ಬೆಂಗಳೂರಿನಲ್ಲಿ ಅಮೆರಿಕದ ಆಹಾರ ಮೇಳ, ಸ್ಪರ್ಧೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 08: ಬೆಂಗಳೂರಿನ ಫುಡ್ ಹಾಸ್ಪಿಟಾಲಿಟಿ ವರ್ಲ್ಡ್ ನಲ್ಲಿ ಅಮೆರಿಕದ ಕೃಷಿ ಉತ್ಪನ್ನಗಳ ಅತಿದೊಡ್ಡ ಕಲಿನರಿ ಮತ್ತು ಮಿಕ್ಸಾಲಜಿ ಸ್ಪರ್ಧೆ ಆಯೋಜನೆಗೊಂಡಿದೆ. ನಾಗವಾರ ಬಳಿಯ ವೈಟ್ ಆರ್ಕಿಡ್ ಕನ್ವೆಷನ್ ಸೆಂಟರ್ ನಲ್ಲಿ ಜೂನ್ 9 ರಿಂದ 11 ರ ತನಕ ನಡೆಯಲಿದೆ.

ಯುಎಸ್ ಕ್ರಾನ್ ಬೆರಿಸ್, ವಾಷಿಂಗ್ಟನ್ ಆಪಲ್ಸ್, ಯುಎಸ್‍ಎ ಪಿಯರ್ಸ್, ಕ್ಯಾಲಿಫೋರ್ನಿಯಾ ವಾಲ್‍ನಟ್ಸ್ ಮತ್ತು ಯುಎಸ್ ಪೀಕಾನ್ಸ್ ಪ್ರದರ್ಶನಗೊಳ್ಳಲಿದೆ.[ಕಾಫಿ ಪ್ರಿಯರಿಂದ ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ]

ಅಮೆರಿಕದ ಅತ್ಯಂತ ಆಪ್ಯಾಯಮಾನ ಹಣ್ಣುಗಳು ಮತ್ತು ಬೀಜಗಳು ಹಾಗೂ ಮುಂಚೂಣಿಯ ಕೃಷಿ ಉತ್ಪನ್ನಗಳು ಫುಡ್ ಹಾಸ್ಪಿಟಾಲಿಟಿ ವರ್ಲ್ಡ್ (ಎಫ್‍ಎಎಚ್ ಡಬ್ಲ್ಯೂ)ನಲ್ಲಿ ಪ್ರದರ್ಶನಗೊಳ್ಳಲಿವೆ.[ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!]

Bengaluru Hosts Culinary and Mixology competition with U.S. agricultural products

ಈ ಕಾರ್ಯಕ್ರಮ ದಕ್ಷಿಣ ಭಾರತದ ಅತಿದೊಡ್ಡ ಕಲಿನರಿ ಮತ್ತು ಮಿಕ್ಸಾಲಜಿ ಸ್ಪರ್ಧೆಯಾಗಿದೆ.'ಸೌಥ್ ಇಂಡಿಯಾ ಕಲಿನರಿ ಚಾಲೆಂಜ್ ಅಂಡ್ ಬೇಕಿಂಗ್ ಕಾಂಟೆಸ್ಟ್' ಮತ್ತು 'ಮಿಕ್ಸಾಲಜಿ ಚಾಲೆಂಜ್' ಅನ್ನು ಸೌಥ್ ಇಂಡಿಯಾ ಕಲಿನರಿ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಲಿದೆ. [ಜ್ವಾಳದ ರೊಟ್ಟಿ ವಿದೇಶದಲ್ಲೂ ಸಿಕ್ತಾವ್ರೀ!]

ಈ ಸ್ಪರ್ಧೆಯಲ್ಲಿ ಮುಂಚೂಣಿಯ ಬಾಣಸಿಗರು ಮತ್ತು ಮಿಕ್ಸಾಲಜಿಸ್ಟರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲಿದ್ದಾರೆ. ಈ ಸ್ಪರ್ಧೆಯನ್ನು ಎಸ್‍ಐಸಿಎ, ಉದ್ಯಮದ ಪ್ರತಿಷ್ಠಿತರು ಮತ್ತು ಯುಎಸ್‍ಡಿಎ ಪ್ರತಿನಿಧಿಗಳ ಸಹಯೋಗದಲ್ಲಿ ನಡೆಯಲಿದೆ.

