ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.21, 22ರಂದು ಬೆಂಗ್ಳೂರಿನಲ್ಲಿ ಕರಾವಳಿಗರ ನಮ್ಮೂರ ಹಬ್ಬ

By Ramesh
|
Google Oneindia Kannada News

ಬೆಂಗಳೂರು. ಜನವರಿ. 20 : ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರು ಇದರ ನಾಲ್ಕನೇ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸುತ್ತಿರುವ "ನಮ್ಮೂರ ಹಬ್ಬ-2017" ಜನವರಿ 21 ನೇ ಶನಿವಾರ ಹಾಗೂ ಜನವರಿ 22ನೇ ಭಾನುವಾರ ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ಜಯನಗರದ 5ನೇ ಹಂತದಲ್ಲಿರುವ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ (ಶಾಲಿನಿ ಗ್ರೌಂಡ್) ನಡೆಯಲಿದೆ.

ಶಿವರಾಜ್ ಕುಮಾರ್ ಕಳೆದ ಬಾರಿ ಈ ನಮ್ಮೂರ ಹಬ್ಬದ ಮುಖ್ಯ ಅತಿಥಿಗಳಾಗಿದ್ದರು. ಈ ಬಾರಿಯ ನಮ್ಮೂರ ಹಬ್ಬದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಇದು ಕರ್ನಾಟಕ ಕರಾವಳಿ ಭಾಗದ ಸಂಸ್ಕೃತಿ, ಜನಪದ ಆಚರಣೆ, ಕ್ರೀಡೆ, ಜೀವನ ಶೈಲಿಯ ಶ್ರೀಮಂತಿಕೆ ಮತ್ತು ಕರಾವಳಿಯ ಖಾದ್ಯಗಳ ವೈವಿಧ್ಯತೆಯನ್ನು ಬೆಂಗಳೂರಿಗರಿಗೆ ಪರಿಚಯಿಸುವುದರ ಜತೆಗೆ ಇಲ್ಲಿ ನೆಲೆಸಿರುವ ಕರಾವಳಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಉತ್ಸವವಾಗಿದೆ.

coastal culture Namoora Habba 2017 to spread flavour in Bengaluru on jan 21 to 22

ಇಂದು ಬೆಂಗಳೂರಿನಲ್ಲಿ ಸರಿಸುಮಾರು 15 ಲಕ್ಷದಷ್ಟು ಕರಾವಳಿಯ ಜನರಿದ್ದು ಕರಾವಳಿಯ ತಾಯಿಬೇರಿನ ಜೊತೆಗಿನ ಅನುಬಂಧವನ್ನು ಕಡಿದುಕೊಳ್ಳದೆ ಜತನದಿಂದ ಕಾಪಿಟ್ಟುಕೊಂಡಿದ್ದಾರೆ.

ಇವರೆಲ್ಲರನ್ನೂ ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕೊಡುವ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಹಾಗೂ ಸಂಸ್ಕೃತಿ ವಿನಿಮಯದಂತಹ ಸದುದ್ದೇಶವನ್ನು ನಮ್ಮೂರ ಹಬ್ಬ ಹೊಂದಿದೆ.

coastal culture Namoora Habba 2017 to spread flavour in Bengaluru on jan 21 to 22

ಬೆಂಗಳೂರಿಗರಿಗೆ ಕರಾವಳಿ ಖಾದ್ಯಗಳ ಪರಿಚಯ: ಕರ್ನಾಟಕ ಕರಾವಳಿ ಭಾಗದ ಸಂಸ್ಕೃತಿ, ಜನಪದ ಆಚರಣೆ, ಕ್ರೀಡೆ ಮತ್ತು ಕರಾವಳಿ ಖಾದ್ಯಗಳ ವೈವಿಧ್ಯತೆಯನ್ನು ಬೆಂಗಳೂರಿಗೆ ಪರಿಚಯಿಸುವ ಉತ್ಸವ ಇದಾಗಿದೆ.

ಈ ಎಲ್ಲ ಮನೋರಂಜನೆಗಳ ಜೊತೆಗೆ ಕರಾವಳಿಯಿಂದ ಬರುವ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ ನೀರುದೋಸೆ, ಹಾಲುಬಾಯಿ, ಕಾಯಿ ಕಡುಬು, ಗೋಲಿಬಜೆ, ಪತ್ರೊಡೆ, ಉದ್ದಿನ ದೋಸೆ, ಕಡಲ ಏಡಿಯ ಸುಕ್ಕ, ಕೋರಿ ರೊಟ್ಟಿ, ಮೀನು ಹಾಗೂ ಸಿಗಡಿ ಬಳಸಿ ತಯಾರಿಸಿದ ಅಪರೂಪದ ಖಾದ್ಯಗಳು ಈ ಬಾರಿಯ ನಮ್ಮೂರ ಹಬ್ಬದ ವಿಶೇಷವಾಗಿರುತ್ತದೆ.

ನಮ್ಮೂರ ಹಬ್ಬದ ವಿಶೇಷ ಆಕರ್ಷಣೆ ಏನು? ಗಾಳಿಪಟ ಉತ್ಸವ,ಫೊಟೋ ಸಂತೆ ಮತ್ತು ಕಾರ್ಟೂನ್ ಹಬ್ಬವು ಈ ಬಾರಿಯ ವಿಶೇಷ ಆಕರ್ಷಣೆಯಾಗಲಿವೆ.

ನಮ್ಮೂರ ಹಬ್ಬದಲ್ಲಿ ಕಿರೀಟ ಪಡೆಯಲಿರುವ ಗಣ್ಯರು: ಡಾ.ಬಿ. ವಿ. ಆಚಾರ್ಯ, ಮಾಜಿ ಅಡ್ವೋಕೇಟ್ ಜನರಲ್ (ಕಾನೂನು ಕ್ಷೇತ್ರ), ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ (ಹೊರನಾಡ ಸಾಧನೆ)

English summary
'Namoora Habba-2017,' a festival of coastal Karnataka's culture, folk arts, traditions, sports and lifestyle, will be held under the banner of Abhinandana Samskruthika Trust at Chandra Gupta Maurya Stadium, Jayanagar 5th block, Bengaluru, on January 21 and 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X