವರು ಯಾರು? ಎಂಬುದು ತನಿಖೆಯಿಂದ ಮಾತ್ರ ತಿಳಿದುಬರಲಿದೆ. [ಭವಿಷ್ಯ ನಿಧಿ ನೀತಿ ಬದಲು, ಸರ್ಕಾರ ಕೈ ಸುಟ್ಟಿಕೊಂಡಿದ್ದು ಹೇಗೆ?]

ಏ.20ರಂದು ಪ್ರತಿಭಟನೆ ನಡೆಯಬೇಕಿತ್ತು : ಮೊದಲು ಯೋಜನೆ ರೂಪಿಸಿದಂತೆ ಏ.20ರ ಬುಧವಾರ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕಿತ್ತು. ಆದರೆ, ಮೇ 1ರಿಂದ ಪಿಎಫ್ ನಿಯಮ ಜಾರಿಗೆ ಬರಲಿದೆ ಎಂದು ತಿಳಿದು ಮುಂಚಿತವಾಗಿ ಪ್ರತಿಭಟನೆ ಆರಂಭಿಸಲಾಯಿತು. [ಮಂಗಳವಾರ ಬೆಂಗಳೂರ ಶಾಂತಿ ಕದಡಿದವರು ಯಾರು?]

'ಗಾರ್ಮೆಂಟ್ಸ್ ನೌಕರರು ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿಲ್ಲ. ನಾವು ಪ್ರತಿಭಟನೆ ಆರಂಭ ಮಾಡುವುದಕ್ಕೂ ಮುನ್ನವೇ ಗಲಭೆ ಆರಂಭವಾಗಿತ್ತು. ಪೊಲೀಸರು ನಾವು ಗಲಭೆ ಮಾಡುತ್ತಿದ್ದೇವೆ ಎಂದು ತಿಳಿದರು. ಆದರೆ, ನಾವೇಕೆ ಆಸ್ತಿಗಳಿಗೆ ಹಾನಿ ಮಾಡೋಣ?' ಎಂದು ಪ್ರಶ್ನಿಸುತ್ತಾರೆ ಗಾರ್ಮೆಂಟ್ಸ್ ಉದ್ಯೋಗಿ ಗಣೇಶ್. [ಗಾರ್ಮೆಂಟ್ಸ್ ನೌಕರರ ಪ್ರತಿಭಟನೆಯ ಸಚಿತ್ರ ವಿವರ]

'ಯಾವ ಗಾರ್ಮೆಂಟ್ಸ್ ನೌಕರರು ಗಲಭೆ ಮಾಡಿಲ್ಲ. ಯಾರೋ ಅನಾಮಿಕ ವ್ಯಕ್ತಿಗಳು ನಮಗೆ ಕೆಟ್ಟ ಹೆಸರು ತರಲು ಗಲಭೆ ನಡೆಸಿದರು. ಗಾರ್ಮೆಂಟ್ಸ್ ಉದ್ಯೋಗಿಗಳು ಸ್ಥಳದಿಂದ ತೆರಳಿದ ಬಳಿಕವೂ ಅಲ್ಲಿ ಗಲಭೆ ನಡೆಯುತ್ತಿತ್ತು. ಇದರ ಅರ್ಥ ನಾವು ಪಾಲ್ಗೊಂಡಿಲ್ಲ' ಎಂದು ನೌಕರ ಜಯರಾಮ್ ಹೇಳುತ್ತಾರೆ.

ಪಿಎಫ್‌ನ ಹೊಸ ನಿಯಮ ಮೂರು ತಿಂಗಳ ಕಾಲ ಜಾರಿಗೊಳಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಆದರೆ, ಇದನ್ನು ನಾವು ಸಂಭ್ರಮಿಸುವಂತಿಲ್ಲ. ಏಕೆಂದರೆ, ನಾವು ಸಾರ್ವಜನಿಕ ಆಸ್ತಿಗಳಿಗೆ ನಷ್ಟ ಉಂಟು ಮಾಡಿದ್ದೇವೆ ಎಂದು ಆರೋಪಿಸಲಾಗುತ್ತಿದೆ ಎನ್ನುತ್ತಾರೆ ನೌಕರರು. [ಪಿಟಿಐ ಚಿತ್ರ]

English summary
The large scale violence and damage that was caused following a protest by garment workers in Bengaluru yesterday has led to losses worth several crores. None even the garment workers themselves had expected that the protests would turn violent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X