ಈ ಉಪಕ್ರಮ ಕುರಿತು ಯು.ಎಸ್.ಕ್ರಾನ್ ಬೆರಿ ಮಾರ್ಕೆಟಿಂಗ್ ಕಮಿಟಿಯ ಭಾರತ ಪ್ರತಿನಿಧಿ ಕೀತ್ ಸುಂದರ್‍ಲಾಲ್ : ಆಹಾರ ಮತ್ತು ಆತಿಥ್ಯ ಕ್ಷೇತ್ರದ ಭಾರತದ ಅತಿದೊಡ್ಡ ವೃತ್ತಿಪರ ಟ್ರೇಡ್ ಶೋಗಳೊಂದಿಗೆ ಸಹಯೋಗಕ್ಕೆ ನಮಗೆ ಬಹಳ ಥ್ರಿಲ್ ಆಗಿದೆ.

Bengaluru Hosts Culinary and Mixology competition with U.S. agricultural products

ಈ ಅಭಿಯಾನದಿಂದ ಯು.ಎಸ್.ಕ್ರಾನ್ ಬೆರಿ, ವಾಷಿಂಗ್ಟನ್ ಆಪಲ್ , ಯುಎಸ್‍ಎ ಪಿಯರ್ಸ್, ಕ್ಯಾಲಿಫೋರ್ನಿಯಾ ವಾಲ್‍ನಟ್ಸ್ ಮತ್ತು ಯುಎಸ್ ಪಿಕಾನ್ಸ್ ಲಭ್ಯತೆ, ವೈವಿಧ್ಯತೆ ಮತ್ತು ಬಳಕೆಯ ಕುರಿತು ಭಾರತದಲ್ಲಿ ಅರಿವನ್ನು ಹೆಚ್ಚಿಸುತ್ತದೆ.[ಬಾರ್ಬಿಕ್ಯೂ ನೇಷನ್ ಫುಡ್ ರುಚಿ ಎಲ್ಲೆಡೆ ಹಬ್ಬುತ್ತಿದೆ]

ಎಫ್‍ಎಚ್‍ಡಬ್ಲ್ಯೂನಲ್ಲಿ ಭಾಗವಹಿಸುವುದರಿಂದ ಜನರಿಗೆ ಅಮೆರಿಕಾದ ಮುಂಚೂಣಿಯ ಕೃಷಿ ಉತ್ಪನ್ನಗಳ ತಾಜಾತನ, ವೈವಿಧ್ಯತೆ ಮತ್ತು ರುಚಿಯನ್ನು ಪರಿಚಯಿಸುತ್ತದೆ. ಈ ಶೋ ಹಿಂದಿನ ಯಶಸ್ಸಿನಿಂದ ನಮ್ಮ ಗ್ರಾಹಕರನ್ನು ಮುಟ್ಟುತ್ತದೆ' ಎನ್ನುತ್ತಾರೆ.

ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ನಡೆಯಲಿರುವ ಈ ಮಿಕ್ಸಾಲಜಿ ಸ್ಪರ್ಧೆ ಜೂನ್ 10 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಮಿಕ್ಸಾಲಜಿ ಎಂದರೆ ಬಾರ್ ಗಳಲ್ಲಿ ವಿವಿಧ ಪಾನೀಯಗಳನ್ನು ಸಮ್ಮಿಶ್ರಗೊಳಿಸಿ ಆಪ್ಯಾಯಮಾನವಾದ ಕಾಕ್ ಟೇಲ್ ಪೇಯವನ್ನಾಗಿಸುವುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ

English summary
To showcase the most delectable variety of fruits and nuts from America, U.S. Premium Agricultural Products will have a prominent presence at the upcoming Food Hospitality World (FHW), Bengaluru show from 9th-11th June at the White Orchid Convention Center, Bengaluru.
Please Wait while comments are loading...