ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವಾಸ್ ಮಲ್ಟಿಮೀಡಿಯಾ ಪ್ರಕರಣ, ಇಡಿಯಿಂದ 80 ಕೋಟಿ ಆಸ್ತಿ ಜಪ್ತಿ

ಆಂತ್ರಿಕ್ಸ್-ದೇವಾಸ್ ಪ್ರಕರಣದಲ್ಲಿ ಇದು ಪ್ರಮುಖ ಬೆಳವಣಿಗೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಪ್ರಕರಣದ ಆರೋಪಿಗಳ ಎಂಬತ್ತು ಕೋಟಿ ರುಪಾಯಿ ಮೊತ್ತದ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆಬ್ರವರಿ 25: ಆಂತ್ರಿಕ್ಸ್-ದೇವಾಸ್ ಪ್ರಕರಣದಲ್ಲಿ 79.76 ಕೋಟಿ ರುಪಾಯಿ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳ ಆಸ್ತಿ ಜಪ್ತಿಗಾಗಿ ಜೂನ್ 2016ರಲ್ಲೇ ಜಾರಿ ನಿರ್ದೇಶನಾಲಯವು ಪ್ರಕ್ರಿಯೆ ಆರಂಭಿಸಿತ್ತು. 1200 ಕೋಟಿ ರುಪಾಯಿ ಮೊತ್ತದ ಫೆಮಾ ಕಾಯ್ದೆ ಉಲ್ಲಂಘನೆ ಅಗಿರುವ ಬಗ್ಗೆ ಇಡಿ ನೋಟಿಸ್ ನೀಡಿತ್ತು. ಈ ಪ್ರಕರಣದಲ್ಲಿ ಭಾಗಿಯಾದವರ ಸ್ಥಿರ ಹಾಗೂ ಚರಾಸ್ತಿಗಳನ್ನು ಗುರುತಿಸಿ, ಮೌಲ್ಯಮಾಪನ ಮಾಡಿತ್ತು.[ತೆರಿಗೆ ತಪ್ಪಿಸಿದ 3-4 ಲಕ್ಷ ಕೋಟಿ ರುಪಾಯಿ ಬ್ಯಾಂಕ್ ಗಳಿಗೆ ಜಮೆ]

ED attaches amount of Rs 80 crore in Devas Multimedia case

ವಿಚಾರಣೆ ಭಾಗವಾಗಿ ಎಲ್ಲ ಆಸ್ತಿಗಳನ್ನು ಮಾರಾಟ ಮಾಡದಂತೆ ತಡೆಹಿಡಿದು, ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಿದ ಬಗ್ಗೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು. ಸಾವಿರದ ಇನ್ನೂರು ಕೋಟಿ ರುಪಾಯಿ ಅವ್ಯವಹಾರದ ಆರೋಪಕ್ಕೆ ಸಂಬಂಧಿಸಿದಂತೆ ದೇವಾಸ್ ಮಲ್ಟಿಮೀಡಿಯಾ ಲಿಮಿಟೆಡ್, ಆಂತ್ರಿಕ್ಸ್ ಕಾರ್ಪೋರೇಷನ್ ಹಾಗೂ ಇತರರಿಗೆ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಅಡಿ ಶೋಕಾಸ್ ನೋಟಿಸ್ ನೀಡಲಾಗಿತ್ತು.

English summary
The Enforcement Directorate has attached an amount of Rs 79,76,00,041 in the Antirx-Devas case. The Enforcement Directorate said that said that the attachment was done under the provisions of the Prevention of Money Laundering Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X