ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ದಾರ್ ಪಟೇಲ್ ಗೆ ಕಾಂಗ್ರೆಸ್ ವಂಚನೆ: ದೇವೇಗೌಡ

ಒಕ್ಕಲಿಗ ಸಮುದಾಯ ಒಗ್ಗಟ್ಟಿನಿಂದ ಇರಬೇಕು. ಅದಕ್ಕಾಗಿ ನಾನು ಬದುಕಿರುವ ತನಕ ಪ್ರಯತ್ನಿಸ್ತೀನಿ. ಅಂದಹಾಗೆ, ಸರ್ದಾರ್ ವಲ್ಲಭ ಭಾಯ್ ಪಟೇಲ್ ಕೂಡ ನಮ್ಮದೇ ಸಮುದಾಯದವರು ಎಂಬ ಹೆಮ್ಮೆ ನಮಗಿದೆ: ದೇವೇಗೌಡ

|
Google Oneindia Kannada News

ಬೆಂಗಳೂರು, ನವೆಂಬರ್ 14: ದೇಶದಲ್ಲಿ ಎಷ್ಟು ಮಂದಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಬಗ್ಗೆ ಸಮೀಕ್ಷೆಯನ್ನು ನಡೆಸುವ ಅಗತ್ಯ ಇದೆ. ಇದೇ ವಿಚಾರವಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜತೆ ಕೂಡ ಮಾತನಾಡಿದ್ದೀನಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾನುವಾರ ಬೆಂಗಳೂರಿನಲ್ಲಿ ಹೇಳಿದರು.

ಒಕ್ಕಲಿಗರ ಸಂಘ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸಮುದಾಯ ಒಗ್ಗಟ್ಟಿನಿಂದ ಇರಬೇಕು. ಅದಕ್ಕಾಗಿ ನಾನು ಬದುಕಿರುವ ತನಕ ಪ್ರಯತ್ನಿಸ್ತೀನಿ. ಅಂದಹಾಗೆ, ಸರ್ದಾರ್ ವಲ್ಲಭ ಭಾಯ್ ಪಟೇಲ್ ಕೂಡ ನಮ್ಮದೇ ಸಮುದಾಯದವರು ಎಂಬ ಹೆಮ್ಮೆ ನಮಗಿದೆ ಎಂದರು.[ಒಂದೇ ವೇದಿಕೆಯಲ್ಲಿ ಗೌಡ್ರು, ಎಸ್ ಎಂ ಕೃಷ್ಣ: ಶತ್ರುವಿನ ಶತ್ರು.. ಮಿತ್ರ?]

deve gowda

ಗುಜರಾತ್ ರಾಜ್ಯದಲ್ಲಿ ಪಟೇಲ್ ಅವರ ಸ್ಮಾರಕ ನಿರ್ಮಾಣ ಆಗ್ತಿದೆ. ಅದಕ್ಕಾಗಿ ದೇಶ-ಹೊರ ದೇಶದವರು ಸಹ ದೇಣಿಗೆ ಕೊಟ್ಟಿದ್ದಾರೆ. ಇಂಥ ಕೆಲಸದಲ್ಲಿ ಸಮುದಾಯದವರು ಒಟ್ಟಿಗೆ ನಿಲ್ಲಬೇಕು ಎಂದರು. ಪಟೇಲ್ ಈ ದೇಶಕ್ಕೆ ಮೊದಲ ಪ್ರಧಾನಮಂತ್ರಿ ಅಗಬೇಕಿತ್ತು. ಆದರೆ ಕಾಂಗ್ರೆಸ್ ವಂಚನೆ ಮಾಡಿ, ತಪ್ಪಿಸಿತು ಎಂದು ಹೇಳಿದರು.[ರೈತರ ಮೇಲಿನ ಲಾಠಿ ಚಾರ್ಜ್ ಖಂಡಿಸಿದ ಒಕ್ಕಲಿಗರ ಸಂಘ]

ಇನ್ನು ಸಚಿವ ತನ್ವೀರ್ ಸೇಠ್ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಮಾಧ್ಯಮದ ವರದಿಯಿಂದ ಸಚಿವರದೇ ತಪ್ಪು ಎನ್ನಲು ಸಾಧ್ಯವಿಲ್ಲ. ವಾಟ್ಸ್ ಅಪ್ ನಲ್ಲಿ ಏನೇನೋ ಬರ್ತಿರ್ತವೆ. ಅದ್ದರಿಂದ ಈ ಪ್ರಕರಣವನ್ನು ಮುಖ್ಯಮಂತ್ರಿಗಳು ಸೂಕ್ಷ್ಮವಾಗಿ ಗಮನಿಸಬೇಕು ಎಂದು ದೇವೇಗೌಡ ಹೇಳಿದರು.

English summary
Community engaged in agriculture activities must be survey in the nation, suggested by former prime minister H.D. Deve gowda on Sunday in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X