ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂರೇ ತಿಂಗಳಲ್ಲೇ ಪಬ್ಲಿಕ್ ಟಿವಿಗೆ ಚಿನಿವಾರ್ ಗುಡ್ ಬೈ

By Mahesh
|
Google Oneindia Kannada News

ಬೆಂಗಳೂರು, ಮೇ. 19: ಪಬ್ಲಿಕ್ ಟಿವಿ ಎಡಿಟರ್ ಇನ್ ಚೀಫ್ ಆಗಿದ್ದ ಅನಂತ ಚಿನಿವಾರ್ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ರೈಟ್ ಮ್ಯಾನ್ ಮೀಡಿಯಾದ ಪಬ್ಲಿಕ್ ಟಿವಿ ಅಧಿಕೃತವಾಗಿ ಘೋಷಿಸಿದೆ. ಪಬ್ಲಿಕ್ ಟಿವಿ ಸೇರಿದ ಮೂರು ತಿಂಗಳಲ್ಲೇ ಚಿನಿವಾರ್ ಅವರು ಗುಡ್ ಬೈ ಹೇಳಿದ್ದಾರೆ.

ಪಬ್ಲಿಕ್ ಟಿವಿಯಿಂದ ಚಿನಿವಾರ್ ನಿರ್ಗಮನದ ಬಗ್ಗೆ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್. ರಂಗನಾಥ್ ಹಾಗೂ ಅನಂತ್ ಚಿನಿವಾರ್ ಅವರು ಅನೌಪಚಾರಿಕವಾಗಿ ಜಂಟಿ ಹೇಳಿಕೆ ನೀಡಿರುವುದು ವಿಶೇಷ. [ಭಾರಿ ಗಾಳಿಸುದ್ದಿ ಹೊಡೆತಕ್ಕೆ ಸಿಲುಕಿದ ಜನಶ್ರೀ]

ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಬ್ಯೂರೋ ಮುಖ್ಯಸ್ಥರ ಸಭೆಯಲ್ಲಿ ಅನಂತ ಚಿನಿವಾರ್ ರಾಜೀನಾಮೆ ನೀಡಿದ ವಿಷಯ ಪ್ರಕಟಿಸಲಾಗಿದೆ. ವೈಯಕ್ತಿಕ, ಅನಿವಾರ್ಯ ಕಾರಣಗಳಿಂದ ಪಬ್ಲಿಕ್ ಟಿವಿ ತಂಡದಿಂದ ನಿರ್ಗಮಿಸುತ್ತಿರುವುದಾಗಿ ಅನಂತ ಚಿನಿವಾರ್, ಬ್ಯೂರೋ ಮುಖ್ಯಸ್ಥರ ಸಭೆಗೆ ತಿಳಿಸಿದರು. [ಸ್ವಾತಂತ್ರ್ಯ ಅಂದ್ರೆ ಸ್ವೇಚ್ಛೆಯಲ್ಲ : ರಂಗನಾಥ್]

ಅನಂತ ಚಿನಿವಾರ್ ಅವರ ಮುಂದಿನ ಯೋಜನೆಗಳಿಗೆ ಶುಭವಾಗಲಿ, ಸಾಧ್ಯವಾದಲ್ಲಿ ಮತ್ತೊಂದು ದಿನ ಒಟ್ಟಿಗೆ ಕೆಲಸ ಮಾಡುವಂತಾಗಲಿ. ಅದಕ್ಕೆ ನಾನು ಸದಾ ಸಿದ್ದನಿದ್ದೇನೆ ಎಂದು ಪಬ್ಲಿಕ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್. ರಂಗನಾಥ್ ಶುಭ ಹಾರೈಸಿದರು. ಫೆಬ್ರವರಿ 12, 2015ರಂದು ಎಡಿಟರ್ ಇನ್ ಚೀಫ್ ಆಗಿ ಅನಂತ ಚಿನಿವಾರ್ ಪಬ್ಲಿಕ್ ಟಿವಿ ತಂಡ ಸೇರಿದ್ದರು.

ಪಬ್ಲಿಕ್ ಟಿವಿಯಿಂದಲೇ ಸುದ್ದಿ ಪಬ್ಲಿಕ್ ಗೆ ತಿಳಿಯಿತು

ಪಬ್ಲಿಕ್ ಟಿವಿಯಿಂದಲೇ ಸುದ್ದಿ ಪಬ್ಲಿಕ್ ಗೆ ತಿಳಿಯಿತು

ಪಬ್ಲಿಕ್ ಟಿವಿ ಎಡಿಟರ್ ಇನ್ ಚೀಫ್ ಆಗಿ ಸೇರ್ಪಡೆಯಾದ ಸುದ್ದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದೆವು. ಈ ಹಿನ್ನೆಲೆಯಲ್ಲಿ ಇದನ್ನು ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೇವೆ ಎಂದು ಪಬ್ಲಿಕ್ ಟಿವಿ ಫೇಸ್ ಬುಕ್ ಪುಟದಲ್ಲಿ ಬರೆಯಲಾಗಿದೆ.

