ಕಾವೇರಿ ತೀರ್ಪು: ಬೆಂಗಳೂರಲ್ಲಿ ಬೀದಿಗಿಳಿಯಲಿದೆ ಜೆಡಿಎಸ್

Written By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 06: ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ರಾಜ್ಯದ ಜನತೆಗೆ ಮಾರಕವಾಗಿದ್ದು ಕರ್ನಾಟಕ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಆಗ್ರಹಿಸಿ ಜಾತ್ಯತೀತ ಜನತಾದಳ ಸೆಪ್ಟೆಂಬರ್ 7 ರಂದು ಪ್ರತಿಭಟನೆ ನಡೆಸಲಿದೆ.

ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಗೆ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಜೆಡಿಎಸ್ ನ ಕಾರ್ಯಾಧ್ಯಕ್ಷ ಎಂ ಎಸ್ ನಾರಾಯಣ ರಾವ್, ಜೆಡಿಎಸ್ ಬೆಂಗಳೂರು ಘಟಕದ ಅಧ್ಯಕ್ಷ ರತನ್ ಸಿಂಗ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ.[ಬಂಗಾರಪ್ಪ ತೆಗೆದುಕೊಂಡ ನಿರ್ಧಾರ ಸಿದ್ದುರಿಂದ ಸಾಧ್ಯವೆ?]

jds

ರಾಜ್ಯದೆಲ್ಲೆಡೆ ತಮಿಳುನಾಡಿಜಗೆ ನೀರು ಬಿಡದಂತೆ ಆಗ್ರಹ ಹೆಚ್ಚಾಗಿದೆ. ಮುಂದಿನ 10 ದಿನಗಳ ಕಾಲದಲ್ಲಿ 13.5 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್, 05 ರಂದು ಆದೇಶ ನೀಡಿತ್ತು.[ಕಾವೇರಿ ವಿವಾದ : ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್]

ಅಂದರೆ ಪ್ರತಿದಿನ 15 ಸಾವಿರ ಕ್ಯೂಸೆಕ್ [ ಟಿಎಂಸಿ= 11 574 ಕ್ಯೂಸೆಕ್ಸ್] ನೀರನ್ನು ಕರ್ನಾಟಕ ಹರಿಸಬೇಕಾಗಿತ್ತು.. ಕಾವೇರಿ ಪಾತ್ರದಿಂದ 50.52 ಟಿಎಂಸಿ ನೀರು ನೀಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ನೀಡಿತ್ತು. ಇದಾದ ಮೇಲೆ ಜನರ ಆಕ್ರೋಶದ ಕಟ್ಟೆ ಒಡೆದಿತ್ತು.

English summary
Karnataka JDS has been organised to protest against the Supreme Court Judgement regarding the Cauvery River Water distribution on September 7 at Mahathma Gandhi Statue, Mourya Hotel Circle (Anand Rao Circle), Bengaluru.
Please Wait while comments are loading...