{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/complaint-alleges-kharge-amassed-rs-50-000-crore-lokayukta-090165.html" }, "headline": "ಖರ್ಗೆ ಬಳಿ 50,000 ಕೋಟಿ ಅಕ್ರಮ ಆಸ್ತಿ, ದೂರು", "url":"https://kannada.oneindia.com/news/bengaluru/complaint-alleges-kharge-amassed-rs-50-000-crore-lokayukta-090165.html", "image": { "@type": "ImageObject", "url": "http://kannada.oneindia.com/img/1200x60x675/2014/12/19-1418997146-kharge.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/12/19-1418997146-kharge.jpg", "datePublished": "2014-12-19T19:22:52+05:30", "dateModified": "2015-05-11T17:41:35+05:30", "author": { "@type": "Person", "name": "ವಿಕ್ಕಿ ನಂಜಪ್ಪ" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "Senior Congress leader Mallikarjuna Kharge is in trouble with the Lokayukta probing a case that alleges that he owns Rs 50,000 crore worth of property, according to reports.", "keywords": "Mallikarjuna kharge, congress, lokayukta, property, wealth, probe, allegation, complaint, bengaluru, karnataka, ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್, ಲೋಕಾಯುಕ್ತ, ಆಸ್ತಿ, ಸಂಪತ್ತು, ತನಿಖೆ, ಆರೋಪ, ದೂರು, ಬೆಂಗಳೂರು, ಕರ್ನಾಟಕ", "articleBody":"ಬೆಂಗಳೂರು, ಡಿ. 19: ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಕ್ರಮವಾಗಿ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ.ಸಮಾಜ ಪರಿವರ್ತನ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ. ರತ್ನಾಕರ್ ಅವರು ಭ್ರಷ್ಟಾಚಾರ ತಡೆ ಕಾಯಿದೆ ಅಡಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಚಿವರಾಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ಈ ಹಣ ಸಂಪಾದಿಸಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ. ದಿನೇಶ್ ಗುಂಡೂರಾವ್ ವಿರುದ್ಧ ಭೂ ಅಕ್ರಮ ಆರೋಪಪ್ರಸ್ತುತ ಲೋಕಾಯುಕ್ತ ರಾಯಚೂರು ಘಟಕವು ಈ ದೂರನ್ನು ಪರಿಶೀಲಿಸುತ್ತಿದೆ. ಈ ಕುರಿತು ಕನ್ನಡ ಒನ್ಇಂಡಿಯಾ ಜೊತೆ ಮಾತನಾಡಿದ ಅಧಿಕಾರಿಗಳು, ದೂರಿನಲ್ಲಿರುವ ಆರೋಪ ಕುರಿತು ತನಿಖೆ ನಡೆಸುತ್ತಿದ್ದೇವೆ. ಆರೋಪ ನಿಜವಾಗಿದ್ದರೆ ಎಫ್ಐಆರ್ ದಾಖಲಿಸಿ, ಪ್ರಕರಣ ನೋಂದಾಯಿಸಲಾಗುವುದು ಎಂದು ತಿಳಿಸಿದ್ದಾರೆ. ಶೆಟ್ಟರ್ ವಿರುದ್ಧದ ತನಿಖೆಗೆ ತಡೆಯಾಜ್ಞೆದೂರಿನಲ್ಲಿರುವ ಆರೋಪಗಳೇನು?ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಹಣ ಸಂಪಾದಿಸಿದ್ದಾರೆ. ಪರಿಶಿಷ್ಟ ಜಾತಿ ಬ್ಯಾಕ್& zwnj ಲಾಗ್ ಹುದ್ದೆಗಳನ್ನು ತುಂಬಲು 1,427 ಸಹಾಯಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್& zwnj ಗಳನ್ನು ಅಕ್ರಮವಾಗಿ ನೇಮಕಾತಿ ಮಾಡಿದ್ದಾರೆ. 1980ರಿಂದ ಕಂದಾಯ ಸಚಿವರಾಗಿದ್ದ ಖರ್ಗೆ ಭಾರೀ ಪ್ರಮಾಣದ ಸಂಪತ್ತು ಗಳಿಸಿದ್ದು, ಅದರ ಮೊತ್ತ 50,000 ಕೋಟಿ ರೂ.ಗಳಷ್ಟಾಗುತ್ತದೆ. ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ಕಂಪ್ಲೀಟ್ ಡೀಟೇಲ್ಸ್ಎಷ್ಟು ಆಸ್ತಿಗಳಿವೆ?ಬನ್ನೇರುಘಟ್ಟದಲ್ಲಿ 500 ಕೋಟಿ ರೂ. ಮೌಲ್ಯದ ಬೃಹತ್ ಸಂಕೀರ್ಣ, ಚಿಕ್ಕಮಗಳೂರಿನಲ್ಲಿ 1,000 ಕೋಟಿ ರೂ. ಮೌಲ್ಯದ 300 ಎಕರೆ ವಿಸ್ತೀರ್ಣದ ಕಾಫಿ ತೋಟ, 50 ಕೋಟಿ ರೂ. ಮೌಲ್ಯದ ಒಂದು ಮನೆ, ಕೆಂಗೇರಿಯಲ್ಲಿ 40 ಎಕರೆ ವಿಸ್ತೀರ್ಣದ ತೋಟದ ಮನೆ, ಬೆಂಗಳೂರಿನಲ್ಲಿ ಎಂ.ಎಸ್. ರಾಮಯ್ಯ ಮಹಾವಿದ್ಯಾಲಯದ ಸಮೀಪ 25 ಕೋಟಿ ರೂ. ಮೌಲ್ಯದ ಒಂದು ಕಟ್ಟಡ, ಆರ್.ಟಿ. ನಗರದಲ್ಲಿ ಒಂದು ಮನೆ, ಬಳ್ಳಾರಿ ರಸ್ತೆಯಲ್ಲಿ 17 ಎಕರೆ ವಿಸ್ತೀರ್ಣದ ಭೂಮಿ, ಇಂದಿರಾನಗರದಲ್ಲಿ ಮೂರು ಅಂತಸ್ತುಗಳ ಒಂದು ಕಟ್ಟಡ, ಸದಾಶಿವನಗರದಲ್ಲಿ ಎರಡು ಮನೆಗಳು ಮತ್ತು ಇತರ ಆಸ್ತಿಗಳು. ಭೂ ಹಗರಣ : ಖಮರುಲ್ಲಾ ಇಸ್ಲಾಂ ವಿರುದ್ಧ ತನಿಖೆಇಷ್ಟಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರು ಮೈಸೂರು, ಕಲಬುರಗಿ, ಚೆನ್ನೈ, ಗೋವಾ, ಪುಣೆ, ನಾಗಪುರ, ಮುಂಬಯಿ ಮತ್ತು ನವದೆಹಲಿಯಲ್ಲಿ ಆಸ್ತಿ ಹೊಂದಿದ್ದಾರೆ. ಕೆಲವು ಆಸ್ತಿಗಳು ಗಂಡುಮಕ್ಕಳು, ಹೆಣ್ಣುಮಕ್ಕಳು, ಅಳಿಯ ಮತ್ತು ಪತ್ನಿಯ ಹೆಸರಿನಲ್ಲಿದೆ ಎಂದು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಲಾಗಿದೆ." }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖರ್ಗೆ ಬಳಿ 50,000 ಕೋಟಿ ಅಕ್ರಮ ಆಸ್ತಿ, ದೂರು

