ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಎಟಿಎಂಗಳಲ್ಲಿ ಹಣದ ಕೊರತೆ, ಸರಿಹೋಗಲು 20 ದಿನ ಬೇಕಂತೆ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆಬ್ರವರಿ 8: ಮತ್ತೆ ನಗದಿಗಾಗಿ ಪರದಾಟ ಆರಂಭವಾಗಿದೆ. ನೋಟು ನಿಷೇಧದ ನಂತರ ಹಣ ವಿಥ್ ಡ್ರಾ ಮಿತಿಯಲ್ಲಿ ಈಚೆಗಷ್ಟೇ ಸ್ವಲ್ಪ ಮಟ್ಟಿಗೆ ವಿನಾಯಿತಿ ಘೋಷಿಸಲಾಗಿತ್ತು. ಅದರೆ ಎರಡು ದಿನಗಳಿಂದ ಹಲವು ಎಟಿಎಂಗಳಲ್ಲಿ ಹಣವೇ ಇಲ್ಲ. ಕೆಲವು ಎಟಿಎಂಗಳಲ್ಲಿ ಎರಡು ಸಾವಿರ ರುಪಾಯಿ ನೋಟುಗಳು ಮಾತ್ರ ಬರುತ್ತಿವೆ. ಇದರಿಂದ ಮತ್ತೆ ನಗದಿಗೆ ಹಾಹಾಕಾರ ಆಗಿದೆ.

ಚಲಾವಣೆಯಲ್ಲಿ 500, 1000 ರುಪಾಯಿ ನೋಟುಗಳ ಒಟ್ಟು ಮೊತ್ತ 15.44 ಲಕ್ಷ ಕೋಟಿ ರುಪಾಯಿಯನ್ನು ವಾಪಸ್ ಪಡೆಯಲಾಯಿತು. ಆ ನಂತರ ಬ್ಯಾಂಕ್-ಎಟಿಎಂಗಳಲ್ಲಿ ನಗದು ಇಲ್ಲದೆ ಪರದಾಟವಾಯಿತು. ಈಗಲೂ ಎಟಿಎಂಗೆ ಪೂರೈಸುತ್ತಿರುವ ನಗದು ಪ್ರಮಾಣ ಸಾಲುತ್ತಿಲ್ಲ. ನೋಟು ನಿಷೇಧಕ್ಕೆ ಮುನ್ನ ದೇಶದಾದ್ಯಂತ ಇರುವ ಎಟಿಎಂಗಳಿಗೆ ದಿನಕ್ಕೆ ಹದಿಮೂರು ಸಾವಿರ ಕೋಟಿ ಪೂರೈಕೆಯಾಗುತ್ತಿತ್ತು.[ಎಸ್ ಬಿ ಅಕೌಂಟ್ ಹಣ ಡ್ರಾ ನಿರ್ಬಂಧ ಆರ್ ಬಿಐನಿಂದ ಶೀಘ್ರವೇ ವಾಪಸ್]

Demonetisation: The cash crunch is back

ಆದರೆ, ಈಗ ಆ ಮೊತ್ತ 12 ಸಾವಿರ ಕೋಟಿ ತೋರಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಹೆಚ್ಚಿನ ಮೊತ್ತ ಡ್ರಾ ಮಾಡುತ್ತಿದ್ದಾರೆ ಮತ್ತು ತಿಂಗಳ ಆರಂಭವಾದ್ದರಿಂದ ವೇತನದಾರರು ತಮ್ಮ ಸಂಬಳ ಪಡೆಯಲು ಬಂದಿರುವುದರಿಂದ ಎಟಿಎಂಗಳಲ್ಲಿ ಹಣದ ಕೊರತೆ ಆಗಿದೆ ಎಂದು ಅಧಿಕಾರಿಗಳೇ ಹೇಳಿದ್ದಾರೆ.

ನಾಲ್ಕರಲ್ಲಿ ಒಂದು ಎಟಿಎಂ ಖಾಲಿಯಾಗಿದೆ. ಫೆಬ್ರವರಿ 10ರ ವೇಳೆಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರಬಹುದು ಎಂದು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಆರ್ ಬಿಐನಿಂದ ಎಟಿಎಂಗಳಲ್ಲೇ 24 ಸಾವಿರ ಡ್ರಾ ಮಾಡಲು ಅನುವು ಮಾಡಿರುವುದರಿಂದ ಇಂಥ ಸನ್ನಿವೇಶ ನಿರ್ಮಾಣವಾಗಿದೆ. ಕೆಲ ದಿನಗಳಲ್ಲೇ ಇದು ಸರಿಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಬ್ಯಾಂಕ್ ಅಧಿಕಾರಿಗಳು.[ಶೀಘ್ರದಲ್ಲೇ ದೇಶದಲ್ಲಿ ಹೊಸ ರು.1000 ನೋಟು ಸಾಧ್ಯತೆ]

ಆದರೆ, ಬ್ಯಾಂಕಿಂಗ್ ವಲಯದಲ್ಲೇ ಕೆಲಸ ಮಾಡುವವರ ಪ್ರಕಾರ: ಈ ಪರಿಸ್ಥಿತಿ ಸುಧಾರಿಸಲು ಕನಿಷ್ಠ 20 ದಿನ ಬೇಕು. ಅದು ಕೂಡ ಎಷ್ಟು ಹಣ ಪೂರೈಕೆ ಆಗುತ್ತದೆ ಎಂಬುದರ ಮೇಲೆ ಅವಲಂಬಿಸಿದೆ. ಆದರೆ ಕಳೆದ ನವೆಂಬರ್ ಹಾಗು ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಈಗಿನ ಪರಿಸ್ಥಿತಿ ಎಷ್ಟೋ ವಾಸಿ ಎಂಬುದು ವಾಸ್ತವ.

English summary
The cash woes have returned. After a brief relief post demonetisation, several ATMS in the past two days have been running dry. Some ATMs only dispensed the Rs 2,000 note which once again has caused a cash crunch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X