ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಪ್ರಿಲ್ 30ರ ಸಂಜೆ 6.30ಕ್ಕೆ ಮೂರು ಸಿನಿಮಾ, ಒಂದಿಷ್ಟು ಮಾತುಕತೆ...

ಏಪ್ರಿಲ್ 30ರ ಸಂಜೆ 6.30ಕ್ಕೆ ಬೆಂಗಳೂರಿನ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿರುವ ರಂಗೋಲಿ ಮೆಟ್ರೋ ಆವರಣದಲ್ಲಿ ತುಂಬ ಅಪರೂಪದ ಮೂರು ಸಿನಿಮಾಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ

By ಗಗನ್ ಪ್ರೀತ್
|
Google Oneindia Kannada News

ಬೆಂಗಳೂರು, ಏಪ್ರಿಲ್ 28: ವಾರದ ಕೊನೆಯಲ್ಲಿ ಏನು ಮಾಡುವುದು ಎಂದು ಯೋಚಿಸುತ್ತಿರುವವರಿಗೆ ಒಂದು ಒಳ್ಳೆ ಸುದ್ದಿ ಇದೆ. ಈ ಭಾನುವಾರ (30.4.17) ಸಂಜೆ 6.30ಕ್ಕೆ ಫ್ರೆಂಡ್ಸ್ ಆಫ್ ಎಲಿಫಂಟ್ಸ್ ತಂಡದವರು ಎಂ.ಜಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿರುವ ರಂಗೋಲಿ ಮೆಟ್ರೋ ಆವರಣದಲ್ಲಿ ಪ್ರಕೃತಿ ಹಾಗೂ ವನ್ಯ ಜೀವಿಗಳಿಗೆ ಸಂಬಂಧಿಸಿದ ಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಮೂರು ವಿಶೇಷ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಮೊದಲನೆಯದಾಗಿ 'ಖಾಲಿಯಾ ದಿ ಲೊಸ್ಟ್ ಗಿಬ್ಬನ್'. ಹೂಳೊಕ್ ಗಿಬ್ಬನ್ ಗಳು ಭಾರತದ ಏಕೈಕ ಏಪ್ ಜಾತಿಗೆ ಸೇರುವ ವಾನರಗಳು. ಇವುಗಳನ್ನು ಭಾರತದ ಪೂರ್ವ ಭಾಗಗಳಲ್ಲಿ ಕಾಣಬಹುದು. ಈ ಗಿಬ್ಬನ್ ಗಳು ಈಗ ಅಳಿವಿನ ಅಂಚಿನಲ್ಲಿವೆ.

ಈ ಪ್ರದೇಶದಲ್ಲಿ ಖಾಲಿಯಾ ಎಂಬ ಹೆಸರಿನ ಒಂದು ಗಿಬ್ಬನ್ ಬಹಳ ಹೆಸರುವಾಸಿ. ಭೂಪೇಶ್ವರ್ ಮತ್ತು ಅವರ ಕುಟುಂಬದವರೊಡನೆ ಖಾಲಿಯಾ ವಿಶೇಷವಾದ ಸಂಬಂಧವನ್ನು ಹಂಚಿಕೊಂಡಿದೆ. ವನ್ಯಜೀವಿಗಳು ಮನುಷ್ಯರೊಡನೆ ಒಡನಾಟ ಬೆಳೆಸಿಕೊಳ್ಳುವುದು ಬಹಳ ಅಪರೂಪ. ಅದರ ಚಟುವಟಿಕೆ ಮತ್ತು ನಡವಳಿಕೆಗಳನ್ನು ನೀವು ಈ ಚಿತ್ರದಲ್ಲಿ ನೋಡಬಹುದು.[ಆರಡಿ ಎತ್ತರದ ಬ್ಯಾರಿಕೇಡ್ ದಾಟಿದ ಜಂಪಿಂಗ್ ಸ್ಟಾರ್ ಜಂಬೋ!]

Wlid life movie

ಇನ್ನು ಎರಡನೇ ಚಿತ್ರ 'ಸೀಕಿಂಗ್ ಸ್ನೋ'. ಹಿಮಾಲಯದ ಅತ್ಯಂತ ಗುಪ್ತ ಪ್ರಾಣಿಯಾದ ಹಿಮ ಚಿರತೆಗಳ ಕುರಿತಾದ ಚಿತ್ರ ಇದಾಗಿದೆ. ಇವುಗಳ ಸಂತತಿ ಅಲ್ಪ ಪ್ರಮಾಣದಲ್ಲಿದೆ. ಕ್ಯಾಮೆರಾ ಕಣ್ಣುಗಳಿಗೆ ಬಿದ್ದಿರುವುದು ಕೂಡ ತೀರಾ ಅಪರೂಪ. ಆ ಹಿಮಾಲಯದ ತಪ್ಪಲಿನಲ್ಲಿ ಹುಟ್ಟಿ ಬೆಳೆದ ಜಿಗ್ಮೇಟ್ ದಾದುಲ್ ಎಂಬ ವ್ಯಕ್ತಿ, ಅಳಿವಿನ ಅಂಚಿನಲ್ಲಿರುವ ಹಿಮ ಚಿರತೆಗಳ ಸಂರಕ್ಷಣೆಗೆಂದು ಶ್ರಮಿಸುತ್ತಿದ್ದಾರೆ.

