ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಕ್ರೀದ್ ಆಚರಣೆ, ಬನ್ನೂರು ಕುರಿಗೆ ಬೇಡಿಕೆ ಹೆಚ್ಚು

|
Google Oneindia Kannada News

ಬೆಂಗಳೂರು, ಅ.4 : ಬೆಂಗಳೂರಿನಲ್ಲಿ ಬಕ್ರೀದ್ ಹಬ್ಬಕ್ಕೆ ಸಿದ್ಧತೆ ನಡೆಯುತ್ತಿದೆ. ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಕುರಿಗಳ ಮಾರಾಟ ಭರದಿಂದ ಸಾಗಿದ್ದು, ಬನ್ನೂರು ಕುರಿಗೆ ಬೇಡಿಕೆ ಹೆಚ್ಚಾಗಿದೆ. 10 ಸಾವಿರ ರೂ.ಗಳಿಂದ 2 ಲಕ್ಷದ ವರೆಗೆ ಕುರಿಗಳ ದರ ನಿಗದಿಯಾಗಿದೆ.

ಕರ್ನಾಟಕದಲ್ಲಿ ಸೋಮವಾರ ಬಕ್ರೀದ್ ಆಚರಣೆ ಮಾಡಲಾಗುತ್ತದೆ. ಇದಕ್ಕಾಗಿ ಸರ್ಕಾರ ಈಗಾಗಲೇ ಅ.6ರ ಸೋಮವಾರ ಸರ್ಕಾರಿ ರಜೆ ನೀಡಿದೆ. ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಕುರಿ ಮತ್ತು ಮೇಕೆಯ ವ್ಯಾಪಾರ ಜೋರಾಗಿ ಸಾಗಿದೆ. ಬಕ್ರೀದ್ ಆಚರಣೆ ಮಾಡುವವರು ಮೈದಾನಕ್ಕೆ ಬಂದು ಕುರಿಗಳ ಖರೀದಿಯಲ್ಲಿ ತೊಡಗಿದ್ದಾರೆ.

Sheep

ಈದ್ಗಾ ಮೈದಾನದಲ್ಲಿ ಬನ್ನೂರು ಕುರಿಗೆ ಹೆಚ್ಚಿನ ಬೇಡಿಕೆ ಇದೆ. ಉದ್ದನೆಯ ಕಿವಿಯ, ನೋಡಲು ಆಕರ್ಷಕ ಮೈಕಟ್ಟು ಹೊಂದಿರುವ ಬನ್ನೂರು ಕುರಿಗೆ 10 ಸಾವಿರದಿಂದ 2 ಲಕ್ಷದ ವರೆಗೆ ಬೆಲೆ ಇದೆ. ಮಳವಳ್ಳಿ, ಮಂಡ್ಯ, ಮದ್ದೂರು, ಹೊಸಕೋಟೆ, ಚಿತ್ರದುರ್ಗ ಮತ್ತು ಪಕ್ಕದ ಆಂಧ್ರಪ್ರದೇಶದಿಂದ ಕುರಿ ವ್ಯಾಪಾರಿಗಳು ಮೈದಾನಕ್ಕೆ ಆಗಮಿಸಿದ್ದಾರೆ. [ಬಕ್ರೀದ್‌ ಹಬ್ಬ, ಕುರಿಗಳಿಗೆ ಸಖತ್ ಡಿಮಾಂಡ್]

ವ್ಯಾಪಾರಿಗಳ ಪ್ರಕಾರ ಕಳೆದ ವರ್ಷಕ್ಕಿಂತ 20 ರಿಂದ 30 ರಷ್ಟು ದರ ಈ ಬಾರಿ ಹೆಚ್ಚಳವಾಗಿದೆ. ಬಕ್ರೀದ್‌ಗೆ ಎರಡು ದಿನಗಳು ಉಳಿದಿರುವುದರಿಂದ ದರ ಹೆಚ್ಚಾಗುತ್ತಲೇ ಇದ್ದು 50,000 ರೂ.ಗೆ ಇಂದು ಎರಡು ಕುರಿ ಮಾರಾಟ ಮಾಡಿದ್ದೇನೆ ಎಂದು ಮದ್ದೂರಿನ ರಾಮಪ್ಪ ಎಂಬ ರೈತರು ಹೇಳಿದ್ದಾರೆ. [ಬೆಂಗ್ಳೂರಲ್ಲಿ ಶಾರುಖ್, ಸಲ್ಮಾನ್ ಬಕ್ರಾಗೆ ಬೇಡಿಕೆ ಹೆಚ್ಚು]

ಇತ್ತ ಮಾರುಕಟ್ಟೆಯಲ್ಲಿಯೂ ಕುರಿ ಮಾಂಸದ ದರ ಏರಿಕೆಯಾಗಿದೆ. ಮಾಂಸ ಮಾರಾಟ ಮಾಡುವವರು ಕುರಿಗಳನ್ನು ಹೆಚ್ಚಿನ ದರ ನೀಡಿ ಖರೀದಿ ಮಾಡಬೇಕಾಗಿದೆ. ಕಳೆದ ವಾರ 5000ವಿದ್ದ ಕುರಿಯ ದರಗಳು ಈ ವಾರ 10,000ಕ್ಕೆ ಹೋಗಿವೆ ಎನ್ನುತ್ತಾರೆ ಈದ್ಗಾ ಮೈದಾನದ ವ್ಯಾಪಾರಿಗಳು.

English summary
A single Bannur ram with impressive looks, long ears can fetch anything from Rs 10,000 to nearly Rs 2 lakh at Chamrajpet Idgah grounds in Bangalore ahead of the Bakrid celebration on October 6 Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X