ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಧಿಕೃತ ಶಾಲೆ ಪಟ್ಟಿ : ಆಕ್ಷೇಪಣೆ ಇದ್ದರೆ ಸಲ್ಲಿಸಿ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 26: ರಾಜಧಾನಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ 1,266 ಅನಧಿಕೃತ ಶಾಲೆಗಳನ್ನು ಹತ್ತೆಹಚ್ಚಿದೆ. ವೆಬ್‌ಸೈಟ್‌ನಲ್ಲಿ ಶಾಲೆಗಳ ಪಟ್ಟಿಯನ್ನೂ ಪ್ರಕಟಿಸಿದೆ. ಈ ಪಟ್ಟಿ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಆಕ್ಷೇಪಣೆಯನ್ನು ಸಾರ್ವಜನಿಕರು ಹಾಗೂ ಶಾಲೆ ಆಡಳಿತ ಮಂಡಳಿ ಎರಡೂ ಸಲ್ಲಿಸಬಹುದು. ಇಬ್ಬರಿಗೂ ಪ್ರತ್ಯೇಕ ನಮೂನೆ ಸಿದ್ಧಪಡಿಸಲಾಗಿದೆ. ಈ ನಮೂನೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

school

ಈ ಆಕ್ಷೇಪಣೆಗಳನ್ನು ಡಿಡಿಪಿಐ ಅವರು ಜ. 15ರೊಳಗೆ ಆಯುಕ್ತರ ಕಚೇರಿಗೆ ಸಲ್ಲಿಸಬೇಕು. ವಿವರಗಳನ್ನು ಪಿಡಿಎಫ್ ಅಥವಾ ಸ್ಪಾಟ್ ಪ್ರತಿಯನ್ನು ಸಿಡಿಯಲ್ಲಿ ನೀಡಬೇಕು ಎಂದು ಸೂಚಿಸಲಾಗಿದೆ. [ಅನಧಿಕೃತ ಶಾಲೆಗಳ ವಿರುದ್ಧ ಕ್ರಿಮಿನಲ್ ಕೇಸ್]

ಹೆಚ್ಚಿನ ವಿವರ ಸಲ್ಲಿಸಲು ಸೂಚನೆ : ಬೆಂಗಳೂರು ದಕ್ಷಿಣದಲ್ಲಿ ಒಟ್ಟು 798 ಶಾಲೆಗಳಿಗೆ ಅನುಮತಿ ಇಲ್ಲ. ಇವುಗಳಲ್ಲಿ 435 ಪೂರ್ವ ಪ್ರಾಥಮಿಕ, 44 ಸಿಬಿಎಸ್ಇ, ಐಸಿಎಸ್ಇ ಹಾಗೂ ಬೆಂಗಳೂರು ಉತ್ತರದಲ್ಲಿ 468 ಅನಧಿಕೃತ ಶಾಲೆಗಳಿವೆ. ಇವುಗಳಲ್ಲಿ 243 ಪೂರ್ವ ಪ್ರಾಥಮಿಕ, 93 ಸಿಬಿಎಸ್ಇ, ಐಸಿಎಸ್ಇ ಎಂದು ಶಿಕ್ಷಣ ಇಲಾಖೆ ಗುರುತಿಸಿದೆ. ಆದರೆ, ಇವು ಅನಧಿಕೃತ ಹೇಗೆ? ಯಾವ ನಿಯಮಗಳಡಿ ಇವನ್ನು ಅನಧಿಕೃತ ಎಂದು ಗುರುತಿಸಲಾಗಿದೆ? ಕೈಗೊಳ್ಳಬೇಕಾದ ಕ್ರಮಗಳನೇನು ಎಂಬುದರ ಕುರಿತು ವಿವರವಾಗಿ ಮಾಹಿತಿ ಸಲ್ಲಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಯ್ಸಿನ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. [ಬೆಂಗಳೂರಿನಲ್ಲಿವೆ 1,266 ಅನಧಿಕೃತ ಶಾಲೆಗಳು]

English summary
Department of Public Education has invited objection from schools and people for the list of unauthorized school. Commissioner of dept of public education has directed DDDPIs to submit details regarding action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X