ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಕಾಮಗಾರಿ ಮುಕ್ತಾಯಕ್ಕೆ ಮುನ್ನವೇ ರಾಷ್ಟ್ರಪತಿಗಳಿಗೆ ಆಹ್ವಾನ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಮಹಾ ನಗರದ ಮೆಟ್ರೋ ಮೊದಲ ಹಂತದ ಯೋಜನೆಯನ್ನು ಲೋಕಾರ್ಪಣೆ ಮಾಡಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಆಹ್ವಾನಿಸಿ ಮಂಗಳವಾರ(ಮೇ 02)ದಂದು ಪತ್ರ ಬರೆದಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಮೇ 02: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಮಹಾ ನಗರದ ಮೆಟ್ರೋ ಮೊದಲ ಹಂತದ ಯೋಜನೆಯನ್ನು ಲೋಕಾರ್ಪಣೆ ಮಾಡಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಆಹ್ವಾನಿಸಿ ಮಂಗಳವಾರ(ಮೇ 02)ದಂದು ಪತ್ರ ಬರೆದಿದ್ದಾರೆ.

ಆದರೆ,ಗ್ರೀನ್ ಲೈನ್ ಮೆಟ್ರೋ ಲೋಕಾರ್ಪಣೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಸಂಪಿಗೆ ರಸ್ತೆಯಿಂದ ಬನಶಂಕರಿ ಯಲಚೇನಹಳ್ಳಿ ತನಕ ಇರುವ ಈ ಮಾರ್ಗದ ಕಾಮಗಾರಿ ಸಂಪೂರ್ಣವಾಗಿಲ್ಲ. ಲಭ್ಯ ಮಾಹಿತಿಯಂತೆ ಮೇ ತಿಂಗಳ ಅಂತ್ಯಕ್ಕೂ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ.

CM Siddaramaiah invites President to inaugurate Namma Metro Phase 1

ರೈಲ್ವೆ ಸುರಕ್ಷತಾ ಆಯೋಗದಿಂದ ಇನ್ನೂ ಈ ಮಾರ್ಗದ ಸುರಕ್ಷತೆಗೆ ಪ್ರಮಾಣ ಪತ್ರ ಸಿಕ್ಕಿಲ್ಲ. ಈ ಬಗ್ಗೆ ಬಿಎಂ ಅರ್ ಸಿಎಲ್ ಕೂಡಾ ಮನವಿ ಸಲ್ಲಿಸಿಲ್ಲ. 42 ಕಿ.ಮೀ ಉದ್ದದ ಮಾರ್ಗದಲ್ಲಿ 31 ಕಿ.ಮೀ ಮಾರ್ಗ ಇನ್ನೂ ಪ್ರಗತಿಯಲ್ಲಿದೆ. ಸುರಂಗ ಮಾರ್ಗವಿರುವ ನಿಲ್ದಾಣಗಳಲ್ಲಿ ಮೆಟ್ರೋ ಪ್ರಾಯೋಗಿಕ ಸಂಚಾರ ಇನ್ನೂ ಜಾರಿಯಲ್ಲಿದೆ.[ನಮ್ಮ ಮೆಟ್ರೋ ಮೊದಲ ಹಂತ ಮೇ ಅಂತ್ಯಕ್ಕೆ ಸಂಪೂರ್ಣ]

ಆದರೆ, ಊರಿಗೆ ಮುಂಚೆ ಕರ್ನಾಟಕ ಸರ್ಕಾರವು ರಾಷ್ಟ್ರಪತಿಗಳಿಗೆ ಆಹ್ವಾನ ನೀಡಿರುವುದು ಅನೇಕರ ಹುಬ್ಬೇರಿಸಿದೆ. ಪ್ರಣಬ್ ಮುಖರ್ಜಿ ಅವರಿಗೆ ಮುಂಚಿತವಾಗಿ ವಿಷಯ ತಿಳಿಸಿ ನಂತರ ದಿನಾಂಕ ನಿಗದಿ ಪಡಿಸಿ ಮತ್ತೊಮ್ಮೆ ಆಹ್ವಾನ ನೀಡಿದರೂ ಅಚ್ಚರಿ ಪಡಬೇಕಾಗಿಲ್ಲ.

English summary
Chief Minister Siddaramaiah on Tuesday invited President Pranab Mukherjee to inaugurate Phase 1 of the Metro project. In a letter, he termed the launching of operations on the Green Line as a game changer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X