ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನ ವಿಚಾರಣೆ ಮುಗಿದಿದೆ, ನಾಳೆ ಬರಲು ಹೇಳಿಲ್ಲ: ಡಿಕೆಶಿ

|
Google Oneindia Kannada News

ಬೆಂಗಳೂರು, ಆಗಸ್ಟ್ 07: ಆದಾಯ ತೆರಿಗೆ(ಐ.ಟಿ) ಇಲಾಖೆ ಕಚೇರಿಯಲ್ಲಿ ಸೋಮವಾರ ಸುಮಾರು ಮೂರು ತಾಸು ನಡೆದ ಸಚಿವ ಡಿ.ಕೆ ಶಿವಕುಮಾರ್ ಅವರ ವಿಚಾರಣೆ ಅಂತ್ಯಗೊಂಡಿದೆ.

ಐಟಿ ಕಚೇರಿಗೆ ವಿಚಾರಣೆಗೆ ಬಂದ ಡಿ.ಕೆ.ಶಿವಕುಮಾರ್ಐಟಿ ಕಚೇರಿಗೆ ವಿಚಾರಣೆಗೆ ಬಂದ ಡಿ.ಕೆ.ಶಿವಕುಮಾರ್

"ಇಂದು (ಸೋಮವಾರ) ಐಟಿ ಅಧಿಕಾರಿಗಳು ಬರಲು ಹೇಳಿದ್ದರು. ಅದರಂತೆ ಬಂದಿದ್ದೇನೆ. ಇಂದಿನ ವಿಚಾರಣೆ ಮುಗಿದಿದೆ, ನಾಳೆ ಬರಲು ಹೇಳಿಲ್ಲ. ಕರೆದಾಗ ಬರುವೆ ಎಂದು ಹೇಳಿ ಬಂದಿದ್ದೇನೆಂದು" ಇಂಧನ ಸಚಿವ ಡಿ.ಕೆ ಶಿವಕುಮಾರ್ ವಿಚಾರಣೆ ಮುಗಿಸಿಕೊಂಡು ಹೊರ ಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

DK Shivakumar leaves IT Dept office in Bengaluru after being questioned

ಆಗಸ್ಟ್ 2ರಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರದಲ್ಲಿರುವ ನಿವಾಸ ಸೇರಿದಂತೆ ಐವತ್ತಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆದಿತ್ತು. ಮೈಸೂರಿನಲ್ಲಿರುವ ಡಿ.ಕೆ.ಶಿವಕುಮಾರ್ ಮಾನವ ಮನೆಯ ಮೇಲೆಯೂ ದಾಳಿ ನಡೆಸಲಾಗಿತ್ತು.

ಗುಜರಾತ್ ಚುನಾವಣೆ: ಡಿಕೆ ಶಿವಕುಮಾರ್ ಅಖಾಡಕ್ಕಿಳಿದರೂ ಗೆಲುವು ಸುಲಭದ ತುತ್ತಲ್ಲಗುಜರಾತ್ ಚುನಾವಣೆ: ಡಿಕೆ ಶಿವಕುಮಾರ್ ಅಖಾಡಕ್ಕಿಳಿದರೂ ಗೆಲುವು ಸುಲಭದ ತುತ್ತಲ್ಲ

ಶನಿವಾರ ಬೆಳಗ್ಗೆ ದಾಳಿ ಮುಕ್ತಾಯಗೊಂಡಿದ್ದು, ಅಧಿಕಾರಿಗಳು ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದರು.

ಡಿ.ಕೆ.ಶಿವಕುಮಾರ್ ಅವರ ವಿದೇಶ ಪ್ರವಾಸಕ್ಕೆ ನಿರ್ಬಂಧ ವಿಧಿಸಿರುವ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಸಮನ್ಸ್ ಹಿನ್ನಲೆಯಲ್ಲಿ ಇಂದು ಸಚಿವರು ವಿಚಾರಣೆಗೆ ಹಾಜರಾಗಿದ್ದರು.

English summary
Karnataka Minister DK Shivakumar leaves IT Dept office in Bengaluru after being questioned for almost 3 hours. connection with the recent raids on his properties in Bengaluru and New Delhi last week. The minister was summoned to the questioning under Section 131 of the Income Tax Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X