ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರವಿಂದ ಜಾಧವ್‌ ಅವರ ವಿರುದ್ಧ ಭೂ ಹಗರಣ ಆರೋಪ?

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಆಗಸ್ಟ್ 23 : ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರ ವಿರುದ್ಧ ಅಧಿಕಾರ ದುರುಪಯೋಗದ ಆರೋಪ ಕೇಳಿಬಂದಿದೆ. ಜಾಧವ್ ಅವರ ತಾಯಿ ಆನೇಕಲ್‌ನಲ್ಲಿ ಖರೀದಿ ಮಾಡಿರುವ ಸರ್ಕಾರಿ ಭೂಮಿ ಈಗ ವಿವಾದಕ್ಕೆ ಕಾರಣವಾಗಿದೆ.

ಅರವಿಂದ್ ಜಾಧವ್ ಅವರ ತಾಯಿ ತಾರಾಬಾಯಿ ಅವರು ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿಯಲ್ಲಿ ಖರೀದಿ ಮಾಡಿರುವ ಸರ್ಕಾರಿ ಭೂಮಿಗೆ ದಾಖಲಾತಿಗಳನ್ನು ಸಿದ್ಧಪಡಿಸಲು ಅರವಿಂದ್ ಜಾಧವ್ ಅವರು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂಬುದು ಆರೋಪ. [ಓಡಿ ಹೋದ ಮುಖ್ಯ ಕಾರ್ಯದರ್ಶಿ ಜಾಧವ್!]

Arvind Jadhav

ಇಂದು ಸ್ಪಷ್ಟನೆ : ತಮ್ಮ ಮೇಲೆ ಬಂದಿರುವ ಆರೋಪಗಳ ಕುರಿತು ಅರವಿಂದ್ ಜಾಧವ್ ಅವರು ಸರ್ಕಾರಕ್ಕೆ ಮಂಗಳವಾರ ವರದಿ ನೀಡಲಿದ್ದಾರೆ ಮತ್ತು ದಾಖಲಾತಿಗಳನ್ನು ಸಿದ್ಧಪಡಿಸಿದ ವಿಚಾರದಲ್ಲಿ ಸ್ಪಷ್ಟನೆಗಳನ್ನು ನೀಡಲಿದ್ದಾರೆ.[ಅಕ್ರಮ-ಸಕ್ರಮ ದಂಡದಲ್ಲಿ ಕಡಿತ, ಅರ್ಜಿ ಹಾಕಿ]

ಅಧಿಕಾರಿ ವರ್ಗಾವಣೆ? : ಅರವಿಂದ್ ಜಾಧವ್ ಅವರು ಭೂಮಿಯ ದಾಖಲಾತಿಗಳ ಅಕ್ರಮದ ಬಗ್ಗೆ ಮಾಹಿತಿ ತಿಳಿದ ಸರ್ವೆ ಮತ್ತು ಭೂದಾಖಲೆ ಆಯುಕ್ತರಾಗಿದ್ದ ಮುನೀಶ್‌ ಮೌದ್ಗಿಲ್ ಅವರು, ಈ ಪ್ರಕ್ರಿಯೆ ಅಕ್ರಮ ಎಂದು ಬರೆದು ಕಡತ ಬಾಕಿ ಇಟ್ಟಿದ್ದರು. ಆದ್ದರಿಂದ, ಅವಧಿಗೆ ಮೊದಲೇ ಅವರನ್ನು ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಲಾಯಿತು ಎಂಬ ಆರೋಪವೂ ಇದೆ.[ನಕಲಿ ದಾಖಲೆ ಮೂಲಕ ಬಿಡದಿಯಲ್ಲಿ 5 ಎಕರೆ ಭೂಮಿ ಗುಳುಂ!]

ಏನಿದು ವಿವಾದ? : ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿಯ ಸರ್ವೆ ನಂ 29/ಪಿ 27, 29/ಪಿ 28, 118, 119 ರಲ್ಲಿ ಒಟ್ಟು 76.36 ಎಕರೆ ಸರ್ಕಾರಿ ಭೂಮಿ ಇತ್ತು. ಈ ಭೂಮಿಯನ್ನು 58 ಜನರಿಗೆ ಮಂಜೂರು ಮಾಡಲಾಗಿದ್ದು, ಈ ಜಮೀನಿನಲ್ಲಿ 19 ಎಕರೆಯನ್ನು 2000 ಇಸವಿಯಲ್ಲಿ ಅರವಿಂದ್ ಜಾಧವ್ ಅವರ ತಾಯಿ ರಾಧಾಬಾರಿ ಖರೀದಿ ಮಾಡಿದ್ದರು.[ಭೂಕಬಳಿಕೆ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ]

