ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2019ರ ವೇಳೆಗೆ ಕರ್ನಾಟಕ ವಿದ್ಯುತ್ ಸ್ವಾವಲಂಬಿ ರಾಜ್ಯ : ಡಿಕೆಶಿ

By Ananthanag
|
Google Oneindia Kannada News

ಬೆಂಗಳೂರು,ಜನವರಿ 10: ಕರೆಂಟ್ ಕಣ್ಣಾಮುಚ್ಚಾಲೆ ಆಟಕ್ಕೆ ಇಂಧನ ಸಚಿವರು ತೆರೆ ಎಳೆಯಲು ಮುಂದಾಗಿದ್ದು ಮುಂದಿನ ವರ್ಷಾಂತ್ಯದೊಳಗೆ ನಮ್ಮ ರಾಜ್ಯ ಇಂಧನ ಸ್ವಾವಲಂಬಿ ರಾಜ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಸುದ್ದಿವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ, ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಕರ್ನಾಟಕದ ಇಂಧನ ಇಲಾಖೆ ನೀಡುತ್ತಿರುವ ಆದ್ಯತೆ ಕ್ರಮಗಳಿಂದ ಮುಂದಿನ ವರ್ಷಾಂತ್ಯದೊಳಗೆ ನಮ್ಮ ರಾಜ್ಯ ಇಂಧನ ಸ್ವಾವಲಂಬಿ ರಾಜ್ಯವಾಗಲಿದೆ ಎಂಬ ಆಶಾಭಾವನೆಯಿದೆ. ಪ್ರಸ್ತುತ ವಿದ್ಯುತ್ ಪೂರೈಕೆಯಲ್ಲಿ ಎದುರಾಗಿರುವ ಕೊರತೆ ನೀಗಿಸಲು ಜಿಂದಾಲ್ ಪವರ್ ಸಂಸ್ಥೆಯೊಂದಿಗೆ ತಾತ್ಕಾಲಿಕ ಒಪ್ಪಂದ ಮಾಡಿಕೊಂಡು 600 ಮೆಗಾ ವ್ಯಾಟ್ ತರಿಸಿಕೊಳ್ಳುತ್ತಿದ್ದು, ಮುಂದಿನ ಆರು ತಿಂಗಳ ಕಾಲ ಈ ಸಂಸ್ಥೆ ವಿದ್ಯುತ್ ಪೂರೈಸಲಿದೆ ಎಂದರು.[ಜರ್ಮನಿಯ ವಿದ್ಯುತ್ ಸ್ಥಾವರಕ್ಕೆ ಡಿಕೆ ಶಿವಕುಮಾರ್ ಭೇಟಿ]

By 2019, state power will be self-sustaining state: DK Shivakumar

ಇನ್ನು ಮುಂದಿನ ವರ್ಷದ ವೇಳೆಗೆ ಯರಮರಸ್ 1600 ಮೆಗಾವ್ಯಾಟ್, ಕೂಡಗಿಯ 1200 ಮೆಗಾವ್ಯಾಟ್ ಹಾಗೂ ಬಳ್ಳಾರಿಯ 700 ಮೆ.ವ್ಯಾ ವಿದ್ಯುತ್ ಪೂರೈಕೆಯಾಗಲಿದೆ ಎಂದರು.[ಒಂದು ವರ್ಷದಲ್ಲಿ ತುಮಕೂರು ಸೌರ ವಿದ್ಯುತ್ ಘಟಕ ಪೂರ್ಣ']

ರಾಜ್ಯ ಸರ್ಕಾರ ಸೌರವಿದ್ಯುತ್ ತಯಾರಿಕೆಗೆ ಉತ್ತೇಜನ ಕ್ರಮಗಳನ್ನು ಅಳವಡಿಸಿದ್ದು, ಶೀಘ್ರವೇ ಫಲ ನೀಡಲಿದೆ ಇದರಿಂದ ಮುಂದಿನ ವರ್ಷದ ವೇಳೆಗೆ 1 ಸಾವಿರ ಮೆಗಾವ್ಯಾಟ್ ವಿದ್ಯುತ್ ದೊರೆಯಲಿದೆ ಹೀಗಾಗಿ ಮುಂದಿನ ವರ್ಷಾಂತ್ಯದ ವೇಳೆ ರಾಜ್ಯ ವಿದ್ಯುತ್ ಸ್ವಾವಲಂಭಿ ರಾಜ್ಯವಾಗಲಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

English summary
By 2019, state power will be self-sustaining state. energy minister DK Shivakumar said in Bengaluru one of the tv program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X