ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಬಗ್ಗೆ ಅಬ್ದುಲ್ ಕಲಾಂ ಹೇಳಿದ್ದೇನು?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜುಲೈ 28 : ಭಾರತರತ್ನ, ಕ್ಷಿಪಣಿ ಮಾನವ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಉದ್ಯಾನ ನಗರಿ ಬೆಂಗಳೂರಿನ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ನಮ್ಮ ಮೆಟ್ರೋ, ಐಟಿ ಕಂಪನಿಗಳು ರಾಜ್ಯದ ಬೇರೆ ನಗರಗಳಲ್ಲೂ ಸ್ಥಾಪನೆಯಾಗಬೇಕು ಎಂಬುದು ಕಲಾಂ ಅವರ ಕನಸಾಗಿತ್ತು. [ಡಾ.ಕಲಾಂ ಸ್ಫೂರ್ತಿ ತುಂಬುವ ಹೇಳಿಕೆಗಳು]

ಬೆಂಗಳೂರಿನ ಸಂಚಾರಿ ಸಮಸ್ಯೆಯನ್ನು ಕಂಡಿದ್ದ ಕಲಾಂ ಅವರು ಉದ್ಯಾನ ನಗರಿಯಲ್ಲಿ ಹಸಿರು ವಾತಾವರಣ ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದ್ದರು. ಸಂಚಾರ ದಟ್ಟಣೆ ಸಮಸ್ಯೆ ಬಗೆರಿಯಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು. 2005ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದಾಗ ಈ ಕುರಿತು ಮಾತನಾಡಿದ್ದರು. [ಸರಳ ವ್ಯಕ್ತಿತ್ವದ ಅಬ್ದುಲ್ ಕಲಾಂ ಸಂಕ್ಷಿಪ್ತ ಪರಿಚಯ]

traffic police

ಯಲಹಂಕ ನ್ಯೂಟೌನ್‌ನಲ್ಲಿ ಡಾ.ಕಲಾಂ ಅಪಾರ್ಟ್‌ಮೆಂಟ್ ಹೊಂದಿದ್ದರು. ಎಚ್‌ಎಎಲ್, ಡಿಆರ್‌ಡಿಒ, ಇಸ್ರೋದಲ್ಲಿ ಕೆಲಸವಿರುವಾಗ ಅಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಬೆಂಗಳೂರಿನಲ್ಲಿ ಹಲವು ದಿನಗಳನ್ನು ಕಳೆದಿರುವ ಅವರ ಭಾರತದ ತ್ರಿವರ್ಣ ಧ್ವಜ ಚಂದ್ರನ ಮೇಲೆ ಹಾರಾಡಬೇಕು ಎಂದು ಇಸ್ರೋ ವಿಜ್ಞಾನಿಗಳಿಗೆ ಹೇಳುತ್ತಿದ್ದರು.[ಅಬ್ದುಲ್ ಕಲಾಂ ವಿಧಿವಶ]

ಸಂಚಾರ ಸಮಸ್ಯೆ ಬಗೆಹರಿಯಬೇಕು : ಬೆಂಗಳೂರಿನ ನಿವಾಸಿಗಳಿಗೆ ನಗರದ ಟ್ರಾಫಿಕ್ ಕಿರಿ-ಕಿರಿ ಪರಿಚಯವಿರುತ್ತದೆ. ಅಬ್ದುಲ್ ಕಲಾಂ ಸಹ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯಬೇಕು ಎಂಬ ಆಶಯವ ವ್ಯಕ್ತಪಡಿಸಿದ್ದರು.

2005ರಲ್ಲಿ ಸುವರ್ಣ ಕರ್ನಾಟಕ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ನಮ್ಮ ಮೆಟ್ರೋ ಯೋಜನೆ ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದರು. ಮೆಟ್ರೋ ಯೋಜನೆಯಿಂದ ಪ್ರತ್ಯೇಕ ಮಾರ್ಗ ನಿರ್ಮಾಣವಾಗಲಿದ್ದು, ಸಂಚಾರ ದಟ್ಟಣೆ ಕಡಿಮೆಯಾಗಲು ಇದು ಸಹಕಾರಿಯಾಗಲಿದೆ ಎಂದು ಹೇಳಿದ್ದರು.

ಉದ್ಯಾನ ನಗರಿಯ ಪ್ರಕೃತಿ ಸೌಂದರ್ಯವನ್ನು ಹಾಗೆಯೇ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದ ಡಾ.ಕಲಾಂ ಅವರು, ನಗರದಲ್ಲಿ ಕೈಗೊಳ್ಳುವ ಅಭಿವೃದ್ಧಿ ಚಟುವಟಿಕೆಗಳಿಂದ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ಉಂಟಾಗಬಾರದು ಎಂದು ತಿಳಿಸಿದ್ದರು.

ಐಟಿ ಬೇರೆ ನಗರಗಳಿಗೂ ವಿಸ್ತರಣೆಯಾಗಲಿ : ಬೆಂಗಳೂರಿಗೆ ಸೀಮಿತವಾಗಿರುವ ಐಟಿ ಕಂಪನಿಗಳು ಬೇರೆ ನಗರಗಳಿಗೂ ವಿಸ್ತರಣೆಯಾಗಬೇಕು ಎಂಬುದು ಕಲಾಂ ಆಶಯವಾಗಿತ್ತು. ಮೈಸೂರು, ಬೆಳಗಾವಿ, ಮಂಗಳೂರು, ಮಡಿಕೇರಿ, ಹುಬ್ಬಳ್ಳಿ-ಧಾರವಾಡದಲ್ಲಿಯೂ ಐಟಿ ಕಂಪನಿಗಳು ಸ್ಥಾಪನೆಗಯಾಗಬೇಕು ಎಂದು ಅವರು ಬಯಸಿದ್ದರು.

English summary
When it came to Bengaluru, former President of India, APJ Abdul Kalam had an instant connect. Ease the traffic woes of this beautiful city and protect its greenery, the Peoples’ President had said during a talk in 2005.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X