ಈ ಭೂಮಿ ಮಂಜೂರಾತಿ ಕುರಿತು ಯಾವುದೇ ಮೂಲ ದಾಖಲೆಗಳು ಇರಲಿಲ್ಲ. ತಾರಾಬಾಯಿ ಅವರು ಪಕ್ಕಾ ಪೋಟಿ ಹಾಗೂ ಆರ್‌ಟಿಸಿಗಾಗಿ ಅರ್ಜಿ ಸಲ್ಲಿಸಿದಾಗ ಮೂಲದಾಖಲೆ, ಮಂಜೂರಾತಿ ದಾಖಲೆ ಮುಂತಾದವುಗಳು ಇಲ್ಲ ಎಂಬುದು ತಿಳಿಯಿತು.

ಅರವಿಂದ ಜಾಧವ್ ಅವರು ಮುಖ್ಯಕಾರ್ಯದರ್ಶಿಯಾದ ಬಳಿಕ ದಾಖಲೆ ಪುನರ್ ನಿರ್ಮಾಣ ಮಾಡುವ ಪ್ರಕ್ರಿಯೆ ಆರಂಭಿಸಿದರು. ಸರ್ವೆ ನಂ 29ರಲ್ಲಿ ಶಾಂತಮ್ಮ ಮತ್ತು ಪುಟ್ಟಸ್ವಾಮಯ್ಯ ಎಂಬುವವರಿಗೆ ಭೂಮಿ ಮಂಜೂರು ಮಾಡಿದ ದಾಖಲೆಯನ್ನು ಪುನರ್ ನಿರ್ಮಿಸುವ ಕೆಲಸವನ್ನು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಮೇಲಾಧಿಕಾರಿಗಳ ಸೂಚನೆಯಂತೆ ಆರಂಭಿಸಿದರು.

2016ರ ಮೇ 4ರಂದು ಆನೇಕಲ್ ತಹಶೀಲ್ದಾರ್‌ಗೆ ಸೂಚನೆ ನೀಡಿದ ಉಪವಿಭಾಗಾಧಿಕಾರಿಗಳು ದರಖಾಸ್ತು ಪೋಡಿ ಮಾಡುವಂತೆ ಆದೇಶ ನೀಡಿದರು. ದಾಖಲೆಗಳನ್ನು ಸಿದ್ಧಪಡಿಸಿ ಭೂಮಿ ತಂತ್ರಾಶಕ್ಕೆ ಅಳವಡಿಕೆ ಮಾಡುವಾಗ ಅದು ಹೊಸ ದಾಖಲೆಗಳನ್ನು ತೆಗೆದುಕೊಳ್ಳಲಿಲ್ಲ.

ಈ ಹಂತದಲ್ಲಿ ಒಂದು ಗ್ರಾಮದ ಸರ್ವೆ ನಂಬರ್‌ ಅನ್ನು ಮತ್ತೊಂದು ಗ್ರಾಮಕ್ಕೆ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ. ಆನೇಕಲ್ ತಹಶೀಲ್ದಾರ್ ಅವರು ತಂತ್ರಾಶದಲ್ಲಿ ದಾಖಲೆ ಅಪ್‌ಲೋಡ್ ಆಗುತ್ತಿಲ್ಲ ಎಂದು ಸರ್ವೆ ಮತ್ತು ಭೂ ದಾಖಲೆ ಆಯುಕ್ತ ಮುನೀಶ್ ಮೌದ್ಗಿಲ್ ಅವರಿಗೆ ಮಾಹಿತಿ ನೀಡಿದ್ದರು.

ಆಯುಕ್ತರು ಮೂಲ ದಾಖಲೆಗಳನ್ನು ನೋಡಿದಾಗ ಸರ್ವೆ ನಂಬರ್ ಬದಲಾವಣೆ ಆಗಿರುವುದು ಬೆಳಕಿಗೆ ಬಂದಿದೆ. ಈ ದಾಖಲೆಗಳ ಪ್ರಕ್ರಿಯೆ ಅಕ್ರಮ ಎಂದು ಬರೆದು ಅವರು ಕಡತ ಬಾಕಿ ಇಟ್ಟಿದ್ದರು. ಆದ್ದರಿಂದ, ಅವಧಿಗೆ ಮೊದಲೇ ಅವರನ್ನು ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಲಾಯಿತು ಎಂಬ ಆರೋಪವೂ ಕೇಳಿಬರುತ್ತಿದೆ.

English summary
Government land encroachment allegation against Karnataka Chief Secretary Arvind Jadhav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X