ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕತ್ತರಿಸಿಟ್ಟ ಹಣ್ಣುಗಳನ್ನು ಮಾರಾಟ ಮಾಡಬೇಡಿ

|
Google Oneindia Kannada News

ಬೆಂಗಳೂರು, ಏ. 29 : ಉದ್ಯಾನನಗರಿ ಬೆಂಗಳೂರಿನಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ಆದ್ದರಿಂದ ಜನರು ರಸ್ತೆ ಬದಿ ಮಾರಾಟ ಮಾಡುವ ಕಲ್ಲಂಗಡಿ ಸೇರಿದಂತೆ ಇತರ ಹಣ್ಣುಗಳನ್ನು ತಿಂದು ದಾಹ ತೀರಿಸಿಕೊಳ್ಳುತ್ತಾರೆ. ಆದರೆ, ರಸ್ತೆ ಬದಿ ವ್ಯಾಪಾರಿಗಳು ಹಣ್ಣುಗಳನ್ನು ಕತ್ತರಿಸಿ ಹಾಗೆಯೇ ತೆರಿದಿಟ್ಟಿರುತ್ತಾರೆ. ಸದ್ಯ ಬಿಬಿಎಂಪಿ ಇದನ್ನು ತಡೆಯಲು ಮುಂದಾಗಿದೆ.

ರಸ್ತೆ ಬದಿಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುವವರು ಕತ್ತರಿಸಿದ ಹಣ್ಣುಗಳನ್ನು ತೆರೆದಿಡಬಾರದು ಗಾಜಿನ ಅಥವ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಇಟ್ಟು ಮಾರುವುದನ್ನು ಕಡ್ಡಾಯಗೊಳಿಸಲು ಬಿಬಿಎಂಪಿ ಮುಂದಾಗಿದೆ. ಬೇಸಿಗೆ ಮುಗಿಯುವ ತನಕ ನಿಯಮ ಜಾರಿಯಲ್ಲಿರಲಿದ್ದು, ಕತ್ತರಿಸಿದ ಹಣ್ಣುಗಳನ್ನು ತೆರೆದಿಟ್ಟು ಮಾರಾಟ ಮಾಡುವುದನ್ನು ತಪ್ಪಿಸಲು ವಿಶೇಷ ತಂಡವೊಂದನ್ನು ರಚಿಸಿದೆ.

Fruit

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಆದ್ದರಿಂದ ಜನರು ಕಲ್ಲಂಗಡಿ ಸೇರಿದಂತೆ ಇತರ ಹಣ್ಣುಳ ಮೊರೆ ಹೋಗುತ್ತಿದ್ದಾರೆ. ವ್ಯಾಪಾರಿಗಳು ಕತ್ತರಿಸಿ ತೆರೆದಿಟ್ಟ ಹಣ್ಣುಗಳನ್ನು ತಿಂದರೆ ಜನರು ಅನಾರೋಗ್ಯ ಪೀಡಿತರಾಗುವ ಸಾಧ್ಯತೆ ಇದೆ. ಆದ್ದರಿಂದ ಬಿಬಿಎಂಪಿ ಈ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. [ಬಿಸಿಲನಾಡಿನ ಊರುಗಳಿಗೆ ಸೆಡ್ಡು ಹೊಡೆದ ಬೆಂಗಳೂರು]

ಈಗಾಗಲೇ ಬಿಬಿಎಂಪಿ ಆರೋಗ್ಯಧಿಕಾರಿ ನೇತೃತ್ವದಲ್ಲಿ ಕತ್ತರಿಸಿದ ಹಣ್ಣುಗಳನ್ನು ತೆರದಿಟ್ಟು ಮಾರುವುದನ್ನು ಪತ್ತೆ ಹಚ್ಚಲು ತಂಡವನ್ನು ರಚಿಸಲಾಗಿದೆ. ಪ್ರತಿದಿನ ನಗರ ಪ್ರದಕ್ಷಿಣೆ ಹಾಕುವ ಈ ತಂಡ ವ್ಯಾಪಾರಿಗಳನ್ನು ತೆರೆದಿಟ್ಟ ಹಣ್ಣುಗಳನ್ನು ಮಾರಾಟ ಮಾಡುವುದು ಕಂಡು ಬಂದರೆ ಕೂಡಲೇ ಅದನ್ನು ವಶಕ್ಕೆ ಪಡೆಯುತ್ತಾರೆ.

ನಗರದ ಪ್ರತಿ ವಾರ್ಡ್ ನಲ್ಲಿಯೂ ಈ ಕಾರ್ಯಾಚರಣೆ ನಡೆಯಲಿದೆ. ತರೆದಿಟ್ಟು ಹಣ್ಣುಗಳನ್ನು ತಿಂದರೆ ಅದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂಬ ಮಾಹಿತಿಯನ್ನು ಒಳಗೊಂಡ ಕರಪತ್ರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಹಂಚಲು ಬಿಬಿಎಂಪಿ ನಿರ್ಧಿರಿಸಿದೆ. ಅಂದಹಾಗೆ ಬೆಂಗಳೂರಿನಲ್ಲಿ ಇಂದು ತಾಪಮಾನ ಎಷ್ಟಿಗೆ ಗೊತ್ತಾ?

English summary
The Bruhat Bangalore Mahanagara Palike (BBMP) has decided to make it mandatory for street vendors to sell cut fruits kept in an enclosure. They will seize cut fruits if they are being sold uncovered or in unhygienic conditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X