ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ವಿವಾದ : ಹೊಸೂರು, ಮೈಸೂರು ರಸ್ತೆಗೆ ಕಾಲಿಡಬೇಡಿ!

By Mahesh
|
Google Oneindia Kannada News

ಬೆಂಗಳೂರು, ಸೆ. 06: ಟ್ರಾಫಿಕ್ ಜಾಮ್ ಗಳಿಂದ ಹೆಸರು ಕೆಡಿಸಿಕೊಂಡಿರುವ ಮೈಸೂರು ಹಾಗೂ ಹೊಸೂರು ರಸ್ತೆಗಳತ್ತ ಮಂಗಳವಾರ ಸುಳಿಯಬೇಡಿ ಎಂಬ ಎಚ್ಚರಿಕೆ ಸಂದೇಶ ಬಂದಿದೆ. ಕಾವೇರಿ ನದಿ ವಿವಾದದ ಬಿಸಿಯಲ್ಲಿ ರಸ್ತೆಗಳು ಹೋರಾಟಗಾರರಿಂದ ಬಂದಿವೆ.

ಸೆ.06ರಂದು ಮಂಡ್ಯ ಬಂದ್ ಆಚರಿಸಲಾಗುತ್ತಿದೆ. ಸಂಜಯವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಖಂಡಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಚನ್ನಪಟ್ಟಣದಲ್ಲಿ ರಸ್ತೆ ತಡೆಯಲಾಗಿದೆ. [ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್]

Cauvery issue: Avoid Mysore, Hosur roads today(September 06)

ಹೆಚ್ಚುವರಿಯಾಗಿ 2,400ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಮಂಡ್ಯಕ್ಕೆ ಕಳಿಸಲಾಗಿದೆ. [ಕೆಆರ್ ಎಸ್, ಬೃಂದಾವನ ಗಾರ್ಡನ್ ಗೆ ಬಿಗಿ ಭದ್ರತೆ]

ಮೈಸೂರು ರಸ್ತೆ ಸ್ಯಾಟಲೆಟ್ ಬಸ್ ನಿಲ್ದಾಣದಲ್ಲಿ ತಮಿಳುನಾಡು ಸರ್ಕಾರಿ ಬಸ್ ಗಳ ಮೇಲೆ 'ಕಾವೇರಿ ನಮ್ಮದು' ಎಂದು ಬರೆದು ತಡೆ ಹಿಡಿಯಲಾಗಿದೆ. [ಕಾವೇರಿ ವಿವಾದ]

ಮಂಡ್ಯ ಬಂದ್ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಪೊಲೀಸರು ಫೇಸ್ ಬುಕ್ ಪುಟ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಹೊಸೂರು ರಸ್ತೆ ಕೂಡಾ ಬಂದ್: ರಸ್ತೆ ತಡೆಯಿಂದಾಗಿ ಹೊಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ಸುಮಾರು 700ಕ್ಕೂ ಅಧಿಕ ಬಸ್ ಗಳ ಸಂಚಾರ ಸ್ಥಗಿತವಾಗಿವೆ.

ಟ್ರಾಫಿಕ್ ಜಾಮ್ ಬಗ್ಗೆ ಮಾಹಿತಿ ಪಡೆಯಲು ಬೆಂಗಳೂರು ಟ್ರಾಫಿಕ್ ಪೊಲೀಸ್ ಫೇಸ್ ಬುಕ್ ಪುಟ ನೋಡಿ

(ಒನ್ಇಂಡಿಯಾ ಸುದ್ದಿ)

English summary
Traffic movement has been severely affected on the roads leading to Mysore and Hosur due to protests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X