ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರೇಸ್​ಕೋರ್ಸ್ ಕ್ಲಬ್ ಮೇಲೆ ಸಿಐಡಿ ದಾಳಿ

ಬೆಂಗಳೂರು ರೇಸ್​ಕೋರ್ಸ್ ಮೇಲೆ ಸಿಐಡಿ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ. ಕುದುರೆ ಬೆಟ್ಟಿಂಗ್, ಮಾದಕದ್ರವ್ಯ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿರುವ ಸಾಧ್ಯತೆಯಿದೆ.

By Mahesh
|
Google Oneindia Kannada News

ಬೆಂಗಳೂರು, ಮೇ 18: ರೇಸ್​ ಕೋರ್ಸ್ ರಸ್ತೆಯಲ್ಲಿರುವ ಬೆಂಗಳೂರು ಟರ್ಫ್ ಕ್ಲಬ್ ಮೇಲೆ ಸಿಐಡಿ ಪೊಲೀಸರು ಗುರುವಾರ(ಮೇ 18) ದಾಳಿ ನಡೆಸಿದ್ದಾರೆ. ಕುದುರೆ ಬೆಟ್ಟಿಂಗ್, ರೇಸ್ ಕುದುರೆಗೆ ಮಾದಕ ದ್ರವ್ಯ ನೀಡಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಏಪ್ರಿಲ್ 11ರಂದು ನಡೆದಿದ್ದ ರೇಸಿ​ನಲ್ಲಿ ಕ್ವೀನ್ ಲತೀಫ ಕುದುರೆ ರೇಸಿ​ನಲ್ಲಿ ಗೆದ್ದಿತ್ತು.ಆದರೆ, ಕುದುರೆಗೆ ಮಾದಕದ್ರವ್ಯ ನೀಡಲಾಗಿತ್ತು. ಡೋಪಿಂಗ್ ಪರೀಕ್ಷೆನಡೆಸಬೇಕು ಎಂದು ಎದುರಾಳಿ ಕುದುರೆಗಳ ಮಾಲೀಕರು ಆರೋಪಿಸಿದ್ದರು.

CID raid on Bangalore Turf Club Doping of horse controversy

ಈ ಕುರಿತಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಕುದುರೆಯ ಮೂತ್ರ ಪರೀಕ್ಷೆಗಾಗಿ ದೆಹಲಿಯ ನ್ಯಾಷನಲ್ ಡೋಪ್ ಟೆಸ್ಟಿಂಗ್ ಲ್ಯಾಬೋರೇಟರಿ ನೆರವು ಕೋರಲಾಗಿತ್ತು. ಲ್ಯಾಬೋರೇಟರಿ ಟೆಸ್ಟ್​ನಲ್ಲಿ ಕುದುರೆಗೆ ಮದ್ದು ನೀಡಿದ್ದು ಸಾಬೀತಾಗಿದ್ದು, ಇದರ ಆಧಾರದ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ಸಿಐಡಿಯ ಆರ್ಥಿಕ ಅಪರಾಧ ದಳದ ಅಧಿಕಾರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಕುಣಿಗಲ್ ನ ಸ್ಟಡ್ ಫಾರ್ಮ್ ನಿಂದ ಬಂದಿರುವ ಕಳೆದ ಮೂರು ವರ್ಷಗಳಿಂದ ರೇಸಿನಲ್ಲಿ ಪಾಲ್ಗೊಳ್ಳುತ್ತಿದೆ. 1920ರಲ್ಲಿ ಸ್ಥಾಪನೆಯಾದ ಕ್ಲಬ್ಬಿನ ಮರ್ಯಾದೆಗೆ ಹಾನಿಯಾಗುತ್ತಿದೆ. ಒಟ್ಟು ಮೂರು ಕುದುರೆಗಳ ಮೇಲೆ ಅನುಮಾನ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ.

English summary
A team of Criminal Investigation Department(CID) today(May 18) raided over office premises of Bangalore Turf Club. Bangalore Turf Club is locked in a controversy over an alleged doping scandal after a horse was tested positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X