ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ತಮಿಳುನಾಡಿನ ರಾಜಧಾನಿ ಬೆಂಗಳೂರಾಗಿದ್ರೆ ಚೆಂದ'

By Mahesh
|
Google Oneindia Kannada News

ಬೆಂಗಳೂರು,ಸೆ.30 : ನೆರೆ ರಾಜ್ಯಗಳ ನಡುವೆ ಹುಲ್ಲು ಕಡ್ಡಿ ಹಾಕಿದರೂ ಬೆಂಕಿ ಹತ್ತಿ ಉರಿಯುವಂಥ ಪರಿಸ್ಥಿತಿ ಇರುವಾಗ ಬಾಲಿವುಡ್, ಕಾಲಿವುಡ್, ಟಾಲಿವುಡ್ ನಲ್ಲಿ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ರಾಮ್ ಗೋಪಾಲ್ ವರ್ಮಾ ಅವರು ಕಿಡಿ ಹಾರಿಸಿದ್ದಾರೆ. ತಮಿಳುನಾಡಿನ ರಾಜಧಾನಿ ಬೆಂಗಳೂರಾಗಿದ್ರೆ ಚೆಂದ ಎಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಗಣೇಶ ಹಬ್ಬದ ದಿನ ಗಣೇಶ ಹುಟ್ಟು, ಬೆಳವಣಿಗೆ ಬಗ್ಗೆ ಟ್ವೀಟ್ ಮಾಡಿ ಹಿಂದೂಗಳ ಭಾವನೆಗಳನ್ನು ಕೆರಳಿಸಿದ್ದರು. ನಂತರ ಕ್ಷಮೆಯಾಚಿಸಿದ್ದರು. ಅದರೂ ಅವರ ವಿರುದ್ಧ ಭಾರತದ ಅನೇಕ ಕಡೆ ಧಾರ್ಮಿಕ ಭಾವನೆ ಕೆರಳಿಸಿದ ಆರೋಪದ ಮೇಲೆ ವರ್ಮಾ ಅವರ ಮೇಲೆ ದೂರು ದಾಖಲಿಸಲಾಗಿತ್ತು. [ವೆಬ್ ತಾಣದಿಂದ ಜಯಾ ಔಟ್]

ಹೀಗೆ ವಿವಾದಾತ್ಮಕ ಟ್ವೀಟ್ ಮಾಡುವುದರಲ್ಲಿ ಎತ್ತಿದ ಕೈ ಎನಿಸಿರುವ ವರ್ಮಾ ಅವರು ಈಗ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎನಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವುದನ್ನು ಲೇವಡಿ ಮಾಡಿದ್ದಾರೆ. ಜಯಲಲಿತಾ ಜೈಲು ಪಾಲಾಗಿರುವುದು ಹಾಗೂ ಅವರ ಅಭಿಮಾನಿಗಳ ಅತಿರೇಕದ ವರ್ತನೆ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.[ವರ್ಮಾ ಅಣುಕು ಟ್ವೀಟ್ ರಾದ್ಧಾಂತ]

ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದೇನು

ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದೇನು

‘ಬೆಂಗಳೂರು ಈಗ ತಮಿಳುನಾಡಿನ ರಾಜಧಾನಿ ನೋಡಲು ನಾನು ಇಷ್ಟಪಡುತ್ತೇನೆ. ಪರಪ್ಪನ ಅಗ್ರಹಾರವೇ ಆಡಳಿತ ಕೇಂದ್ರವಾಗಿದೆ. ಭಾರತ ಒಂದಾಗಿದೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ' ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ವರ್ಮಾ ಮಾಡಿದ ಟ್ವೀಟ್ ಇಲ್ಲಿದೆ

ವರ್ಮಾ ಮಾಡಿದ ಟ್ವೀಟ್ ಇಲ್ಲಿದೆ ವರ್ಮಾ ಕೋಡ್ ಭಾಷೆ ಅವರಿಗೆ ಅರ್ಥವಾಗಬೇಕು. ನಾನು ತಮಿಳುನಾಡಿನ ರಾಜಧಾನಿ ಬೆಂಗಳೂರು ಆಗಿದೆ ಎಂದು ಹೇಳಿಲ್ಲ ಎಂದರೂ ಆಶ್ಚರ್ಯವಿಲ್ಲ

ವರ್ಮಾ ಅಭಿಮಾನಿಗಳಿಂದ ಪ್ರತಿಕ್ರಿಯೆ

ನಿಮಗೆ ಸಕತ್ ಸಬ್ಜೆಕ್ಟ್ ಸಿಕ್ಕಿದೆ. ಅಪರಾಧಿಯಾದ ರಾಜಕಾರಣಿ ಜೈಲಿನಲ್ಲೇ ಕುಳಿತು ರಾಜ್ಯಭಾರ ಮಾಡುವ ಕಥೆ

ಮಿತ ಬಂಡವಾಳದಲ್ಲೇ ಸಿನಿಮಾ ಸಿದ್ಧ

ಈ ಕಥೆ ಆಧಾರಿಸಿ ಮಿತ ಬಂಡವಾಳದಲ್ಲೇ ಸಿನಿಮಾ ಸಿದ್ಧ ಮಾಡಬಹುದು. ಪ್ರತಿಭಟನೆ, ಧರಣಿ ಲೈವ್ ಶೂಟಿಂಗ್ ಮಾಡಬಹುದು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಈ ಸಮಯಕ್ಕೆ(4.19) ವರ್ಮಾ ಅವರ ಟ್ವೀಟ್ 111 ರೀಟ್ವೀಟ್ಸ್, 116 ಫೇವರೀಟ್ ಆಗಿದೆ

English summary
Director Ram Gopal Varma is back with another controversial tweets. The director's Twitter page reads "I luv it that capital of Tamilnadu now is Bangalore nd it's secretariat is in parappana agrahara...This the ultimate proof that India is one".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X