ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾರ್ಮೆಂಟ್ಸ್ ನೌಕರರ ನಿಜವಾದ ಸಮಸ್ಯೆ ಯಾರೂ ಕೇಳಲಿಲ್ಲ

By ಮೈತ್ರೇಯಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 25 : ಕೇಂದ್ರ ಸರ್ಕಾರದ ಪಿಎಫ್ ನೀತಿಯ ವಿರುದ್ಧ ಗಾರ್ಮೆಂಟ್ಸ್ ನೌಕರರು ಕಳೆದ ವಾರ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಗಲಭೆಗೆ ಕಾರಣವಾಯಿತು. ಆದರೆ, ಗಾರ್ಮೆಂಟ್ಸ್ ನೌಕರರ ನಿಜವಾದ ಸಮಸ್ಯೆ ಬಗ್ಗೆ ಯಾರೂ ಧ್ವನಿ ಎತ್ತಲಿಲ್ಲ.

ಸರ್ಕಾರ ಹೊಸ ಪಿಎಫ್ ನೀತಿಯನ್ನು ವಾಪಸ್ ಪಡೆಯಿತು. ಮಾಧ್ಯಮಗಳು ಪ್ರತಿಭಟನೆಯನ್ನು ಮರೆತವು. ಆದರೆ, ರಾಜ್ಯದಲ್ಲಿ ಸುಮಾರು 8 ಲಕ್ಷದಷ್ಟಿರುವ ಗಾರ್ಮೆಂಟ್ಸ್ ನೌಕರರ ಸಮಸ್ಯೆ ಬಗ್ಗೆ ಯಾರೂ ಗಮನಹರಿಸಿಲ್ಲ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಶೇ 85 ರಷ್ಟು ನೌಕರರು ಮಹಿಳೆಯರು. ಇವರ ಸಮಸ್ಯೆಯನ್ನೂ ಯಾರೂ ಕೇಳಲಿಲ್ಲ. [ಪಿಎಫ್ ಗಲಭೆ : ಲಾಭ ಎಲ್ಲರಿಗೆ, ನಷ್ಟ ಮಾತ್ರ ನೌಕರರಿಗೆ!]

 garment

ಕಡಿಮೆ ವೇತನ, ಹೆಚ್ಚು ಕೆಲಸ, ಲೈಂಗಿಕ ಕಿರುಕುಳ ಮುಂತಾದ ಸಮಸ್ಯೆಗಳನ್ನು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರು ಎದುರಿಸುತ್ತಿದ್ದಾರೆ. ಪ್ರತಿಭಟನೆ ವೇಳೆ ನಡೆದ ಗಲಭೆಗೆ ನೌಕರರನ್ನು ದೂರುವ ಜನರು ಅವರ ಸಮಸ್ಯೆಗಳತ್ತ ಗಮನ ಹರಿಸಲಿಲ್ಲ. [ಬೆಂಗಳೂರು : ಪ್ರತಿಭಟನೆ ಗಲಭೆ ಆಗಿದ್ದು ಹೇಗೆ?]

ಗಲಭೆಗೆ ನಾವು ಕಾರಣವಲ್ಲ : ಶನಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗಾರ್ಮೆಂಟ್ಸ್ ಮತ್ತು ಟೆಕ್ಸ್‌ಟೈಲ್ಸ್ ನೌಕರರ ಸಂಘದ ಅಧ್ಯಕ್ಷೆ ಪ್ರತಿಭಾ ಅವರು, 'ನೌಕರರ ಪ್ರತಿಭಟನೆ ವೇಳೆ ನಡೆದ ಗಲಭೆಗೆ ನಾವು ಕಾರಣರಲ್ಲ' ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. [ಪಿಎಫ್ ವಿಥ್ ಡ್ರಾ ನಿಯಮಕ್ಕೆ ಜುಲೈ 31ರ ತನಕ ಬ್ರೇಕ್]

'ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ನೌಕರರು ಪ್ರತಿದಿನ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ವಾರ ನಡೆದ ಪ್ರತಿಭಟನೆಯಲ್ಲಿ ಅದರ ಅಕ್ರೋಶವೂ ಇತ್ತು. ಪೊಲೀಸರು ಹೇಳುವಂತೆ ಗಲಭೆಯಲ್ಲಿ ಕೆಲವು ಸಮಾಜ ಘಾತಕ ಶಕ್ತಿಗಳ ಕೈವಾಡವಿದೆ' ಎನ್ನುತ್ತಾರೆ ಪ್ರತಿಭಾ. [ಮಂಗಳವಾರ ಬೆಂಗಳೂರ ಶಾಂತಿ ಕದಡಿದವರು ಯಾರು?]

protest

'ಗಾರ್ಮೆಂಟ್ಸ್‌ನಲ್ಲಿ ಕೆಲವು ಮಾಡುವ ಮಹಿಳೆಯರು ಮಾಸಿಕ 7000 ರೂ. ವೇತನ ಪಡೆಯುತ್ತಾರೆ. ಪ್ರತಿಭಟನೆ ನಡೆದ ದಿನ ಕೆಲಸಕ್ಕೆ ಹಾಜರಾಗಿರಲಿಲ್ಲ. ಒಂದು ದಿನದ ವೇತನವನ್ನು ಈ ತಿಂಗಳು ರದ್ದುಗೊಳಿಸುವ ಸಾಧ್ಯತೆ ಇದೆ' ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

English summary
The media continuously focused on the violence unleased on the streets of Bengaluru when recently thousands of garment factory workers of the city protested against the restrictions on provident fund withdrawals. . Once the protest got over, the media conveniently forgot the real issues affecting the 8 lakh garment workers in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X