ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳನ್ನು ಅಮೆರಿಕಾಕ್ಕೆ ಸಾಗಿಸುತ್ತಿದ್ದ 16 ಆರೋಪಿಗಳ ಬಂಧನ

By Vanitha
|
Google Oneindia Kannada News

ಬೆಂಗಳೂರು, ಫೆಬ್ರವರಿ,09: ನಕಲಿ ಪಾಸ್ ಪೋರ್ಟ್, ವೀಸಾ ಮಾಡಿಸಿ ಮಕ್ಕಳನ್ನು ಅಮೆರಿಕಾಕ್ಕೆ ಸಾಗಿಸುತ್ತಿದ್ದ ಜಾಲದ ಬೆನ್ನಟ್ಟಿದ ಬೆಂಗಳೂರು ಪೊಲೀಸರು ಮೂವರು ಮಹಿಳೆಯರು ಸೇರಿದಂತೆ 16 ಮಂದಿಯನ್ನು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪರಿಚಿತ ವ್ಯಕ್ತಿಗಳನ್ನು ಅಪ್ಪ ಅಮ್ಮ ಎಂದು ಸುಳ್ಳು ಹೇಳಿ ಅವರ ಹೆಸರಿನಲ್ಲಿ ಪಾಸ್ ಪೋರ್ಟ್ ಮಾಡಿಸಿ ಮಕ್ಕಳ ಸಾಗಾಣೆ ನಡೆಸುವ 16 ಮಂದಿ ಆರು ತಂಡಗಳಾಗಿ ಕೆಲಸ ಮಾಡುತ್ತಿದ್ದರು. ಇವರ ಕಾರ್ಯಚಟುವಟಿಕೆ ಮೇಲೆ ಒಂದು ವರ್ಷದಿಂದಲೂ ನಿಗಾ ಇರಿಸಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಕಮೀಷನರ್ ಪಿ. ಹರಿಶೇಖರನ್ ತಿಳಿಸಿದರು.[ಪಾಸ್ ಪೋರ್ಟ್ ಪಡೆಯಲು 4 ದಾಖಲೆಗಳು ಸಾಕೇ ಸಾಕು]

Child trafficking network 16 persons arrested in Bengaluru

ಬಂಧಿತ ಆರೋಪಿಗಳು:

ಜಯಮಹಲ್ ನ ಉದಯ್ ಈ ಗುಂಪಿನ ಮುಖಂಡ (44). ಈತ ತನ್ನ ಸ್ನೇಹಿತರಾದ ಹೊರಮಾವಿನ ಮೈಕೆಲ್, ಪವಿನ್, ರಾಜೇಶ್(ಸಹಕಾರ ನಗರ), ಸಿಮೋನ್, ಕುಶಾಲಪ್ಪ(ಆರ್ ಟಿ ನಗರ), ಗುಣಶೇಖರ್ (ಬಾಣಸವಾಡಿ), ಡೊಮಿನಿಕ್ (ಗೆದ್ದಲಹಳ್ಳಿ), ಜಾಯ್ಸನ್ (ಬೊಮ್ಮನಹಳ್ಳಿ), ಮಂಜುನಾಥ್ (ಮಹಾಲಕ್ಷ್ಮೀಪುರ), ಫ್ರಾನ್ಸಿಸ್ ಕ್ರಿಸ್ಟೋಫರ್ ಆನಂದ್ ಅಂಥೋಣಿ (ಕಮ್ಮನಹಳ್ಳಿ), ಸಂಗೀತಾ ಪ್ರಕಾಶ್ (ರಾಮಮೂರ್ತಿ ನಗರ), ಲತಾ ವೇಮ ರೆಡ್ಡಿ (ಎಚ್ಎಎಲ್), ಸುಧೀರ್ ಕುಮಾರ್, ಭಾನು ಪ್ರಕಾಶ್ (ಬನಶಂಕರಿ), ವೀಣಾ ಪ್ರಕಾಶ್ (ಗಿರಿನಗರ)

ಇವರು ಮಾಡುತ್ತಿದ್ದದ್ದು ಏನು?

