ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮಳೆ: ಬಿಬಿಎಂಪಿ ಅಧಿಕಾರಿಗಳ ರಜೆಗೆ ಬಿತ್ತು ಕತ್ತರಿ!

ದುರಂತಗಳನ್ನೆಲ್ಲ ಗಮನದಲ್ಲಿಟ್ಟುಕೊಂಡಿರುವ ಪಾಲಿಕೆ, ನಗರದಲ್ಲಿ ತುರ್ತು ಸೇವೆಯ ಅಗತ್ಯ ಯಾವಾಗ ಬೇಕಾದರೂ ಬರಬಹುದೆಂಬ ಕಾರಣಕ್ಕೆ ಪಾಲಿಕೆಯ ಅಧಿಕಾರಿಗಳು ಮತ್ತು ಇಂಜಿನಿಯರ್ ಗಳ ರಜೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 23: ನಗರದಲ್ಲಿ ಎರಡು ದಿನ ಸುರಿದ ಭಾರೀ ಮಳೆಯಿಂದ ಹಲವು ಅನಾಹುತಗಳು ಸಂಭವಿಸಿವೆ. ಹಲವೆಡೆ ಸಂಚಾರ ವ್ಯತ್ಯಯ, ರಸ್ತೆಯಲ್ಲೇ ನಿಂತ ನೀರು, ಧರೆಗುರುಳಿದ ಬೃಹತ್ ಮರಗಳು ಜೊತೆಗೆ, ಮೇ, 20 ಶನಿವಾರದಂದು ಬಿಬಿಎಂಪಿ ಕಾರ್ಮಿಕನೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿಹೋದ ಘಟನೆಯೂ ನೆನಪಿರಬಹುದು.

ಈ ದುರಂತಗಳನ್ನೆಲ್ಲ ಗಮನದಲ್ಲಿಟ್ಟುಕೊಂಡಿರುವ ಪಾಲಿಕೆ, ನಗರದಲ್ಲಿ ತುರ್ತು ಸೇವೆಯ ಅಗತ್ಯ ಯಾವಾಗ ಬೇಕಾದರೂ ಬರಬಹುದೆಂಬ ಕಾರಣಕ್ಕೆ ಪಾಲಿಕೆಯ ಅಧಿಕಾರಿಗಳು ಮತ್ತು ಇಂಜಿನಿಯರ್ ಗಳ ರಜೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ.[ಬೆಂಗಳೂರಲ್ಲಿ ಭಾರೀ ಗಾಳಿ ಸಹಿತ ಮಳೆ, ವಿದ್ಯುತ್ ವ್ಯತ್ಯಯ]

Do you know why BBMP Commissioner issues an order to cancelling leave?

ತೀರಾ ಅಗತ್ಯವಿದ್ದರಷ್ಟೆ ರಜೆ, ಇಲ್ಲವೆಂದರೆ ಪ್ರತಿಯೊಬ್ಬ ಸಿಬ್ಬಂದಿಯೂ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಅಕಸ್ಮಾತ್ ಸಿಬ್ಬಂದಿಗಳಿಗೆ ತುರ್ತು ರಜೆಯ ಅಗತ್ಯವಿದ್ದಲ್ಲಿ ಬಿಬಿಎಂಪಿ ಆಯುಕ್ತರ ಬಳಿ ಅನುಮತಿ ಪಡೆಯಬೇಕೆಂದೂ ತಿಳಿಸಲಾಗಿದೆ.

English summary
To avoid unforeseen disasters in the city, Bruhat Bengaluru Mahanagara Palike (BBMP) commissioner N Manjunath Prasad on Monday issued an order cancelling leave for officers and engineers in the Palike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X