ಸಿದ್ದರಾಮಯ್ಯರಿಂದ ಪತ್ರಕರ್ತರಿಗೆ ವ್ಯಾಕರಣ ಪಾಠ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 18: ಸಿಎಂ ಗೃಹಕಚೇರಿಯಲ್ಲಿ ಪಕ್ಷದ ಸದಸ್ಯರೊಂದಿಗೆ ಚರ್ಚೆ ನಡೆಯಬೇಕಾದರೆ ಸಿಎಂ ಕನ್ನಡದ ಪಾಠ ಮಾಡಿದ್ದಾರೆ.

ಹಿಂದಿನ ಸರ್ಕಾರದವರಿಗೆ ಜ್ಞಾನ ಇರಲಿಲ್ಲ ಹಾಗಾಗಿ ಯಾವುದೇ ತೀರ್ಮಾನವನ್ನು ಸರಿಯಾಗಿ ತಗೆದುಕೊಳ್ಳುತ್ತಿರಲಿಲ್ಲ ಎಂದು ಪಕ್ಷದ ಸದಸ್ಯರು ಮಾತನಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.[ಆ ಮಸೀದಿ ಮುಂದೆ ಸಿಎಂ ಸಿದ್ದು ಹೋಗಿದ್ದೇಕೆ?]

cm

ಎಲ್ಲರಿಗೂ ಸಾಮಾನ್ಯವಾಗಿ ಜ್ಞಾನ ಇದ್ದೇ ಇರುತ್ತದೆ ಜ್ಞಾನ ಉದಯವಾಗ ಬೇಕು ಅಷ್ಟೇ ಅದು ಉದಯವಾದಾಗ ಒಳ್ಳೆ ಕೆಲಸಗಳಾಗುತ್ತವೆ ಎಂದಿದ್ದಾರೆ.[ನೋಟು ಸಮಸ್ಯೆ: ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ ಸಿದ್ದರಾಮಯ್ಯ]

ಜ್ಞಾನ+ ಉದಯ= ಜ್ಞಾನೋದಯ ಎಂದು ಸಿಎಂ ಹೇಳುತ್ತಿದ್ದಂತೆ ಪಕ್ಷದ ಸದಸ್ಯರೆಲ್ಲರು ನಗೆಗಡಲಲ್ಲಿ ಮಿಂದರು.

ಇದರ ಮಧ್ಯೆ ಪತ್ರಕರ್ತರೊಬ್ಬರು ಸವರ್ಣ ದೀರ್ಘ ಸಂಧಿ ಎಂದು ಹೇಳಿದಾಗ, ನ ಕಾರಕ್ಕೆ ಉಕಾರ ಆದೇಶವಾಗಿ ಬಂದಾಗ ಗುಣ ಸಂಧಿಯಾಗುತ್ತದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಪಕ್ಕದಲ್ಲಿಯೆ ಕುಳಿತಿದ್ದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಸೇರಿದಂತೆ ಎಲ್ಲ ಸದಸ್ಯರು ಕಿರುನಗೆ ಬೀರಿದರು.

English summary
CM Siddaramaiah grammer class. He told the answer of other's qustion jyana+ udaya= jyanodaya and its Gunasandi.
Please Wait while comments are loading...