ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ನಿಯಮ ಮುರಿದು ಪೊಲೀಸರಿಗೆ ಧಮ್ಕಿ ಹಾಕಿದ್ರೆ ಜೈಲೂಟ!

|
Google Oneindia Kannada News

ಬೆಂಗಳೂರು, ಡಿಸೆಂಬರ್, 28: ಎಲ್ಲೆಂದರಲ್ಲಿ ಬೈಕ್ ನುಗ್ಗಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು ಅಲ್ಲದೇ ದಂಡ ಪಾವತಿ ಮಾಡಲ್ಲ ಎಂದು ಗಲಾಟೆ ತೆಗೆದರೆ ಜೈಲು ಪಾಲಾಗಬೇಕಾದೀತು.. ಎಚ್ಚರ. ಜನವರಿ 1ರಿಂದ ಟ್ರಾಫಿಕ್ ನಿಯಮಗಳು ರಾಜಧಾನಿ ಬೆಂಗಳೂರಲ್ಲಿ ಮತ್ತಷ್ಟು ಕಟ್ಟು ನಿಟ್ಟು.

ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿರುವವರನ್ನು ತಪಾಸಣೆಗೆ ಒಳಪಡಿಸಿದಾಗ ಅವರು ಪೊಲೀಸರ ಮೇಲೆಯೇ ಹಲ್ಲೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿರುವುದರಿಂದ ಬೆಂಗಳೂರು ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.[ಬೆಂಗಳೂರಿಗರೇ..ನಿಮ್ಮ ವಾಹನದ ಕೊನೆ ಸಂಖ್ಯೆ ಯಾವುದು?]

Drivers Who Harass Policemen to Face Action

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದರೆ ಐಪಿಸಿ ಸೆಕ್ಷನ್ 353 ಪ್ರಕಾರ ಪ್ರಕರಣ ದಾಖಲಿಸಲಾಗುತ್ತದೆ. ಆರೋಪ ದೃಢಪಟ್ಟರೆ 2 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾ ಗುತ್ತದೆ. ಅದೇ ರೀತಿ ಹಲ್ಲೆ ಮಾಡಿದವರ ವಿರುದ್ಧ ಸೆಕ್ಷನ್ 332ರ ಅನ್ವಯ ಕೇಸ್ ದಾಖಲಿಸುತ್ತೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ, ಹೆಲ್ಮೆಟ್ ಇಲ್ಲದೆ ಚಾಲನೆ, ಪಾದಚಾರಿ ಮಾರ್ಗದಲ್ಲಿ ವಾಹನ ಓಡಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರಿಂದಾಗಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಕರ್ತವ್ಯ ನಿರತ ಪೊಲೀಸರಿಗೆ ಧಮ್ಕಿ ಹಾಕಿದರೆ ಅಥವಾ ಅವಾಚ್ಯ ಶಬ್ದಗಳಿಂದ ನಿಂದಿಸಿದರೆ ಐಪಿಸಿ ಸೆಕ್ಷನ್ 503 ಪ್ರಕಾರ ಕನಿಷ್ಠ 2ವರ್ಷ ಜೈಲು ಸಜೆಯಾಗುತ್ತದೆ.

English summary
Bengaluru: After recent assaults on police by drunk drivers/riders, Bengaluru Traffic Police have decided to take stern action against such riders by booking cases against them. Additional Commissioner of Police (traffic) M A Saleem said, “Of late, instances of assault and abuse by drunk drivers are increasing. From January 1, we will start booking cases against people who misbehave with or assault police officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X