ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೊಮಿನಿಕ್ ಸೆರೆಯ ಹಿಂದೆ ಡೈನಾಮಿಕ್ ಕಥನ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ನವೆಂಬರ್,29: ಬೆಂಗಳೂರಿನಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಡೊಮಿನಿಕ್ ರಾಯ್ ಅನ್ನು ಬಂದಿಸಿದ್ದಾರೆ. ಆದರೆ ಡೊಮಿನಕ್ ಒಂದು ವಾರದಲ್ಲಿ ನಾಲ್ಕು ರಾಜ್ಯದಲ್ಲಿ ಸಂಚರಿಸಿದ್ದಾನೆ. ಆದರೂ ಅವನು ತೆಗೆದುಕೊಂಡು ಪರಾರಿಯಾಗಿದ್ದ ಹಣದಲ್ಲಿ 12.92 ಲಕ್ಷ ಹಣ ಏನು ಮಾಡಿದ ಎಂಬ ಅನುಮಾನ ಇನ್ನು ಕಾಡುತ್ತಾ ಇದೆ.

ನಾವು ಡೊಮಿನಿಕ್ ತನ್ನ ಕುಟುಂಬವನ್ನು ಕರೆದು ಕೊಂಡು ಹೋಗಲು ಬಂದಾಗಲೇ ಅವರ ಜಾಡನ್ನು ಪತ್ತೆ ಹಚ್ಚಲು ಮುಂದಾದೆವು. ಅವನು ಎಲ್ಲಿ ಎಲ್ಲಿ ಸಂಚರಿಸಬಹುದೆಂದು ಊಹೆ ಮಾಡಿ ವಿಡಿಯೋ ರೆಕಾರ್ಡ್ ಬಳಿಸಿದ್ದು, ಡೊಮಿನಿಕ್ ಪತ್ತೆ ಹಚ್ಚಲು ಸುಲಭವಾಯಿತು ಎನ್ನುತ್ತಾರೆ ಪಶ್ವಿಮ ವಿಭಾಗದ ಡಿಸಿಪಿ ಅನುಚೇತ್.[ಬೆಂಗಳೂರು ATM ಧನವಾಹನ ಪತ್ತೆ, ಆದ್ರೆ 92 ಲಕ್ಷ ನಾಪತ್ತೆ]

Dominic arrest behind have dynamic story

ಡೈನಾಮಿಕ್ ದರೋಡೆ :
ನವೆಂಬರ್ 23 ರಂದು ಡೊಮಿನಿಕ್ ಧನವಾಹನವನ್ನು ಕೆಜಿ ರಸ್ತೆಯಿಂದ ಅಪಹರಿಸಿದ್ದ. ಅದನ್ನು ವಸಂತನಗರದ ಬಳಿ ನಲವತೈದು ಲಕ್ಷ ಹಣ, ವಾಹನ ಮತ್ತು ಬಂದೂಕನ್ನು ಬಿಟ್ಟು ಮಿಕ್ಕೆಲ್ಲಾ ಹಣವನ್ನು ಬೇರೆಡೆ ಸಾಗಿಸಿದ್ದ. ನಂತರ ಮನೆಗೆ ತೆರಳಿ ಮಡದಿ ಎಲ್ವಿನ್, ಮಗುವಿನ ಜೊತೆ ಶಿವಾಜಿ ನಗರದಿಂದ ಶಾಂತಿನಗರದ ಮೂಲಕ ತೆರಳಿ ಊರನ್ನು ಬಿಡಲು ಮುಂದಾಗಿದ್ದರು. ಮೊದಲು ಅವರು ಚೈನೈನ ವೆಲ್ಲೂರಿಗೆ ಹೋಗುವುದು ನಂತರ ವೆಲ್ಲೂರಿನಿಂದ ಕೊಯಮತ್ತೂರು, ಆಮೇಲೆ ತ್ರಿಸ್ಸೂರು ನಂತರ ಕೇರಳ ತಲುಪುವ ಹುನ್ನಾರವನ್ನು ಮಾಡಿದ್ದರು.[ಹಣ ವಾಹನ ಅಪಹರಿಸಿದ್ದ ಡೊಮಿನಿಕ್ ರಾಯ್ ಬಂಧನ]

