ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬಂಗಾರದ ಮನುಷ್ಯ' ಚಿತ್ರವನ್ನು ಐದು ಬಾರಿ ನೋಡಿದ್ದೆ: ಮೇಯರ್ ಪದ್ಮಾವತಿ

ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ಆಯೋಜಿಸಲಾಗಿದ್ದ ಸಮಾರಂಭ. ಮುಖ್ಯ ಅತಿಥಿಯಾಗಿದ್ದ ಮೇಯರ್ ಪದ್ಮಾವತಿ.

|
Google Oneindia Kannada News

ಬೆಂಗಳೂರು, ಏಪ್ರಿಲ್ 24: ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಡಾ. ರಾಜ್ ಕುಮಾರ್ ಅವರಿಂದ ಪ್ರಭಾವಿತರಾಗಿದ್ದ ತಾವು ಆಗ ಬಿಡುಗಡೆಯಾಗಿದ್ದ ಬಂಗಾರದ ಮನುಷ್ಯ ಚಿತ್ರವನ್ನು ಐದು ಬಾರಿ ನೋಡಿದ್ದೆ ಎಂದು ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಪದ್ಮಾವತಿ ತಿಳಿಸಿದರು.

ವರನಟ ಡಾ. ರಾಜ್ ಕುಮಾರ್ ಅವರ ಜನ್ಮದಿನ ಹಿನ್ನೆಲೆಯಲ್ಲಿ ನಗರದ ಸೌತ್ ಎಂಡ್ ಸರ್ಕಲ್ ನಲ್ಲಿರುವ ರಾಜ್ ಕುಮಾರ್ ಪುತ್ಥಳಿಯ ಆವರಣದಲ್ಲಿ ನಡೆದ ಸಮಾರಂಭಕ್ಕೆ ಹಾಜರಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ, ಡಾ. ರಾಜ್ ಕುಮಾರ್ ಅವರ ಬಗ್ಗೆಗಿನ ತಮ್ಮ ಅಭಿಪ್ರಾಯವನ್ನು ತಿಳಿಸಿದರು.[ಫೋಟೋ ಗ್ಯಾಲರಿ; ಡಾ.ರಾಜ್ ರವರ ಅಪರೂಪದ ಭಾವಚಿತ್ರಗಳು]

ಅಭಿಮಾನಿಗಳನ್ನು ದೇವರೆಂದು ಹೇಳಿದ ರಾಜ್ ಕುಮಾರ್ ಅವರ ಗುಣ ತಮಗೆ ತುಂಬಾ ಇಷ್ಟವಾಗುವ ಗುಣ ಎಂದು ಅವರು ತಿಳಿಸಿದರು.

ಯಡಿಯೂರು ಕಾರ್ಪೊರೇಟರ್ ಎನ್.ಆರ್. ರಮೇಶ್ ಅವರು ಅಚ್ಚುಕಟ್ಟಾಗಿ ಆಯೋಜಿಸಿದ್ದ ಈ ಸಭೆಯ ವಿಶೇಷತೆಗಳೇನು?
ಮೇಯರ್ ಪದ್ಮಾವತಿ ಈ ಕಾರ್ಯಕ್ರಮದ ಬಗ್ಗೆ, ರಾಜ್ ಕುಮಾರ್ ಅವರ ಬಗ್ಗೆ ಮತ್ತೇನು ಹೇಳಿದರು? ಈ ಪ್ರತಿಮೆಯ ವೈಶಿಷ್ಟ್ಯಗಳೇನು ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ ಓದಿ.

ಪಾರ್ಕ್ ಸಿಂಗಾರ

ಪಾರ್ಕ್ ಸಿಂಗಾರ

ಡಾ. ರಾಜ್ ಹುಟ್ಟುಹಬ್ಬಕ್ಕಾಗಿಯೇ ಸೋಮವಾರ, ಪುತ್ಥಳಿ ಹಾಗೂ ಪಕ್ಕದಲ್ಲಿರುವ ಅಂಬರ ಚುಂಬನ ಬೃಹತ್ ಗಡಿಯಾರ ಕಂಬ - ಇವೆರಡನ್ನೂ ಒಳಗೊಂಡ ಪುಟ್ಟ ಪಾರ್ಕ್ ಅನ್ನು ಹೂಗಳಿಂದ ಸಿಂಗಾರ ಮಾಡಲಾಗಿತ್ತು.

ಉದ್ಘಾಟನೆಯ ವಿವರ

ಉದ್ಘಾಟನೆಯ ವಿವರ

ಪುತ್ಥಳಿಯ ಕೆಳಗಿನ ಕಟ್ಟೆಯ ಮುಂಭಾಗದ ಪಾರ್ಶ್ವದ ಮೇಲೆ ಪುತ್ಥಳಿಯ ಉದ್ಧಾಟನಾ ಸಮಾರಂಭದ ವಿವರಗಳನ್ನು ನೀಡಲಾಗಿದೆ. ಇದರಲ್ಲಿ 2014ರ ಜನವರಿ 30ರಂದು ಅಂದಿನ ಮಹಾನಗರ ಉಸ್ತುವಾರಿ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ ಪುತ್ಥಳಿಯನ್ನು ಉದ್ಘಾಟಿಸಿದ್ದಾರೆ. ಆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾಗಿರುವ ಅನಂತ ಕುಮಾರ್, ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಡಿಯೂರು ಬಿಬಿಎಂಪಿ ಸದಸ್ಯರು ಎನ್.ಆರ್. ರಮೇಶ್ ಉಪಸ್ಥಿತರಿದ್ದರೆಂದು ಉಲ್ಲೇಖಿಸಲಾಗಿದೆ.

