ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರ ಗಲಾಟೆ: ಸರಕಾರದ ಕಿವಿಹಿಂಡಿದ ಗವರ್ನರ್

By Srinath
|
Google Oneindia Kannada News

ಬೆಂಗಳೂರು, ಮೇ 29: ಕಾಫಿ ಶಾಪಿನಲ್ಲಿ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಯುವತಿಯರ ಫೋಟೋ ತೆಗೆದ ಪ್ರಕರಣದ ಬಗ್ಗೆ ರಾಜ್ಯಪಾಲ ಭಾರದ್ವಾಜ್ ಅವರು ಸರಕಾರದ ಕಿವಿ ಹಿಂಡಿದ್ದಾರೆ.

ಸಿಐಡಿ ತನಿಖೆಗೆ ಆದೇಶಿಸಿರುವ ರಾಜ್ಯ ಸರಕಾರವು ಆರೋಪಿ KSRP ADGP ಡಾ. ಪಿ ರವೀಂದ್ರನಾಥ್ ಅವರನ್ನು ತಕ್ಷಣ ವರ್ಗ ಮಾಡಿದೆ. ಅವರ ಸ್ಥಾನದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಎನ್ಎಸ್ ಮೇಘರಿಕ್ ಅವರನ್ನು ನೇಮಿಸಿದೆ. ಪ್ರಕರಣದ ತನಿಖೆಯ ನೇತೃತ್ವವನ್ನೂ ಅವರಿಗೇ ವಹಿಸಲಾಗಿದೆ. ಆದರೆ ಡಾ ರವೀಂದ್ರನಾಥ್ ಅವರಿಗೆ ಯಾವುದೇ ಸ್ಥಾನವನ್ನು ತೋರಿಲ್ಲ. ಕಾಫಿ ಶಾಪಿನಲ್ಲಿ ಯುವತಿಯರ ಫೋಟೋ ತೆಗೆದ ಪ್ರಕರಣದ ಬಗ್ಗೆ ರವೀಂದ್ರನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

coffee-shop-photo-incident-governor-asks-chief-minister-to-intervene

ಈ ಬೆಳವಣಿಗೆಗಳ ಬಳಿಕ ಪ್ರಕರಣವು ನಿನ್ನೆ ರಾತ್ರಿಯಿಂದ ವಿಕೋಪಕ್ಕೆ ಹೋಗಿದ್ದು, ರಾಜಧಾನಿಯಲ್ಲಿ ನಿನ್ನೆ ಕೆಎಸ್ಆರ್ ಪಿ ಪೊಲೀಸರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಪೊಲೀಸರ ವಿರುದ್ಧ ಪೊಲೀಸರೇ ಪ್ರತಿಭಟನೆ ನಡೆಸುವಂತಾಗಿದೆ. ಇದನ್ನು ಕಂಡು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಕಿಡಿಕಾರಿದ್ದಾರೆ. (ರವೀಂದ್ರನಾಥ್ ಪರ ನಿಂತ ಮೀಸಲು ಪೊಲೀಸ್ ಪಡೆ)

ಪೊಲೀಸರು ಪೊಲೀಸರೇ ಕಿತ್ತಾಡಿದರೆ ಹೇಗೆ? ಏನಿದು ಪ್ರಕರಣ? ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ. (ಕೆಫೆಯಲ್ಲಿ ಯುವತಿಯರ ಫೋಟೋ ಕ್ಲಿಕ್ಕಿಸಿದ ಎಡಿಜಿಪಿ)

English summary
Coffee Shop Photo incident - As the accussed Dr. P Ravindranath, ADGP, KSRP transferred the KSRP police resorted to protests late night. The Governor Hansraj Bhardwaj who monitord the incident has asked Chief Minister Siddramaiah to intervene and take neccesaru action in the incident. Dr. P Ravindranath has allegedly clicked photographs of two women by his mobile phone in a Coffee Shop in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X