By ವಿಕ್ಕಿ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿ. 19: ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಕ್ರಮವಾಗಿ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ.

ಸಮಾಜ ಪರಿವರ್ತನ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ. ರತ್ನಾಕರ್ ಅವರು ಭ್ರಷ್ಟಾಚಾರ ತಡೆ ಕಾಯಿದೆ ಅಡಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಚಿವರಾಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ಈ ಹಣ ಸಂಪಾದಿಸಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ. [ದಿನೇಶ್ ಗುಂಡೂರಾವ್ ವಿರುದ್ಧ ಭೂ ಅಕ್ರಮ ಆರೋಪ]

ಪ್ರಸ್ತುತ ಲೋಕಾಯುಕ್ತ ರಾಯಚೂರು ಘಟಕವು ಈ ದೂರನ್ನು ಪರಿಶೀಲಿಸುತ್ತಿದೆ. ಈ ಕುರಿತು ಕನ್ನಡ ಒನ್ಇಂಡಿಯಾ ಜೊತೆ ಮಾತನಾಡಿದ ಅಧಿಕಾರಿಗಳು, "ದೂರಿನಲ್ಲಿರುವ ಆರೋಪ ಕುರಿತು ತನಿಖೆ ನಡೆಸುತ್ತಿದ್ದೇವೆ. ಆರೋಪ ನಿಜವಾಗಿದ್ದರೆ ಎಫ್ಐಆರ್ ದಾಖಲಿಸಿ, ಪ್ರಕರಣ ನೋಂದಾಯಿಸಲಾಗುವುದು" ಎಂದು ತಿಳಿಸಿದ್ದಾರೆ. [ಶೆಟ್ಟರ್ ವಿರುದ್ಧದ ತನಿಖೆಗೆ ತಡೆಯಾಜ್ಞೆ]

