ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಲ ವಸೂಲಿಗಾಗಿ ವಿಜಯ್ ಮಲ್ಯನ ಸಾವಿರ ಕೋಟಿ ಆಸ್ತಿ ಜಪ್ತಿ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜೂನ್ 11 : ಒಂಬತ್ತು ಸಾವಿರ ಕೋಟಿ ರುಪಾಯಿ ಸಾಲ ಮಾಡಿ ಇಂಗ್ಲೆಂಡಿಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರಿಂದ ಸಾಲ ಮರುಪಡೆಯುವ ನಿಟ್ಟಿನಲ್ಲಿ 1,141 ಕೋಟಿ ರು. ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ.

ವಿಜಯ್ ಮಲ್ಯ ಮತ್ತು ಯುಬಿ ಸಿಟಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಐಡಿಬಿಐ ಬ್ಯಾಂಕ್ ನೀಡಿದ ಸಾಲಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶನಿವಾರ ಈ ಕ್ರಮ ಜರುಗಿಸಿದೆ. ಮನಿ ಲಾಂಡರಿಂಗ್ ಆಕ್ಟ್ ಅಡಿಯಲ್ಲಿ ಈ ಪ್ರಕ್ರಿಯೆ ಆರಂಭಿಸಲಾಗಿದೆ. [ಸಾಲಗಾರ ವಿಜಯ್ ಮಲ್ಯ ಘೋಷಿತ ಅಪರಾಧಿ?]

ED attaches Mallya's property worth Rs 1,411 crore

ಸಾಲ ಮರುಪಾವತಿಸದೆ ಇಂಗ್ಲೆಂಡಿಗೆ ಪರಾರಿಯಾಗಿರುವ ಡಾ. ವಿಜಯ್ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸುವಂತೆ ವಿಶೇಷ ಮನಿ ಲಾಂಡರಿಂಗ್ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ ಮನವಿ ಮಾಡಿತ್ತು. ಈ ಮನವಿಯಂತೆ ನ್ಯಾಯಾಲಯ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಘೋಷಣೆ ಮಾಡಿದೆ. ಇದರ ಬೆನ್ನ ಹಿಂದೆಯೇ ಅವರಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಕೋರ್ಟಿಗೆ ತಿಳಿಸಿದೆ. ಹಲವಾರು ಬಾರಿ ನೋಟೀಸ್ ನೀಡಲಾಗಿದ್ದರೂ ವಿಚಾರಣಾ ಸಂಸ್ಥೆಯ ಮುಂದೆ ಹಾಜರಾಗಲು ಮಲ್ಯ ಅವರು ವಿಫಲರಾಗಿದ್ದಾರೆ. ಅವರನ್ನು ಘೋಷಿತ ಅಪರಾಧಿ ಅಂತ ಘೋಷಣೆ ಮಾಡಲಾಗಿದ್ದರಿಂದ ಇಂಗ್ಲೆಂಡಿನಿಂದ ಗಡಿಪಾರು ಮಾಡುವ ಪ್ರಕ್ರಿಯೆಗೆ ಬಲ ಬಂದಂತಾಗಿದೆ.

English summary
In a bid to recover the loans taken by Vijay Mallya the Enforcement Directorate today attached properties worth Rs 1,411 crore. The properties belonging to both Mallya and UB Holdings were attached by the ED.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X