ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಗತಿಕ ಪರೀಕ್ಷೆ ಪಾಸಾದ ಬೆಂಗಳೂರಿನ ಅನನ್ಯ ಮತ್ತು ವಿಭಾ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 18: ಕೇಂಬ್ರಿಡ್ಜ್ ಐಜಿಸಿಎಸ್‍ಇ, ಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಎಎಸ್ ಲೆವೆಲ್ ಮತ್ತು ಕೇಂಬ್ರಿಡ್ಜ್ ಎ ಲೆವೆಲ್ ಜಾಗತಿಕ ಮಟ್ಟದ ಸರಣಿ ಪರೀಕ್ಷೆಯಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿನಿಯರು ಪಾಸಾಗಿದ್ದಾರೆ.

ನವೆಂಬರ್ 2015, ಮಾರ್ಚ್ 2016 ಮತ್ತು ಜೂನ್ 2016 ರಲ್ಲಿ ನಡೆದ ಕೇಂಬ್ರಿಡ್ಜ್ ಜಾಗತಿಕ ಮಟ್ಟದ ಸರಣಿ ಪರೀಕ್ಷೆಗಳಲ್ಲಿ ಭಾರತದ 41 ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ದೇಶದ 101 ಭಾರತೀಯ ವಿದ್ಯಾರ್ಥಿಗಳು ಅಗ್ರಗಣ್ಯರಾಗಿದ್ದಾರೆ. ಈ ಪೈಕಿ ಬೆಂಗಳೂರಿನ ಮಲ್ಯ ಅದಿತಿ ಇಂಟರ್ ನ್ಯಾಷನಲ್ ಶಾಲೆಯ ಅನನ್ಯ ಪೊದ್ದಾರ್ ಸಮಾಜಶಾಸ್ತ್ರದಲ್ಲಿ ಮತ್ತು ಗ್ರೀನ್ ವುಡ್ ಪ್ರೌಢಶಾಲೆಯ ವಿಭಾ ರೊಿಲ್ಲಾ ಅವರು ಗಣಿತ ವಿಷಯದಲ್ಲಿ ಅತ್ಯಧಿಕ ಅಂಕಗಳೊಂದಿಗೆ ಸಾಧಕ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ.

Cambridge International Examinations : Two Bengaluru Students Top in World

ಈ ಟಾಪರ್ ವಿದ್ಯಾರ್ಥಿಗಳು ಅತ್ಯುತ್ತಮ ಶೈಕ್ಷಣಿಕ ಸಾಧಕರು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಔಟ್ ಸ್ಟ್ಯಾಂಡಿಂಗ್ ಬ್ರಿಡ್ಜ್ ಲರ್ನರ್ ಪ್ರಮಾಣ ಪತ್ರವನ್ನೂ ಪಡೆದಿದ್ದಾರೆ.

ಕೇಂಬ್ರಿಡ್ಜ್ ಇಂಟರ್‍ನ್ಯಾಷನಲ್ ಪರೀಕ್ಷೆಗಳ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕರಾದ ರುಚಿತಾ ಘೋಷ್ ಅವರು ಮಾತನಾಡಿ, 'ಭಾರತೀಯ ವಿದ್ಯಾರ್ಥಿಗಳು ಅತ್ಯಂತ ಯಶಸ್ವಿಯಾಗಿ ಈ ಪರೀಕ್ಷೆಯಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ.

ಶಿಕ್ಷಕರ ಅರ್ಪಣಾ ಮನೋಭಾವ ಮತ್ತು ಬದ್ಧತೆ ಹಾಗೂ ಪೋಷಕರ, ಸ್ನೇಹಿತರ ಸಂಪೂರ್ಣ ಸಹಕಾರಗಳ ಪರಿಣಾಮ ಕೇಂಬ್ರಿಡ್ಜ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಶಸ್ಸು ಗಳಿಸಿರುವುದಕ್ಕೆ ಸಾಕ್ಷಿಯಾಗಿವೆ. ಈ ವರ್ಷ ಇಂತಹ ಸಾಧನೆ ಮಾಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ನಾವು ಶುಭಾಶಯಗಳನ್ನು ಹೇಳುತ್ತಿದ್ದೇವೆ. ಅದೇ ರೀತಿ ಅವರ ಭವಿಷ್ಯ ಉನ್ನತಿಗೆ ತಲುಪಲಿ ಎಂದು ಹಾರೈಸುತ್ತೇವೆ' ಎಂದು ತಿಳಿಸಿದರು.

ಈ ಅತ್ಯುತ್ತಮವಾದ ಫಲಿತಾಂಶಗಳು ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಕೇಂಬ್ರಿಡ್ಜ್ ಅರ್ಹತೆಯ ಜನಪ್ರಿಯತೆ ಹೆಚ್ಚಾಗಲು ಕಾರಣವಾಗಿದೆ. ಭಾರತದಲ್ಲಿ 370 ಕ್ಕೂ ಹೆಚ್ಚು ಕೇಂಬ್ರಿಡ್ಜ್ ಶಾಲೆಗಳಿವೆ. 2015 ರಿಂದ ಕೇಂಬ್ರಿಡ್ಜ್ ಐಜಿಸಿಎಸ್‍ಇ, ಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಎಎಸ್ ಲೆವೆಲ್ ಮತ್ತು ಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಎ ಲೆವೆಲ್ ನಂಥ ಕೇಂಬ್ರಿಡ್ಜ್ ಅರ್ಹತಾ ಪರೀಕ್ಷೆಗಳ ಪ್ರವೇಶತಿಯಲ್ಲಿ ಶೇ. 17 ರಷ್ಟು ಹೆಚ್ಚಳ ಕಂಡುಬಂದಿದೆ.

ಭಾರತದಲ್ಲಿ ಕೇಂಬ್ರಿಡ್ಜ್ ಐಜಿಸಿಎಸ್‍ಇನ ಅತ್ಯಂತ ಜನಪ್ರಿಯವಾದ ವಿಷಯಗಳೆಂದರೆ:- ಇಂಗ್ಲೀಷ್ ಮೊದಲ ಭಾಷೆ, ಗಣಿತ, ಎರಡನೇ ಭಾಷೆಯಾಗಿ ಹಿಂದಿ, ಭೌತಶಾಸ್ತ್ರ ಮತ್ತು ರಾಸಾಯನಶಾಸ್ತ್ರ.(ಒನ್ಇಂಡಿಯಾ ಸುದ್ದಿ)

English summary
Two city students Ananya Poddar from Mallya Aditi International School and Vibha Rohilla from Greenwood High School have been awarded the ‘Top in World’ by Cambridge International Examinations (CIE) in the IGSCE, AS Level and ‘A’ level examinations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X