kharge

ದೂರಿನಲ್ಲಿರುವ ಆರೋಪಗಳೇನು?
ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಹಣ ಸಂಪಾದಿಸಿದ್ದಾರೆ. ಪರಿಶಿಷ್ಟ ಜಾತಿ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲು 1,427 ಸಹಾಯಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್‌ಗಳನ್ನು ಅಕ್ರಮವಾಗಿ ನೇಮಕಾತಿ ಮಾಡಿದ್ದಾರೆ. 1980ರಿಂದ ಕಂದಾಯ ಸಚಿವರಾಗಿದ್ದ ಖರ್ಗೆ ಭಾರೀ ಪ್ರಮಾಣದ ಸಂಪತ್ತು ಗಳಿಸಿದ್ದು, ಅದರ ಮೊತ್ತ 50,000 ಕೋಟಿ ರೂ.ಗಳಷ್ಟಾಗುತ್ತದೆ. [ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ಕಂಪ್ಲೀಟ್ ಡೀಟೇಲ್ಸ್]

ಎಷ್ಟು ಆಸ್ತಿಗಳಿವೆ?
ಬನ್ನೇರುಘಟ್ಟದಲ್ಲಿ 500 ಕೋಟಿ ರೂ. ಮೌಲ್ಯದ ಬೃಹತ್ ಸಂಕೀರ್ಣ, ಚಿಕ್ಕಮಗಳೂರಿನಲ್ಲಿ 1,000 ಕೋಟಿ ರೂ. ಮೌಲ್ಯದ 300 ಎಕರೆ ವಿಸ್ತೀರ್ಣದ ಕಾಫಿ ತೋಟ, 50 ಕೋಟಿ ರೂ. ಮೌಲ್ಯದ ಒಂದು ಮನೆ, ಕೆಂಗೇರಿಯಲ್ಲಿ 40 ಎಕರೆ ವಿಸ್ತೀರ್ಣದ ತೋಟದ ಮನೆ, ಬೆಂಗಳೂರಿನಲ್ಲಿ ಎಂ.ಎಸ್. ರಾಮಯ್ಯ ಮಹಾವಿದ್ಯಾಲಯದ ಸಮೀಪ 25 ಕೋಟಿ ರೂ. ಮೌಲ್ಯದ ಒಂದು ಕಟ್ಟಡ, ಆರ್.ಟಿ. ನಗರದಲ್ಲಿ ಒಂದು ಮನೆ, ಬಳ್ಳಾರಿ ರಸ್ತೆಯಲ್ಲಿ 17 ಎಕರೆ ವಿಸ್ತೀರ್ಣದ ಭೂಮಿ, ಇಂದಿರಾನಗರದಲ್ಲಿ ಮೂರು ಅಂತಸ್ತುಗಳ ಒಂದು ಕಟ್ಟಡ, ಸದಾಶಿವನಗರದಲ್ಲಿ ಎರಡು ಮನೆಗಳು ಮತ್ತು ಇತರ ಆಸ್ತಿಗಳು. [ಭೂ ಹಗರಣ : ಖಮರುಲ್ಲಾ ಇಸ್ಲಾಂ ವಿರುದ್ಧ ತನಿಖೆ]

ಇಷ್ಟಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರು ಮೈಸೂರು, ಕಲಬುರಗಿ, ಚೆನ್ನೈ, ಗೋವಾ, ಪುಣೆ, ನಾಗಪುರ, ಮುಂಬಯಿ ಮತ್ತು ನವದೆಹಲಿಯಲ್ಲಿ ಆಸ್ತಿ ಹೊಂದಿದ್ದಾರೆ. ಕೆಲವು ಆಸ್ತಿಗಳು ಗಂಡುಮಕ್ಕಳು, ಹೆಣ್ಣುಮಕ್ಕಳು, ಅಳಿಯ ಮತ್ತು ಪತ್ನಿಯ ಹೆಸರಿನಲ್ಲಿದೆ ಎಂದು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಲಾಗಿದೆ.

English summary
Senior Congress leader Mallikarjuna Kharge is in trouble with the Lokayukta probing a case that alleges that he owns Rs 50,000 crore worth of property, according to reports. The allegation is that Mallikarjun Kharge has amassed wealth disproportionate to his known source of income and hence a complaint under Prevention of Corruption Act was filed against him by B Rathnakar, the General Secretary of the Samaj Parivarthan Samithi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X