ಈ 16 ಮಂದಿ ತಂಡವೂ ಪೂರ್ವ ನಿಯೋಜಿತದಂತೆ ನಕಲಿ ಅಪ್ಪ ಅಮ್ಮರೊಂದಿಗೆ ಮಕ್ಕಳನ್ನು ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರಿಗೆ ನೀಡಲು ಕಳುಹಿಸುತ್ತಿದ್ದರು. ಮಕ್ಕಳನ್ನು ಅಮೆರಿಕಾಕ್ಕೆ ಕಳುಹಿಸಲು ಹೆತ್ತ ತಂದೆ ತಾಯಿಯಿಂದ 25 ಲಕ್ಷ ಹಣ ಪಡೆಯುತ್ತಿದ್ದರು. ಇದುವರೆಗೂ ಉತ್ತರ ಪ್ರದೇಶ, ಬಿಹಾರ, ಗುಜರಾತ್ ರಾಜ್ಯದ 10 ವರ್ಷದೊಳಗಿನ 30 ಮಕ್ಕಳನ್ನು ಅಮೆರಿಕಾಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.[ಭಾರತದ ಹೆಣ್ಣು ಮಕ್ಕಳ ವ್ಯಥೆ ಬಿಚ್ಚಿಡುವ ವರದಿಯಲ್ಲೇನಿದೆ?]

ಆರೋಪಿಗಳು ಹೇಳುವುದೇನು?

ಉತ್ತರ ಪ್ರದೇಶ, ಗುಜರಾತ್, ಬಿಹಾರ ರಾಜ್ಯದ ಕೆಲವರು ಪ್ರವಾಸಿ ವೀಸಾದಡಿ ಅಮೆರಿಕಾಕ್ಕೆ ಹೋಗಿದ್ದಾರೆ. ಆದರೆ ಇವರು ಪ್ರವಾಸಿ ವೀಸಾದ ಅವಧಿ ಮುಗಿದಿದ್ದರೂ ಅಲ್ಲಿಯೇ ನೆಲೆಸಿದ್ದಾರೆ. ಅವರು ತಮ್ಮ ಮಕ್ಕಳನ್ನು ಕರೆಸಿಕೊಳ್ಳಲು ನಮ್ಮನ್ನು ಸಂಪರ್ಕಿಸುತ್ತಿದ್ದರು ಎಂದು ಹೇಳಿದ್ದಾರೆ.

ಪಿ. ಹರಿಶೇಖರನ್ ಹೇಳುವುದೇನು?

ಈಗಾಗಲೇ ಈ ವಿಷಯದಡಿ ಅಮೆರಿಕಾ ಪೊಲೀಸರನ್ನು ಸಂಪರ್ಕಿಸಿದ್ದು, ಅಕ್ರಮವಾಗಿ ರವಾನೆಯಾಗಿರುವ ಮಕ್ಕಳ ವಿವರ ಪರಿಶೀಲಿಸುವಂತೆ ಹೇಳಲಾಗಿದೆ. ಇಲ್ಲಿ ಸುಮಾರು 14 ವಿಶೇಷ ತನಿಖಾ ತಂಡಗಳ ಕಾರ್ಯಾಚರಣೆಯಿಂದ ಈ ಕೃತ್ಯ ಬಯಲಿಗೆ ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಅಧಿಕಾರಿ ಪಿ. ಹರಿಶೇಖರನ್ ತಿಳಿಸಿದರು.

English summary
Bengaluru Police crack Child trafficking network, arrest gang of 16 persons including 3 women on Monday, February 08th. They gang was involved in illegal transportation of children to USA. Uday Pratap Singh is the leader of this team. He had sent 30 children abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X