ಬ್ಯೂರೋ ಮುಖ್ಯಸ್ಥರ ಸಭೆ ನಂತರದ ವಿಡಿಯೋ

ಬ್ಯೂರೋ ಮುಖ್ಯಸ್ಥರ ಸಭೆ ನಂತರದ ವಿಡಿಯೋ ಕೂಡಾ ಬಿಡುಗಡೆ ಮಾಡಲಾಗಿದೆ. ರಂಗನಾಥ್ ಮತ್ತು ಅನಂತ ಚಿನಿವಾರ್ ಅವರ ಮಾತುಗಳು ವಿಡಿಯೋದಲ್ಲಿದೆ ನೋಡಿ. ಹೊಸ ಸಾಹಸದ ಬಗ್ಗೆ ಸುಳಿವು ಇಬ್ಬರಿಂದಲೂ ಬಂದಿದೆ ಅದರೆ, ಸ್ಪಷ್ಟತೆ ಸಿಕ್ಕಿಲ್ಲ.

ವಿದ್ಯುನ್ಮಾನ, ಮುದ್ರಣ ಮಾಧ್ಯಮ ಕ್ಷೇತ್ರದ ಅನುಭವಿ

ವಿದ್ಯುನ್ಮಾನ, ಮುದ್ರಣ ಮಾಧ್ಯಮ ಕ್ಷೇತ್ರದ ಅನುಭವಿ

ಅನಂತ ಚಿನಿವಾರ,ಅವರು ಸುಮಾರು ಎರಡು ದಶಕಗಳಿಂದ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಭಿಮಾನಿ ಪತ್ರಿಕೆಯಲ್ಲಿ ತಮ್ಮ ವೃತ್ತಿ ಪ್ರಾರಂಭಿಸಿದ ಇವರು, ಸ್ಟಾರ್ ಆಫ್ ಮೈಸೂರ್, ಟಿವಿ ಟುಡೇ, ಇಂಡಿಯನ್ ಎಕ್ಸ್‌ಪ್ರೆಸ್, ದಿನತಂತಿ, ಉದಯ ಟಿವಿ, ಸುಪ್ರಭಾತ, ಏಶಿಯಾನೆಟ್ ಸುವರ್ಣ ಮತ್ತು ಓ ಮನಸೆ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.

ವ್ಯಕ್ತಿಚಿತ್ರಣ ಸರಣಿ ಪ್ರಸಿದ್ದವಾಗಿದೆ

ವ್ಯಕ್ತಿಚಿತ್ರಣ ಸರಣಿ ಪ್ರಸಿದ್ದವಾಗಿದೆ

ಚಿನಿವಾರ್ ಅವರ ನಿರ್ದೇಶನದಲ್ಲಿ ತಯಾರಾದ 50 ಪ್ರಸಿದ್ಧ ಕನ್ನಡಿಗರ ಕುರಿತ ವ್ಯಕ್ತಿಚಿತ್ರಣ ಸರಣಿ ಪ್ರಸಿದ್ದವಾದುದು. ಕರ್ನಾಟಕದ ಹೆಚ್ಚಿನ ಎಲ್ಲ ವಾಹಿನಿಗಳಿಗೂ ಇವರು ಪ್ರಸ್ತುತ ಹಾಗೂ ರಾಜಕೀಯ ವಿಷಯಗಳ ಕುರಿತು ಉತ್ತಮ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಚಿತ್ರ ಕೃಪೆ: ತನುಜಾ ಜೆಟಿ.

ಪಬ್ಲಿಕ್ ಟಿವಿ ಬಳಗ ಬಿಟ್ಟಿದ್ದೇಕೆ?

ಪಬ್ಲಿಕ್ ಟಿವಿ ಬಳಗ ಬಿಟ್ಟಿದ್ದೇಕೆ?

ಎರಡು ದಶಕಕ್ಕೂ ಹೆಚ್ಚಿನ ಪತ್ರಿಕೋದ್ಯಮದ ಅನುಭವ ಇರುವ ಅನಂತ ಚಿನಿವಾರ್ ಫೆ.12, 2015ರಂದು ಪಬ್ಲಿಕ್ ಟಿವಿ ಬಳಗದ ಪ್ರಧಾನ ಸಂಪಾದಕರಾಗಿ ಸೇರಿಕೊಂಡಿದ್ದರು. ಚಿನಿವಾರ್ ಸೇರ್ಪಡೆಯಿಂದ ಕೆಲಸದ ಒತ್ತಡ, ಹೊರೆ ಕಡಿಮೆಯಾಯಿತು ಎಂದು ಪಬ್ಲಿಕ್ ಟಿವಿ ಬಳಗದ ಮುಖ್ಯಸ್ಥ ರಂಗನಾಥ್ ಹೇಳಿಕೊಂಡಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದ ಮೇ.19, 2015 ಸಂಸ್ಥೆಯನ್ನು ಚಿನಿವಾರ್ ತೊರೆದಿದ್ದಾರೆ. ಮುಂದೊಂದು ದಿನ ಸಾಧ್ಯವಾದರೆ ಮತ್ತೆ ಒಂದಾಗಿ ದುಡಿಯೋಣ ಎಂದು ರಂಗಣ್ಣ ಶುಭ ಹಾರೈಸಿದ್ದಾರೆ. ಚಿತ್ರಕೃಪೆ: ಸುವರ್ಣವಾಹಿನಿ ಟಿವಿ ವಿಡಿಯೋ

English summary
Senior Journalist Ananth Chinivar has resigned from Public TV today. He took charge as Editor in Chief from three months back. Public TV Chief HR Ranganath has accepted his resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X