ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಸಬೇಕು ಇದ್ದು ಜಯಿಸಬೇಕು ಅನುಪಮಾ ಶೆಣೈ ಮೇಡಂ

By Mahesh
|
Google Oneindia Kannada News

ಬೆಂಗಳೂರು, ಜೂನ್ 07: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ ಪಿ ಹುದ್ದೆಗೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಅವರಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬೆಂಬಲ ವ್ಯಕ್ತವಾದ ನಂತರ ಇದೀಗ ಐಪಿಎಸ್ ಅಧಿಕಾರಿಯೊಬ್ಬರು ಅನುಪಮಾ ಬಗ್ಗೆ ಎರಡು ಒಳ್ಳೆ ಮಾತುಗಳನ್ನಾಡಿದ್ದಾರೆ.

"ಹುದ್ದೆಗೆ ರಾಜೀನಾಮೆ ನೀಡೋದು ಸರಿಯಲ್ಲ" ಎಂದು ಟ್ವಿಟರ್ ಮೂಲಕ ಹೇಳಿದವರು ಡಿಐಜಿ ರೂಪ. @D_Roopa_IPS ಈ ಮುಂಚೆ ಕರ್ನಾಟಕ ಸೈಬರ್ ಸೆಲ್ ನಲ್ಲಿ ಡಿಐಜಿ ಆಗಿ ಕಾರ್ಯ ನಿರ್ವಹಿಸಿದ್ದ ರೂಪ, ಈಗ ಸಕಾಲ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ.

ಅನುಪಮಾ ರಾಜೀನಾಮೆ ಪ್ರಕರಣದ ಬಗ್ಗೆ ಒನ್ ಇಂಡಿಯದ ಜತೆ ಮಾತನಾಡಿದ ರೂಪ ಹೇಳಿದ್ದಿಷ್ಟು - Ive made a practical comment.If it can motivate youngsters I'm happy.I neither approve nor disaprv decision. ಈಸ ಬೇಕು ಇದ್ದು ಜಯಿಸಬೇಕು ಎನ್ನುವುದು ರೂಪಾ ಅವರ ನಿಲವು. [ಅನುಪಮಾ ಶೆಣೈಗೆ ನ್ಯಾಯ ಸಿಗಬೇಕಿದೆ? ಸರ್ಕಾರಕ್ಕೆ ಜನತೆ ಸವಾಲ್!]

DIG Roopa support to Anupama Shenoy
ರಾಜೀನಾಮೆ ನೀಡಿದರೆ ಜೀವನದಲ್ಲಿ ಏನನ್ನು ಸಾಧಿಸಲು ಆಗುವುದಿಲ್ಲ. ಪುರಂದರದಾಸರು ಹೇಳುವಂತೆ, ಈಸಬೇಕು ಇದ್ದು ಜಯಿಸಬೇಕು. ಹಾಗಾಗಿ ಗೆಲುವಿನ ಕಡೆ ಈಜಿ ಎಂದು ಅನುಪಮಾ ಶೆಣೈ ಅವರಿಗೆ ನೈತಿಕ ಬೆಂಬಲ ತುಂಬಿದ್ದಾರೆ.[ 'ಪರಮೇಶ್ವರ ನಾಯ್ಕರೇ ನಿಮ್ಮ ರಾಜೀನಾಮೆ ಯಾವಾಗ?']

ಈ ನಡುವೆ ಲಿಕ್ಕರ್ ಲಾಬಿ, ರಮ್ ರಾಜ್ಯ ನಂತರ ಬೃಹನ್ನಳೆ [ನನ್ನ Facebook statusಗಳನ್ನು ನೋಡಿ ನನ್ನ ಮೇಲೆ FIR ದಾಖಲಿಸುತ್ತಾರಂತೆ! # ಬೃಹನ್ನಳೆಯರು 😄 😄 ]

-- ಎಂದು ಯಾರನ್ನೋ ಕರೆದಿದ್ದ ಅನುಪಮಾ ಅವರು ಸಚಿವ ಪರಮೇಶ್ವರ್ ನಾಯ್ಕ್ ಅವರಿಗೆ ರಾಜೀನಾಮೆ ನೀಡುವಂತೆ ಸವಾಲ್ ಹಾಕಿದ್ದರು.

2016ರ ಜನವರಿಯಲ್ಲಿ ಅನುಪಮಾ ಶೆಣೈ ಅವರನ್ನು ವಿಜಯಪುರದ ಇಂಡಿಯ ಡಿವೈಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ನಾಯಕ್ ಅವರ ಫೋನ್ ಕರೆ ಸ್ವೀಕರಿಸದ ಕಾರಣ ವರ್ಗಾವಣೆ ಮಾಡಲಾಗಿದೆ ಎಂಬ ವಿವಾದ ಎದ್ದಿತ್ತು. ಈಗ ಪುನಃ ಅನುಪಮಾ ಅವರು ಸಚಿವರ ವಿರುದ್ಧ ಹೋರಾಟ ಆರಂಭಿಸಿದ್ದಾರೆ.[ಅನುಪಮಾ ಶೆಣೈ ಬಗ್ಗೆ ಒಂದಿಷ್ಟು]

ಇತ್ತೀಚೆಗೆ ಕೂಡ್ಲಿಗಿಯಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರ ಹೆಸರಿನ ಭವನದ ಪಕ್ಕದಲ್ಲಿ ವೈನ್ ಶಾಪ್ ಕಟ್ಟುವುದನ್ನು ವಿರೋಧಿಸಿದ್ದ ಅನುಪಮಾ ಅವರು ಇತ್ತೀಚೆಗೆ ಶಾಪ್ ಓನರ್ ರವಿ ಹಾಗೂ ಇನ್ನಿತರರನ್ನು ಬಂಧಿಸಿದ್ದರು. ಆದರೆ, ಅನುಪಮಾ ಅವರ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಂದ ವಿರೋಧ ವ್ಯಕ್ತವಾಗಿತ್ತು. ಪ್ರಕರಣದಲ್ಲಿ ಅನುಪಮಾ ಅವರದ್ದೇ ತಪ್ಪು ಎಂದು ಟೀಕಿಸಲಾಯಿತು. ಇದರಿಂದ ಮನನೊಂದು ರಾಜೀನಾಮೆ ನೀಡಿದ್ದರು.

English summary
DIG Roopa has extended her moral support to Anupama Shenoy who recently resigned from her post DYSP, Kudligi, Ballari district, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X