ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರಿಗೆ ದರ ಏರಿಕೆ ಬಿಸಿ ಮುಟ್ಟಿಸಲಿದೆ ಜಲ ಮಂಡಳಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03 : ಬೆಂಗಳೂರಿನ ಜನರಿಗೆ ದರ ಏರಿಕೆಯ ಬಿಸಿ ಮುಟ್ಟಿಸಲು ಜಲಮಂಡಳಿ ಸಿದ್ಧವಾಗಿದೆ. ಕಟ್ಟಡಗಳಿಗೆ ನೀರಿನ ಸಂಪರ್ಕ ಪಡೆಯಲು ಏಕ ಕಂತಿನಲ್ಲಿ ಪಾವತಿಸುವಂತಹ ಪ್ರೋರಾಟ ಶುಲ್ಕವನ್ನು ಪರಿಷ್ಕರಣೆ ಮಾಡಲು ಪ್ರಸ್ತಾವನೆ ಸಿದ್ಧಪಡಿಸಿದೆ.

ಹೊಸದಾಗಿ ಕಟ್ಟುವ ಮನೆ, ಅಪಾರ್ಟ್‌ಮೆಂಟ್‌, ವಾಣಿಜ್ಯ ಕಟ್ಟಡಗಳು ಸೇರಿದಂತೆ ಎಲ್ಲ ಮಾದರಿಯ ಕಟ್ಟಡಗಳಿಗೆ ನೀರಿನ ಸಂಪರ್ಕವನ್ನು ಪಡೆಯಲು ಜಲಮಂಡಳಿಗೆ ಪ್ರೋರಾಟ ಶುಲ್ಕವನ್ನು ಜನರು ಪಾವತಿ ಮಾಡಬೇಕು. ಈ ಶುಲ್ಕವನ್ನು 2008ರ ನಂತರ ಪರಿಷ್ಕರಣೆ ಮಾಡಿಲ್ಲ, ಸದ್ಯ, ಇದನ್ನು ದುಪ್ಪಟ್ಟು ಹೆಚ್ಚಿಸಲು ಜಲಮಂಡಳಿ ನಿರ್ಧರಿಸಿದೆ. [ಬೆಂಗಳೂರಲ್ಲಿ ದುಬಾರಿಯಾಗಲಿದೆ ಆಸ್ತಿ ಖರೀದಿ]

 bwssb

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಬೆಂಗಳೂರು ದಿನೇ ದಿನೇ ಬೆಳೆಯುತ್ತಿದೆ. ಆದ್ದರಿಂದ, ಪ್ರೋರಾಟ ಶುಲ್ಕವನ್ನು ಹೆಚ್ಚಳ ಮಾಡಿ ಜಲಮಂಡಳಿಗೆ ಆದಾಯ ಸಂಗ್ರಹಣೆ ಮಾಡಲು ಶುಲ್ಕವನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ದರ ಹೆಚ್ಚಳಕ್ಕೆ ಅನುಮತಿ ಸಿಕ್ಕರೆ 2016ರ ಜನರಿಗೆ 1ರಿಂದ ನೂತನ ದರ ಜಾರಿಗೆ ಬರಲಿದೆ. [ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?]

ಈಗ ದರ ಎಷ್ಟಿದೆ? : ಪ್ರಸ್ತುತ ವಾಸದ ಕಟ್ಟಡಗಳಿಗೆ ನೆಲ ಹಾಗೂ ಎರಡು ಅಂತಸ್ತು ಇದ್ದರೆ ಪ್ರತಿ ಚದರ ಮೀಟರ್‌ಗೆ 150 ರೂ., ಅಪಾರ್ಟ್‌ಮೆಂಟ್‌ಗಳಿಗೆ ರೂ.200, ವಾಣಿಜ್ಯ ಕಟ್ಟಡಗಳಿಗೆ ರೂ. 300 ಶುಲ್ಕವನ್ನು ಪಾವತಿ ಮಾಡಬೇಕಾಗಿದೆ. ಶುಲ್ಕ ಹೆಚ್ಚಳವಾದರೆ ದುಪ್ಪಟ್ಟ ಹಣ ಪಾವತಿ ಮಾಡಬೇಕಿದೆ.

English summary
Bangalore Water Supply and Sewerage Board (BWSSB) may hike pro-rata charges soon. Pro-rata charges are one-time service charges collected by BWSSB for providing new drinking water and sanitary connections to buildings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X