ಕೆಲ ಸಂಶೋಧಕರೊಂದಿಗೆ ಜಿಗ್ಮೇಟ್ ಅವರು ಹಿಮಾಲಯವು ಒಡ್ಡುವ ಸವಾಲುಗಳನ್ನು ಎದರಿಸುತ್ತಾ ಸಾಗುವುದನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ.[ಜಂಗಲ್ ಡೈರಿ: ಜಿಮ್ ಕಾರ್ಬೆಟ್ ಆ ನರಭಕ್ಷಕ ಪ್ರಾಣಿಗಳ ಕೊಲ್ಲದೆ ಇದ್ದಿದ್ದರೆ...]

ಮೂರನೇ ಚಿತ್ರದ ಹೆಸರು 'ಸಿಂಗಲಿಲ ಇನ್ ದಿ ಹಿಮಾಲಯ'. ದೃಷ್ಟಿ ಸಮಸ್ಯೆ ಇರುವ ವ್ಯಕ್ತಿ ಹಿಮಾಲಯದ ಮನೋಹರ ದೃಶ್ಯಗಳನ್ನು ಅನುಭವಿಸುವ ಆಸೆಯಿಂದ ಭಾರತ ಮತ್ತು ನೇಪಾಳದ ಗಡಿಯ ಭಾಗದಲ್ಲಿ ಹದಿನಾಲ್ಕು ದಿನ ಚಾರಣವನ್ನು ಮಾಡುತ್ತಾರೆ. ಕಾಂಚನಜುಂಗಾ ಹಾಗೂ ಮೌಂಟ್ ಎವರೆಸ್ಟ್ ನ ಅನುಭೂತಿಯಿಂದ ಮೈ ಮರೆಯುತ್ತಾರೆ.

ಈ ಮೂರೂ ಚಿತ್ರಗಳು 10 ರಿಂದ 15 ನಿಮಿಷದ್ದು. ಚಿತ್ರ ಪ್ರದರ್ಶನದ ನಂತರ ಸಂಬಂಧಪಟ್ಟ ವ್ಯಕ್ತಿಗಳ ಪರಿಚಯ ಮಾಡಲಾಗುತ್ತದೆ. ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅವರೊಡನೆ ಸಂವಾದ ನಡೆಸಬಹುದು. ಆ ನಂತರ ಊಟದ ವ್ಯವಸ್ಥೆ ಕೂಡ ಇರುತ್ತದೆ. ಈ ಭಾನುವಾರವನ್ನು ಉತ್ತಮವಾಗಿ ಕಳೆಯಲು ಇದೊಂದು ಅವಕಾಶ.[ಮೇವುಣಿಸಿದವರ ದನಿ ಕೇಳಿ ಓಡೋಡಿ ಬಂದ ಕಡವೆ 'ರಾಜು'!]

ಛಾಯಾಗ್ರಹಣ ತರಬೇತಿ ಶಿಬಿರ
ನಮ್ಮ ತಂಡದಿಂದ ಸದ್ಯದಲ್ಲೇ ಉಚಿತ ಛಾಯಾಗ್ರಹಣ ತರಬೇತಿ ಹಾಗೂ ಕಾರ್ಯಾಗಾರವನ್ನು ನಡೆಸುತ್ತೇವೆ. ಕ್ಯಾಮೆರಾ ಹಿಡಿದುಕೊಳ್ಳುವ ರೀತಿಯಿಂದ ಬಳಸುವ ಬಗೆವರೆಗೂ ಕಲಿಸಿಕೊಡುತ್ತೇವೆ. ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ನಲ್ಲಿ ಫೋಟೋ ನಡಿಗೆಯನ್ನು ಆಯೋಜಿಸುತ್ತೇವೆ.

ನಿಮ್ಮ ಬಳಿ ಕ್ಯಾಮೆರಾ ಇರಲೇಬೇಕೆಂಬ ಕಡ್ಡಾಯ ಇಲ್ಲ. ಪರಿಸರದ ಬಗ್ಗೆ ಕಾಳಜಿ ಅಥವಾ ಛಾಯಾಗ್ರಹಣದ ಬಗ್ಗೆ ಆಸಕ್ತಿ ಇರುವವರೆಲ್ಲರೂ ಪಾಲ್ಗೊಳ್ಳಬಹುದು. ನೋಂದಣಿ ಮಾಡಿಕೊಳ್ಳಲು ಸಂಪರ್ಕಿಸಬೇಕಾದ ಮೊಬೈಲ್ ಫೋನ್ ಸಂಖ್ಯೆ- 9036862030. ಈ ಮೇಲ್ ವಿಳಾಸ - [email protected] [ಪ್ರಾಣಿಗಳು ಮನುಷ್ಯರನ್ನು ತಿನ್ನುವುದೇಕೆ? ಜಂಗಲ್ ಡೈರಿಯ ಪುಟಗಳು]

ಹೊಸದಾಗಿ ಕ್ಯಾಮೆರಾ ತೆಗೆದುಕೊಳ್ಳಬೇಕು. ಆ ಬಗ್ಗೆ ಸಲಹೆ, ಮಾರ್ಗದರ್ಶನ ಬೇಕು ಎಂದುಕೊಳ್ಳುವವರು ಕೂಡ ನಮ್ಮನ್ನು ಸಂಪರ್ಕಿಸಬಹುದು.

English summary
Elephant show and movie festival on April 30th, 6.30 PM at Rangoli Metro Art centre, MG Road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X