Dominic arrest behind have dynamic story

ಡಾಮಿನಿಕ್ ಹಣವನ್ನೆಲ್ಲಾ ಸಮಾನ್ಯ ಬ್ಯಾಗಿನಲ್ಲಿ ತುಂಬಿಕೊಂಡಿದ್ದ. ತ್ರಿಸೂರಿನಲ್ಲಿ ಲಾಡ್ಜಿನಲ್ಲಿ ಉಳಿದುಕೊಂಡು ಎಲ್ಲವನ್ನು ಚೆಕ್ ಮಾಡಿದ್ದಾರೆ. ವಿಜಯವಾಡದಲ್ಲಿ ಕೆಲದಿನ ಇದ್ದರು ಎನ್ನಲಾಗಿದ್ದು, ಭಯಗೊಂಡ ಎಲ್ವಿನ್ ಒಬ್ಬ ವಕೀಲರ ಹತ್ತಿರ ಸಲಹೆ ಕೇಳಿದ್ದಾರೆ. ಅವರ ಸಲಹೆಯಂತೆ ಬೆಂಗಳೂರಿಗೆ ತೆರಳಿದ್ದಾರೆ. ಹೆಂಡತಿ ಸೆಲ್ವಿನ್ ಮತ್ತು ಮಗನನ್ನು ಬೆಂಗಳೂರಿನ ಕುಲ್ಲಪ್ಪ ಸರ್ಕಲ್ ಬಳಿ ಇಳಿಸಿ ಡೊಮಿನಿಕ್ ತಮಿಳು ನಾಡಿನ ಸ್ಹೇಹಿತ ಸಲೀಮ್ ಬಳಿಗೆ ತೆರಳಿದ್ದ ಎನ್ನಲಾಗಿದೆ. ನಂತರ ತಮ್ಮ ಕುಟುಂಬವನ್ನು ಪೊಲೀಸರು ಸೆರೆ ಹಿಡಿದಾಗ ಮತ್ತೆ ಬಂದು ಶರಣಾಗಿದ್ದಾನೆ.

12.92 ಲಕ್ಷ ಇನ್ನು ಸಿಕ್ಕಿಲ್ಲ :
79.08 ಲಕ್ಷದಲ್ಲಿ ಧನವಾಹದಲ್ಲಿ 45 ಲಕ್ಷ ದೊರಕ್ಕಿತ್ತು. ನಂತರ ಭಾನುವಾರ ಎಲ್ವಿನ್ ಬಂಧನವಾದಾಗ 79.08 ಲಕ್ಷ ಪತ್ತೆಯಾಗಿತ್ತು. ಇನ್ನು 12.92 ಲಕ್ಷ ಏನಾಯಿತು ಎಂದು ಕೇಳಿದರೆ ಇಷ್ಟುದಿನ ಪ್ರಯಾಣದ ಖರ್ಚು, ಲಾರ್ಡ್ಜ್ ಇತ್ಯಾದಿಗಳಿಗೆ ವ್ಯಯವಾಗಿದೆ ಎಂದು ಡೊಮಿನಿಕ್ ಹೇಳಿದ್ದಾರೆ ಮತ್ತು ಅವರು ಪೂರ್ಣ ಹಣವನ್ನು ಕಟ್ಟಿಕೊಡುವುದಾಗಿ ತಿಳಿಸಿದ್ದಾರೆ.[ಡಾಮಿನಿಕ್ ಪತ್ನಿ ಪೊಲೀಸರಿಗೆ ಶರಣಾಗತಿ, 79.8 ಲಕ್ಷ ವಶಕ್ಕೆ!]

Dominic arrest behind have dynamic story

ಮಾಹಿತಿಯ ಪ್ರಕಾರ ಅವರು ತಮ್ಮಲ್ಲಿದ್ದ ಹಣವನ್ನು ತಮ್ಮ ನೆಂಟರಿಷ್ಟರಿಗೆ ನೀಡಿದ್ದಾರೆ. ಹಾಗು ನಿವೇಶನ ಮುಂತಾದನ್ನು ಖರೀದಿಸಿರಬಹುದು, ಹಾಗೆಯೇ ಅವರು ಯಾರಿಗೂ ತಿಳಿಯದಂತಹಾ ಸ್ಥಳದಲ್ಲಿ ಇಟ್ಟಿರಬಹುದು ಎನ್ನಲಾಗಿದೆ. ಇನ್ನೂ ಪೊಲೀಸರ ಮಾಹಿತಿಯಂತೆ ಅವನಿಗೆ ಹಣದ ನಿರ್ವಹಣೆ ಚೆನ್ನಾಗಿ ಗೊತ್ತಿದೆ, ಟ್ರಾನ್ಸ್ ಪೋರ್ಟ್ ಕಂಪನಿಯ ಮೇಲೆ ಹೂಡಿರಬಹುದು ಎನ್ನಲಾಗಿದೆ.

English summary
Dominic roy, van driver who fled away with 92 lakhs recently in Bengaluru arrested by Upparapet police on Monday. Dominic arrest behind have dynamic story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X