ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

60 ಕೋಟಿ ವೆಚ್ಚದಲ್ಲಿ ಕಲಾಸಿಪಾಳ್ಯದಲ್ಲಿ ಬಸ್ ನಿಲ್ದಾಣ ನಿರ್ಮಾಣ

|
Google Oneindia Kannada News

ಬೆಂಗಳೂರು, ಆಗಸ್ಟ್ 18 : ಸದಾ ಜನಜಂಗುಳಿಯಿಂದ ತುಂಬಿರುವ ಕಲಾಸಿಪಾಳ್ಯದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ಸ್ಥಾಪನೆಯಾಗಲಿದೆ. 60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಸ್ ನಿಲ್ದಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ಮಾಡಿದರು.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ಕಲಾಸಿಪಾಳ್ಯ ಬಸ್ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು. 4 ಎಕರೆ 13 ಗುಂಟೆ ಜಾಗದಲ್ಲಿ 60 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ.[ಕಲಾಸಿಪಾಳ್ಯದಲ್ಲಿ ಬಸ್ ನಿಲ್ದಾಣ ಕಟ್ಟತ್ತಂತೆ ಸರ್ಕಾರ!]

CM Siddaramaiah laid foundation stone for Kalasipalya bus stand

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ನಿಲ್ದಾಣ ನಿರ್ಮಾಣ ಮಾಡುವ ಟೆಂಡರ್‌ ಅನ್ನು ಕೆಎಂವಿ ಪ್ರಾಜೆಕ್ಟ್ ಸಂಸ್ಥೆಗೆ ನೀಡಿದೆ. ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಬಿಬಿಎಂಪಿಯ ಬಳಿ ಇದ್ದು, ಅದನ್ನು ಬಿಎಂಟಿಸಿಗೆ ಹಸ್ತಾಂತರ ಮಾಡಲಾಗುತ್ತದೆ.

ನಗರ ಸಾರಿಗೆ ಬಸ್ಸುಗಳ ಫ್ಲಾಟ್‌ ಫಾರಂ, ಹೊರ ರಾಜ್ಯಗಳ ಬಸ್ಸುಗಳ ಫ್ಲಾಟ್‌ ಫಾರಂ, ಕೆ.ಆರ್.ಮಾರುಕಟ್ಟೆ ಮೆಟ್ರೋ ನಿಲ್ದಾಣಕ್ಕೆ ಸಬ್‌ ವೇ ನಿರ್ಮಾಣ, ಫುಡ್‌ಕೋರ್ಟ್, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ವ್ಯವಸ್ಥೆಗಳು ಬಸ್ ನಿಲ್ದಾಣದಲ್ಲಿರಲಿವೆ.

ಮೆಟ್ರೋ ನಿಲ್ದಾಣಕ್ಕೆ ಸಬ್‌ ವೇ : ಕಲಾಸಿಪಾಳ್ಯದ ನೂತನ ಬಸ್ ನಿಲ್ದಾಣದಿಂದ ವಿಕ್ಟೋರಿಯಾ ಆಸ್ಪತ್ರೆ ಸಮೀಪದಲ್ಲಿರುವ ನಮ್ಮ ಮೆಟ್ರೋ ನಿಲ್ದಾಣಕ್ಕೆ ಸಬ್ ವೇ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಬಸ್ ನಿಲ್ದಾಣದಿಂದ ಸಂಪರ್ಕವಿಲ್ಲ. ಕಲಾಸಿಪಾಳ್ಯದಿಂದ ನಿರ್ಮಾಣವಾದರೆ, ಇದೇ ಮೊದಲ ನಿಲ್ದಾಣವಾಗಲಿದೆ.

English summary
The Bangalore Metropolitan Transport Corporation (BMTC) has awarded the tender to construct a modern bus terminal at Kalasipalya at the cost of Rs 60 crore. Chief minister Siddaramaiah on Thursday laid the foundation for the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X