ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ 5 ಕೋಟಿ ದೇಣಿಗೆ

By ಅನಂತಕೃಷ್ಣನ್
|
Google Oneindia Kannada News

ಬೆಂಗಳೂರು, ಏ. 4 : ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ 5 ಕೋಟಿ ರೂ.ಗಳ ದೇಣಿಗೆಯನ್ನು ನ್ಯೂ ಹೊರೈಜನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಮಂಗಾನಿ ನೀಡಿದ್ದಾರೆ.

ಶುಕ್ರವಾರ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿರುವ ಲಲಿತ್ ಅಶೋಕ್ ಹೋಟೆಲ್‌ಗೆ ಭೇಟಿ ನೀಡಿದ್ದ ಡಾ. ಮೋಹನ್ ಮಂಗಾನಿ ಅವರು ದೇಣಿಗೆಯನ್ನು ಸಲ್ಲಿಕೆ ಮಾಡಿದ್ದಾರೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ಸ್ವಚ್ಛ ಭಾರತಕ್ಕೆ ಬೆಳಗಾವಿಯಲ್ಲಿ ಉತ್ತಮ ಪ್ರತಿಕ್ರಿಯೆ]

modi

ಮೋದಿ ಭಾಷಣದಿಂದ ಸ್ಫೂರ್ತಿ : ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆ ಮೇಲೆ ಮಾಡಿದ ಭಾಷಣದಿಂದ ಸ್ಫೂರ್ತಿ ಪಡೆದ ಮೋಹನ್ ಮಂಗಾನಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ದೇಣಿಗೆ ನೀಡಿದ್ದಾರೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸುವ ಸಂಕಲ್ಪ ಮಾಡಿದ್ದಾರೆ. [ಮೋದಿ ಆಫರ್ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ]

Swachh Bharat

ನ್ಯೂ ಹೊರೈಜನ್ ಶಿಕ್ಷಣ, ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರಿನಲ್ಲಿ ಎಂಟು ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಇವುಗಳಲ್ಲಿ ಇಂಜಿನಿಯರಿಂಗ್ ಕಾಲೇಜು ಸಹ ಸೇರಿದೆ. ಪ್ರಧಾನಿ ಭಾಷಣದ ನಂತರ ಈ ಯೋಜನೆಯಲ್ಲಿ ನಾವು ಹೇಗೆ ಕೈ ಜೋಡಿಸಬಹುದು ಎಂದು ವಿವರಣೆ ಕೇಳಿ ಪತ್ರ ಬರೆದಿದ್ದೆವು, ಇಂದು ಯೋಜನೆಯ ಭಾಗವಾಗಿರುವುದಕ್ಕೆ ಸಂತಸವಾಗುತ್ತಿದೆ ಎಂದು ಮೋಹನ್ ಹೇಳಿದ್ದಾರೆ.

ಸಂದೀಪ್ ಉನ್ನಿಕೃಷ್ಣನ್‌ಗೆ ನಮನ : ನ್ಯೂ ಹೊರೈಜನ್ ಶಿಕ್ಷಣ ತನ್ನ ಇಂಜಿನಿಯರಿಂಗ್ ಕಾಲೇಜಿನ ಒಂದು ಬ್ಲಾಕ್‌ಗೆ 26/11 ಮುಂಬೈ ದಾಳಿಯಲ್ಲಿ ಹುತಾತ್ಮರಾದ ಬೆಂಗಳೂರಿನ ಯೋಧ ಸಂದೀಪ್‌ ಉನ್ನಿಕೃಷ್ಣನ್‌ ಹೆಸರಿಟ್ಟಿದ್ದು ಅವರನ್ನು ನಿತ್ಯವೂ ನೆನಪು ಮಾಡಿಕೊಳ್ಳುತ್ತಿದೆ.

English summary
Prime Minister Narendra Modi’s Swachh Bharat got a major boost when Bengaluru based leading educationist-cum-activist Dr.Mohan Manghnani donated Rs 5 core towards the cause.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X