ನಾಲ್ಕೂ ಪಾರ್ಶ್ವಗಳಲ್ಲಿ ವಿವರ

ನಾಲ್ಕೂ ಪಾರ್ಶ್ವಗಳಲ್ಲಿ ವಿವರ

ಪುತ್ಥಳಿಯ ಕೆಳಗಿನ ನಾಲ್ಕೂ ಪಾರ್ಶ್ವಗಳಲ್ಲಿ ರಾಜ್ ಕುಮಾರ್ ಬಗೆಗಿನ ಮಾಹಿತಿಯನ್ನು ಹೇಳಲಾಗಿದೆ. ರಾಜ್ ಪುತ್ಥಳಿಗೆ ಅಭಿಮುಖವಾಗಿ ನಿಂತಾಗ ಎಡ ಪಾರ್ಶ್ವದಲ್ಲಿ ರಾಜ್ ಹುಟ್ಟೂರು, ತಂದೆ ತಾಯಿ ಬಗ್ಗೆ ಮಾಹಿತಿ ಇದ್ದರೆ, ಹಿಂಬದಿಯ ಪಾರ್ಶ್ವದಲ್ಲಿ ರಾಜ್ ಅಭಿನಯದ ಚಿತ್ರಗಳ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಸಂಕ್ಷಿಪ್ತ ಮಾಹಿತಿ. ಇನ್ನು, ಬಲಬದಿಯ ಪಾರ್ಶ್ವದಲ್ಲಿ ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳ ಆರಾಧ್ಯ ದೈವವಾದ ಬಗ್ಗೆ ಮಾಹಿತಿ ನೀಡಲಾಗಿದೆ.

ಮೇಯರ್ ಮೆಚ್ಚಿದ ಅಲಂಕಾರ

ಮೇಯರ್ ಮೆಚ್ಚಿದ ಅಲಂಕಾರ

ಇಷ್ಟೆಲ್ಲಾ ವಿಶೇಷತೆಗಳನ್ನು ಒಳಗೊಂಡಿರುವ ಈ ಪ್ರತಿಮೆ ಸೋಮವಾರ ಹೂ ಅಲಂಕಾರಗಳಿಂದ ಮತ್ತಷ್ಟು ಕಂಗೊಳಿಸುತ್ತಿತ್ತು. ಸಮಾರಂಭಕ್ಕೆ ಬಂದ ಪದ್ಮಾವತಿಯವರಂತೂ ಅಲಂಕಾರವನ್ನು ಮೆಚ್ಚಿಕೊಂಡರು.

ರಾಜ್ ವ್ಯಕ್ತಿತ್ವ ಕೊಂಡಾಡಿದ ಮೇಯರ್

ರಾಜ್ ವ್ಯಕ್ತಿತ್ವ ಕೊಂಡಾಡಿದ ಮೇಯರ್

ಆನಂತರ ದೀಪ ಬೆಳಗಿಸಿ ಉದ್ಘಾಟಿಸಿದ ಮೇಯರ್ ಹಾಗೂ ಇತರ ಗಣ್ಯರು ರಾಜ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ರಾಜ್ ಕುಮಾರ್ ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದಾಗಿ ಹೇಳಿದರು. ರಾಜಾಜಿ ನಗರದ ಮುಖ್ಯರಸ್ತೆಗೆ ಡಾ. ರಾಜ್ ಕುಮಾರ್ ಹೆಸರನ್ನಿಟ್ಟಾಗ ನಡೆದ ಕಾರ್ಯಕ್ರಮದಲ್ಲಿ ತಾವು ಡಾ. ರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದಾಗಿ ತಿಳಿಸಿದರು. ಡಾ. ರಾಜ್ ಅವರ ಯಾವ ಗುಣ ನಿಮಗೆ ಬಹಳ ಇಷ್ಟ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿಮಾನಿಗಳನ್ನು ದೇವರು ಎಂದು ಬಾಯ್ತುಂಬ ಕರೆದ ಅವರ ಆ ಸಾರ್ಥಕತೆಯ ಭಾವ ತಮಗೆ ತುಂಬಾ ಹಿಡಿಸಿತು ಎಂದರು. ಅಲ್ಲದೆ, ಗೂಗಲ್ ಸರ್ಚ್ ಇಂಜಿನ್ ನಲ್ಲಿ ಇಂದು ಡಾ.ರಾಜ್ ಕುಮಾರ್ ಅವರ ಭಾವಚಿತ್ರವನ್ನು ಇಂದು ಬಳಸಿರುವುದು ಹೆಮ್ಮೆ ತಂದಿದೆ ಎಂದರು.

English summary
A grand function was arranged at South end circle park where Kannada film veteran Dr. Rajkumar's statue is situated to celebrate his 89th birth anniversary. Mayor Padmavathi inaugurated the function by lighting a lamp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X